ಮೇ 5ರಂದು ರಿಲೀಸ್ ಆಗಲಿರುವ ದಿ ಕೇರಳ ಸ್ಟೋರಿ ಸಿನಿಮಾ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರಿಗೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಸಿನಿಮಾ. ಟ್ರೈಲರ್‌ನಲ್ಲಿ ಅಮಾಯಕ ಹಿಂದೂ ಹುಡುಗಿಯರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಹಿಜಾಬ್ ಧರಿಸಿರುವ ಹುಡುಗಿಯರು ಎಂದಿಗೂ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ ಎಂದು ಅವರು ಭರವಸೆ ನೀಡುತ್ತಾರೆ. ನಂತರ ಈ ಹುಡುಗಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ.

ಬಾಲಿವುಡ್ ನಟಿ ಅದಾ ಶರ್ಮಾ ನಟನೆಯ ಬಹುನಿರೀಕ್ಷಿತ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಅದಾ ಶಾಲಿನಿ ಉನ್ನಿಕೃಷ್ಣನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂದೂ ಕುಟುಂಬಕ್ಕೆ ಸೇರಿದ ಶಾಲಿನಿ ಫಾತಿಮಾ ಆದ ರೋಚಕ ಕಥೆ ಮತ್ತು ಫಾತಿಮಾ ಸುತ್ತ ನಡೆಯುವ ಘಟನೆಯನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಆದ್ರೆ, ಈ ಕಥೆ ಕೇವಲ ಶಾಲಿನಿಯದ್ದಲ್ಲ. ಬದಲಿಗೆ ಕೇರಳದಿಂದ ನಾಪತ್ತೆಯಾದ ಆಕೆಯಂತಹ 32 ಸಾವಿರ ಯುವತಿಯರ ದಂತಕಥೆ.

ಹೌದು.. ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರಿಗೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಸಿನಿಮಾ. ನರ್ಸ್ ಆಗಲು ಬಯಸಿದ್ದ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಲವ್ ಜಿಹಾದ್‌ನ ಹೆಸರಿನಲ್ಲಿ ಮುಸಲ್ಮಾನರನ್ನಾಗಿಸಿ ಐಸಿಸ್‌ನ ಭಯೋತ್ಪಾದಕ ಹೆಸರನ್ನು ತಳುಕು ಹಾಕಿಕೊಂಡ ಹುಡುಗಿಯರ ಕಥೆ ಇದು. ಈ ಸಿನಿಮಾ 5 ಮೇ 2023 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಸುದೀಪ್ತೋ ಸೇನ್ ನಿರ್ಮಿಸಿರುವ ಈ ಚಿತ್ರವನ್ನು, ವಿಪುಲ್ ಅಮೃತಲಾಲ್ ಶಾ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಾನಿ, ಸಿದ್ಧಿ ಇದ್ನಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅದಾ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೂ ಕುಟುಂಬಕ್ಕೆ ಸೇರಿದ ಶಾಲಿನಿ ಹೇಗೆ ಫಾತಿಮಾ ಆಗುತ್ತಾಳೆ, ನಂತರ ಆಕೆಯನ್ನು ಭಯೋತ್ಪಾಕಿ ಎಂದು ಬಿಂಬಿಸುವ ದೃಶ್ಯಗಳು ಟ್ರೇಲರ್‌ನಲ್ಲಿವೆ.
Discover more from Coastal Times Kannada
Subscribe to get the latest posts sent to your email.








Discussion about this post