ವಾಷಿಂಗ್ಟನ್: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ವೇದಿಕೆ ಟ್ರೂಥ್‌ನಲ್ಲಿ ತಿಳಿಸಿದ್ದಾರೆ.
ದಾಳಿ ಮುಂದುವರೆಯುತ್ತದೆ-ಟ್ರಂಪ್: “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಜನರು ಮಾತ್ರವಲ್ಲ, ಎಲ್ಲಾ ಅಮೆರಿಕನ್ನರು ಖಮೇನಿ ಮತ್ತವರ ರಕ್ತಪಿಪಾಸು ಗುಂಪಿನಿಂದ ಕೊಲ್ಲಲ್ಪಟ್ಟ ಅಥವಾ ಅಂಗವಿಕಲರಾದ ಜಗತ್ತಿನಾದ್ಯಂತದ ಅನೇಕ ದೇಶಗಳ ಜನರಿಗೆ ದೊರೆದ ನ್ಯಾಯ. ಖಮೇನಿ ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಇರಾನಿನ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಏಕೈಕ ದೊಡ್ಡ ಅವಕಾಶ. ಇರಾನ್‌ನ ಐಆರ್‌ಜಿಸಿ, ಸೇನೆ ಮತ್ತಿತರ ಭದ್ರತಾ ಮತ್ತು ಪೊಲೀಸ್ ಪಡೆಗಳು ಇನ್ನು ಮುಂದೆ ನಮ್ಮೊಂದಿಗೆ ಹೋರಾಡಲು ಬಯಸುವುದಿಲ್ಲ. ಭಾರೀ ಮತ್ತು ನಿಖರವಾದ ಬಾಂಬ್ ದಾಳಿ ವಾರವಿಡೀ ನಿರಂತರವಾಗಿ ಮುಂದುವರಿಯುತ್ತದೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಖಮೇನಿ ಮಗಳು, ಅಳಿಯ, ಮೊಮ್ಮಗಳು, ಸೊಸೆಯೂ ಹತ್ಯೆ: ಈ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯನೂ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ವರದಿ ಮಾಡಿರುವುದನ್ನು ಟೈಮ್ಸ್ ಆಫ್ ಇಸ್ರೇಲ್ ಉಲ್ಲೇಖಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post