ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ದೂರಸಂಪರ್ಕ ಸೇವೆಗಳಿಗೆ ಶನಿವಾರ ಚಾಲನೆ ನೀಡಲಿದ್ದಾರೆ. ಅವರು ಆಯ್ದ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಿದ್ದು, ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ. 5ಜಿ ಸೇವೆಗಳು ಆರಂಭವಾದ ನಂತರದಲ್ಲಿ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. 5ಜಿ ತಂತ್ರಜ್ಞಾನವು 4ಜಿ ತಂತ್ರಜ್ಞಾನಕ್ಕಿಂತ ಹಲವು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.
ಏನಿದು 5 ಜಿ ಇಂಟರ್ನೆಟ್: 5ಜಿ ಎಂಬುದು 5ನೇ ಪೀಳಿಗೆಯ ಮೊಬೈಲ್ ನೆಟ್ವರ್ಕ್ ಆಗಿದೆ. 4 ಜಿಗಿಂತಲೂ 20 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಇದು ಒದಗಿಸುತ್ತದೆ. ಈ ಸುಧಾರಿತ ನೆಟ್ವರ್ಕ್ ಬಳಕೆದಾರರಿಗೆ ವಿಳಂಬ ಮುಕ್ತ ಸಂಪರ್ಕವನ್ನು ನೀಡುತ್ತದೆ. ಇಂದು ಪ್ರಧಾನಿ ಮೋದಿ ಅವರು ದೇಶದ ವಿವಿಧ 13 ನಗರಗಳಲ್ಲಿ ಅತಿವೇಗದ ಅಂತರ್ಜಾಲ ಸೇವೆಗೆ ಚಾಲನೆ ನೀಡುತ್ತಿದ್ದರೂ, ಈಗಾಗಲೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 5 ಜಿ ಸೇವೆ ಆರಂಭಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆ ಕಂಡು ದೇಶದೆಲ್ಲಾ ನಗರಗಳಿಗೂ 5 ಜಿ ಸಿಗಲಿದೆ.
5 ಜಿ ಸ್ಪೀಡ್ ಎಷ್ಟಿರುತ್ತದೆ: 4 ಜಿ ನೆಟ್ವರ್ಕ್ಗಿಂತ 5 ಜಿ 20 ಪಟ್ಟು ವೇಗವಾಗಿರುತ್ತದೆ. 4ಜಿ ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್ ಇದ್ದರೆ, 5ಜಿ 20 ಗಿಗಾಬೈಟ್ ಇರುತ್ತದೆ. ಹೀಗಾಗಿ ಇದು ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುವ ನಿರೀಕ್ಷೆ ಇದೆ. 4 ಜಿ ಬೆಲೆಗೆ 5 ಜಿ ಸೇವೆ ಸಿಗಲಿದೆ ಎಂದು ದೂರಸಂಪರ್ಕ ಕಂಪನಿಗಳು ಹೇಳಿದ್ದರೂ, ಇವುಗಳ ಮೊತ್ತ ಹೆಚ್ಚಿಸುವ ಸಾಧ್ಯತೆ ಇದೆ. ನೂತನ ನೆಟ್ವರ್ಕ್ ಈಗಿನವುಗಳ ಬದಲಾಗಿ 5 ಜಿ ತಂತ್ರಾಂಶವುಳ್ಳ ಮೊಬೈಲ್ಗಳಲ್ಲಿ ಮಾತ್ರ ಲಭ್ಯವಾಗಲಿದೆ.
Discover more from Coastal Times Kannada
Subscribe to get the latest posts sent to your email.








Discussion about this post