• About us
  • Contact us
  • Disclaimer
Saturday, March 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

49 ಮಹಿಳೆಯರನ್ನು ಹತ್ಯೆ ಮಾಡಿದ್ದ ಕೆನಡಾದ ಸೀರಿಯಲ್ ಕಿಲ್ಲರ್ ಜೈಲಿನಲ್ಲಿ ಸಾವು

Coastal Times by Coastal Times
June 2, 2024
in ಕ್ರೈಮ್ ನ್ಯೂಸ್
49 ಮಹಿಳೆಯರನ್ನು ಹತ್ಯೆ ಮಾಡಿದ್ದ  ಕೆನಡಾದ ಸೀರಿಯಲ್ ಕಿಲ್ಲರ್ ಜೈಲಿನಲ್ಲಿ ಸಾವು
55
VIEWS
WhatsappTelegramShare on FacebookShare on Twitter

ಒಟ್ಟಾವಾ  ಜೂನ್ 01: ಈತನ ಹೆಸರು ರಾಬರ್ಟ್ “ವಿಲ್ಲೀ” ಪಿಕ್ಟನ್ ಕೆನಡಾದ ಸೀರಿಯಲ್ ಕಿಲ್ಲರ್ ತನ್ನ ಘೋರ ಅಪರಾಧಗಳಿಗೆ ಕುಖ್ಯಾತನಾಗಿದ್ದು, ಜೈಲಿನಲ್ಲಿ ನಡೆದ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ. ದಿ ಕರೆಕ್ಷನಲ್ ಸರ್ವೀಸ್ ಆಫ್ ಕೆನಡಾ 71ರ ಹರೆಯದ ರಾಬರ್ಟ್ ಸಾವನ್ನು ದೃಢಪಡಿಸಿದೆ. ಮೇ 19 ರಂದು ಕ್ವಿಬೆಕ್‌ನ ಪೋರ್ಟ್-ಕಾರ್ಟಿಯರ್ ಸಂಸ್ಥೆಯಲ್ಲಿ ಈ ದಾಳಿ ಸಂಭವಿಸಿದೆ ಎಂದು ಅದು ಹೇಳಿದೆ. ರಾಬರ್ಟ್ ಪಿಕ್ಟನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 26 ಮಹಿಳೆಯರ ಕೊಲೆಗಳಿಗೆ ಸಂಬಂಧಿಸಿದಂತೆ ಆತನ ಮೇಲೆ ಆರೋಪ ಹೊರಿಸಲಾಯಿತು. 2007 ರಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಯಿತು.

ಕ್ರೂರವಾಗಿ ಕೊಲ್ಲುತ್ತಿದ್ದ ರಾಬರ್ಟ್ ಪಿಕ್ಟನ್: ವ್ಯಾಂಕೋವರ್‌ನ ಪೋರ್ಟ್ ಕೊಕ್ವಿಟ್ಲಾಮ್‌ನ ಹಂದಿ ಸಾಕಣೆದಾರ ರಾಬರ್ಟ್ ಪಿಕ್ಟನ್​​ನ್ನು, ಎರಡು ದಶಕಗಳ ಕಾಲ ತನಿಖೆಗೆ ಒಳಪಡಿಸಲಾಗಿತ್ತು.  ಹತ್ಯೆಗೀಡಾದವರಲ್ಲಿ ಹೆಚ್ಚಾಗಿ ವೇಶ್ಯೆಯರು ಮತ್ತು ಮಾದಕ ವ್ಯಸನಿಗಳು ಆಗಿದ್ದರು. 1980 ಮತ್ತು 2001 ರ ನಡುವೆ ವ್ಯಾಂಕೋವರ್‌ನ ಡೌನ್‌ಟೌನ್ ಈಸ್ಟ್‌ಸೈಡ್ ನೆರೆಹೊರೆಯಿಂದ ಕಣ್ಮರೆಯಾದ ಸುಮಾರು 70 ಮಹಿಳೆಯರಲ್ಲಿ ಮೋನಾ ವಿಲ್ಸನ್, ಸೆರೆನಾ ಅಬೋಟ್ಸ್‌ವೇ, ಮಾರ್ನಿ ಫ್ರೇ, ಬ್ರೆಂಡಾ ವೋಲ್ಫ್, ಆಂಡ್ರಿಯಾ ಜೋಸ್‌ಬರಿ ಮತ್ತು ಜಾರ್ಜಿನಾ ಪಾಪಿನ್ ಸೇರಿದ್ದಾರೆ.

