ಮಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, “ಎಲ್ಲಾ ಆರೋಪಿಗಳಿಗೆ ಮತ್ತು ಆರೋಪಿಗಳಿಗೆ ಸಹಕಾರ ಮಾಡುವವರಿಗೆ ಇದು ಎಚ್ಚರಿಕೆ. ಎಲ್ಲಾ ದೊಡ್ಡವರಿಗೆ, ಆರೋಪಿಗಳ ಮನೆಯಲ್ಲಿರುವವರು, ಗೆಳೆಯರು, ಸಂಬಂಧಿಕರಿಗೆ, ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವ ದೊಡ್ಡವರು ಅನಿಸಿಕೊಂಡವರೆಲ್ಲ ಕೇಳಿಸಿಕೊಳ್ಳಿ. ಯಾವುದೇ ಅಪರಾಧ ಮಾಡಿದ ಆರೋಪಿ ನಿಮ್ಮ ಮನೆಯಲ್ಲಿದ್ದರೂ ಅವರಿಗೆ ಆಶ್ರಯ, ಕಾರು, ದುಡ್ಡು, ಫೋನ್ ಕೊಡೋದು ಅಪರಾಧ. ಯಾವ ಊರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ, ಆದರೆ ನಾವು ಮಾತ್ರ ಅವನನ್ನು ಆರೋಪಿ ಅಂತಾನೇ ಹೇಳುತ್ತೇವೆ. ನಮ್ಮ ಬಿಎನ್ಎಸ್ ಅಡಿಯಲ್ಲಿ ಅದು ಕೂಡ ಒಂದು ಅಪರಾಧ” ಎಂದು ವಾರ್ನಿಂಗ್ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಸುಖಾಸುಮ್ಮನೆ ಬಂಧನ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿರುವುದರಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಆರೋಪಿಗಳ ಗೆಳೆಯರು ಇರಬಹುದು, ಇನ್ಯಾರೋ ಇರಬಹುದು ಅಂಥವರನ್ನು ಜೊತೆಗೆ ಇಟ್ಟುಕೊಂಡರೂ ಅವರೆಲ್ಲ ಆರೋಪಿಗಳೇ. ಯಾಕಂದ್ರೆ, ಬಿಎನ್ಎಸ್ ಕಾಯ್ದೆಯದಲ್ಲಿ ಅದಕ್ಕಂತಲೇ ಪ್ರತ್ಯೇಕ ವ್ಯಾಖ್ಯಾನ ಇದೆ ಎಂದು ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post