ವಯನಾಡ್, ಕೇರಳ:: ಆಡಳಿತಾರೂಢ ಸಿಪಿಐ (ಎಮ್) ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಬಫರ್ ಜೋನ್ ವಿಚಾರವಾಗಿ ತಮ್ಮ ಸಂಸದ ಕಚೇರಿಯನ್ನು ಧ್ವಂಸಗೊಳಿಸಿರುವುದನ್ನು ಬೇಜವಾಬ್ದಾರಿ ವರ್ತನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದರು.
ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಮೂರು ದಿನಗಳ ಭೇಟಿಗಾಗಿ ತಮ್ಮ ಕ್ಷೇತ್ರಕ್ಕೆ ಆಗಮಿಸಿರುವ ರಾಹುಲ್, ತಮ್ಮ ಕಚೇರಿಗೆ ಭೇಟಿ ನೀಡಿ, ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದರು. ಬಳಿಕ, ‘ಇದು ವಯನಾಡ್ ಜನರ ಕಚೇರಿ. ಆದರೆ ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳಿಂದ ಆಗಿರುವ ಪ್ರಮಾದ ದುರದೃಷ್ಟಕರ’ ಎಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಯನಾಡಿನ ಜನರ ಕಚೇರಿಯಾಗಿದ್ದು, ಎಡಪಕ್ಷಗಳ ವಿದ್ಯಾರ್ಥಿಗಳ ಪಡೆ ಮಾಡಿರುವುದು ದುರದೃಷ್ಟಕರ ಸಂಗತಿ ಎಂದರು. ಆದರೆ, ಹಿಂಸಾಚಾರವು ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಮತ್ತು ಅವರ ಬಗ್ಗೆ ಯಾವುದೇ ಕೋಪ ಅಥವಾ ಹಗೆತನವನ್ನು ಹೊಂದುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೇ ತಮ್ಮ ಕಚೇರಿಯ ಮೇಲೆ ದಾಳಿ ಮಾಡಿದವರನ್ನು ಮಕ್ಕಳು ಎಂದೂ ಕರೆದರು.
Discover more from Coastal Times Kannada
Subscribe to get the latest posts sent to your email.








Discussion about this post