ಮಂಗಳೂರು: ನವೆಂಬರ್ 29 ರಂದು ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿ ಸೆಂಟ್ರಲ್ ಅರಕಾನಟ್ ಅಂಡ್ ಕೊಕ್ಕೂ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಯೂ) ನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರೈತರ ಹಿತಾಸಕ್ತಿಗಳನ್ನು ಕಾಪಾಡುವ ಪ್ರಾಥಮಿಕ ಉದ್ದೇಶದೊಂದಿಗೆ 1973 ರಲ್ಲಿ ಸ್ಥಾಪನೆಯಾಯಿತು. ನಮ್ಮ ಆಡಳಿತ ಮಂಡಳಿ ಮತ್ತು ಕರ್ನಾಟಕ ಹಾಗೂ ಕೇರಳದ ಎಲ್ಲಾ ಸದಸ್ಯ ಬೆಳೆಗಾರರ ಪರವಾಗಿ, ರೈತರಿಗಾಗಿ ಈ ಬೃಹತ್ ಸಹಕಾರಿ ಸಂಸ್ಥೆಯ ಭದ್ರ ಬುನಾದಿ ಹಾಕಿದ ಸಂಸ್ಥಾಪಕ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರಿಗೆ ನಾವು ಗೌರವ ನಮನ ಸಲ್ಲಿಸುತ್ತೇವೆ.
ಆರಂಭದಲ್ಲಿ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಬೆಂಬಲವಿದ್ದರೂ, ಕ್ಯಾಂಪ್ಯೂ 2005 ರಲ್ಲಿ ಎಲ್ಲಾ ಸರ್ಕಾರಿ ಷೇರು ಬಂಡವಾಳವನ್ನು ಹಿಂದಿರುಗಿಸುವ ಮೂಲಕ ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿ ಹೊರಹೊಮ್ಮಿತು. ಅಂದಿನಿಂದ, ಸಂಸ್ಥೆಯು ರೈತರ ಆರ್ಥಿಕ ಸ್ಥಿತಿಯನ್ನು – ಸುಧಾರಿಸುವ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಅಕ್ರಮ ಆಮದು ಮತ್ತು ಮಾರುಕಟ್ಟೆಯ ಏರಿಳಿತಗಳ ನಡುವೆಯೂ, ಕ್ಯಾಂಪ್ಟ್ ಪ್ರತಿ ಹಂತದಲ್ಲೂ ಬೆಳಗಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ.
ದಿ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಸಂಸ್ಥೆಯು ಐದು ವರ್ಷಗಳಲ್ಲಿ ಶೇ 70ರಷ್ಟು ಬೆಳವಣಿಗೆ ಸಾಧಿಸಿದ್ದು, 2020–21ನೇ ಸಾಲಿನಲ್ಲಿ ರೂ.2,134 ಕೋಟಿ ಇದ್ದ ವಹಿವಾಟು 2024–25ನೇ ಸಾಲಿನಲ್ಲಿ ರೂ.3,631 ಕೋಟಿಗೆ ಏರಿಕೆಯಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಹೇಳಿದರು.
‘ಐದು ವರ್ಷದ ಹಿಂದೆ ಹೊಸ ಅಡಿಕೆ ಕೆ.ಜಿ.ಗೆ ರೂ.240–ರೂ.320 ಇತ್ತು, ಈಗ ರೂ.360ರಿಂದ ರೂ.485 ಆಗಿದೆ. ಚಾಲಿ ಅಡಿಕೆ ರೂ.320ರಿಂದ ರೂ.380 ಇತ್ತು. ಈಗ ರೂ.360ರಿಂದ ರೂ.525ಕ್ಕೆ ತಲುಪಿದೆ. ಕೆಂಪು ಅಡಿಕೆ ಕೆ.ಜಿ.ಗೆ ರೂ.350ರಿಂದ ರೂ.398 ಇತ್ತು. ಈಗ ರೂ.545ರಿಂದ ರೂ.585ಕ್ಕೆ ತಲುಪಿದೆ. ಕ್ಯಾಂಪ್ಕೊ ರೈತರಿಗೆ ನ್ಯಾಯಯುತ ಬೆಲೆ ಒದಗಿಸಲು ಶ್ರಮಿಸಿದೆ ಎಂದರು.
ವಿಸ್ತರಣಾ ಚಟುವಟಿಕೆಯ ಭಾಗವಾಗಿ ‘ಸೌಗಂಧ್’ ಕಾಜು ಸುಪಾರಿ ಮರುಬಿಡುಗಡೆ, ಮಾಲ್ದೀವ್ಸ್‌ಗೆ ಅಡಿಕೆ ರಫ್ತು ಆರಂಭಿಸಲಾಗಿದೆ. ಕ್ಯಾಂಪ್ಕೊ ಆಯುಷ್, ಪೌಷ್ಟಿಕ, ಡಾಲಮೈಟ್ ಮೊದಲಾದ ಕೃಷಿ ಗೊಬ್ಬರ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಹೊಸ ಉತ್ಪನ್ನಗಳಾದ ಡೈರಿ ಡ್ರೀಮ್, ಫಿಯೆಸ್ಟಾ, ಎಕ್ಲೇರ್ಸ್, ಡೋಮ್ ಟ್ರಫಲ್ಸ್, ಮತ್ತು ಡಾರ್ಕ್ ಚಾಕೊಲೇಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಟಂದ್ರ, ದಯಾನಂದ ಹೆಗ್ಡೆ, ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಮಡ್ತಿಲ, ಬಾಲಕೃಷ್ಣ ರೈ, ದಯಾನಂದ ಹೆಗ್ಡೆ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ರಾಘವೇಂದ್ರ, ಜಯಪ್ರಕಾಶ್, ರಾಘವೇಂದ್ರ ಭಟ್ ಪುತ್ತೂರು, ಎಂಡಿ ಸತ್ಯನಾರಾಯಣ, ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ, ಅಡಕೆ ಸಂಶೋಧನಾ ಪ್ರತಿಷ್ಠಾನ ಅಧಿಕಾರಿ ಕೇಶವ ಭಟ್ ಇದ್ದರು.
Discover more from Coastal Times Kannada
Subscribe to get the latest posts sent to your email.







Discussion about this post