ಕುಪ್ಪೆಪದವು: ದ್ವಿಚಕ್ರ ವಾಹನದ ಸೀಟ್ ಒಳಗೆ ಅಡಗಿ ಕುಳಿತಿದ್ದ ಕನ್ನಡಿ ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿದ ಬೆಳಕಿಗೆ ಬಂದಿದೆ. ಕುಪ್ಪೆಪದವಿನ ಇಮ್ತಿಯಾಜ್ ಹಾವು ಕಡಿತಕ್ಕೊಳಗಾದವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕುಪ್ಪೆಪದವಿನನಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಜ್ ಅವರು ಹಾವು ಕಡಿತಕ್ಕೆ ಒಳಗಾದವರು. ಅವರು ಸೆ. 27ರಂದು ರಾತ್ರಿ ಕೆಲಸ ಮುಗಿಸಿ ಮಸೀದಿಗೆ ಹೋಗಿ ಅಲ್ಲಿಂದ ಮನೆಗೆ ತೆರಳಲು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಳಿ ಬಂದು ಸ್ಕೂಟರ್‌ನ ಸೀಟ್ ತೆರೆದು ಕಾಗದ ಪತ್ರಗಳನ್ನು ಇಡುವ ಸಂದರ್ಭದಲ್ಲಿ ಸೀಟಿನ ಕೆಳಗಡೆಯಿದ್ದ ಹಾವು ಬೆರಳಿಗೆ ಕಚ್ಚಿತ್ತು. ಇಮ್ತಿಯಾಜ್ ಅವರನ್ನು ತತ್‌ಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

Discover more from Coastal Times Kannada
Subscribe to get the latest posts sent to your email.








Discussion about this post