ಈ ಮಹಿಳೆಯರು ರಾಬರ್ಟ್ ಪಿಕ್ಟನ್‌ನ ಕೆಟ್ಟ ತಂತ್ರಗಳಿಗೆ ಬಲಿಯಾದರು. ಅವರಿಗೆ ಹಣ ಮತ್ತು ಮಾದಕ ವಸ್ತುಗಳನ್ನು ನೀಡುವುದಾಗಿ ಸುಳ್ಳು ಭರವಸೆ ನೀಡಿ ಪಿಕ್ಟನ್ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ. 2008 ರ ಗಾರ್ಡಿಯನ್ ವರದಿಯ ಪ್ರಕಾರ, ಅವನ ಫಾರ್ಮ್ ನಲ್ಲಿ ಹುಡುಕಾಟ ನಡೆಸಿದಾಗ ಆತ ಕೊಂದ 49 ಮಹಿಳೆಯರಲ್ಲಿ 33 ಮಹಿಳೆಯರ ಅವಶೇಷಗಳು ಅಥವಾ ಡಿಎನ್‌ಎ ಪತ್ತೆಯಾಗಿತ್ತು. ತನಿಖಾಧಿಕಾರಿಗಳಿಗೆ ಆತನ ಜಮೀನಿನಲ್ಲಿ ತಲೆಬುರುಡೆಗಳು ಮತ್ತು ಪಾದಗಳು ಸೇರಿದಂತೆ ಮಾನವ ಅವಶೇಷಗಳನ್ನು ಪತ್ತೆಯಾಗಿತ್ತು. ಆತ ಮಹಿಳೆಯರನ್ನು ಹತ್ಯೆ ಮಾಡಿ ರಾತ್ರಿ ಹೊತ್ತು ಮೃತದೇಹಗಳನ್ನು ಕತ್ತರಿಸುತ್ತಿದ್ದ ಎಂದು ಸಾಕ್ಷಿಗಳು ಹೇಳಿದ್ದಾರೆ.

ಆತನ ವಿಚಾರಣೆಯ ಸಮಯದಲ್ಲಿ ಮತ್ತಷ್ಟು ಭಯಾನಕ ವಿವರಗಳು ಹೊರಬಂದವು. ರಾಬರ್ಟ್ ಪಿಕ್ಟನ್ ಮಹಿಳೆಯರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದ. ಅವರ ಮೃತದೇಹಗಳನ್ನು ಕತ್ತರಿಸಿ ಹಂದಿಗೆ ತಿನ್ನಿಸುತ್ತಿದ್ದ ಎಂದು ವಿಚಾರಣೆ ವೇಳೆ ಆತ ಬಾಯಿಬಿಟ್ಟಿದ್ದ. ಆತನ ಫಾರ್ಮ್ ನಲ್ಲಿ ಹಂದಿಮಾಂಸವನ್ನು ಖರೀದಿಸಿದಾಗ ಅದರಲ್ಲಿ ಮಾನವ ಅವಶೇಷಗಳು ಇರಬಹುದು ಎಂದು ಆರೋಗ್ಯ ಅಧಿಕಾರಿಗಳು ಗ್ರಾಹಕರನ್ನು ಎಚ್ಚರಿಸಿದ್ದರು.

ಇಷ್ಟೆಲ್ಲ ಸಾಕ್ಷ್ಯಗಳಿದ್ದರೂ, ರಾಬರ್ಟ್ ಪಿಕ್ಟನ್ ತನ್ನ ಅಪರಾಧಗಳನ್ನು ಒಪ್ಪಿಕೊಳ್ಳಲಿಲ್ಲ. ವಿಚಾರಣೆಯ ಸಮಯದಲ್ಲಿ ಆತ ಅನ್ಯ ಮನಸ್ಕನಾಗಿದ್ದ. ಆದಾಗ್ಯೂ, ರಹಸ್ಯ ಅಧಿಕಾರಿಯೊಂದಿಗಿನ ಟೇಪ್ ಮಾಡಿದ ಸಂಭಾಷಣೆಯಲ್ಲಿ, ಆತ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದ. ತಾನು ಈಗಾಗಲೇ 49 ಮಹಿಳೆಯರನ್ನು ಕೊಂದಿದ್ದಿದ್ದು 50 ಟಾರ್ಗೆಟ್ ಇಟ್ಟುಕೊಂಡಿದ್ದೆ ಎಂದು ಆತ ಹೇಳಿದ್ದ. ಈಗ, ಕೆನಡಾದ ಪೊಲೀಸರು ರಾಬರ್ಟ್ ಪಿಕ್ಟನ್ ಅವರ ಸಾವಿಗೆ ಕಾರಣವಾದ ಹಲ್ಲೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪ್ರಜ್ವಲ್ ರೇವಣ್ಣ ಜೂನ್ 6ರವರೆಗೆ ಎಸ್ ಐಟಿ ಕಸ್ಟಡಿಗೆ, ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Next Post

ಉಡುಪಿಯಲ್ಲಿಯೊಂದು ಪ್ರಜ್ವಲ್ ರೇವಣ್ಣ ; ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡುತ್ತಿದ್ದ ಕಾಮುಕ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ

Related Posts

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ
ಕ್ರೈಮ್ ನ್ಯೂಸ್

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
1
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
30
Next Post
ಉಡುಪಿಯಲ್ಲಿಯೊಂದು ಪ್ರಜ್ವಲ್ ರೇವಣ್ಣ ; ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡುತ್ತಿದ್ದ ಕಾಮುಕ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ

ಉಡುಪಿಯಲ್ಲಿಯೊಂದು ಪ್ರಜ್ವಲ್ ರೇವಣ್ಣ ; ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡುತ್ತಿದ್ದ ಕಾಮುಕ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ

Discussion about this post

Recent News

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
1
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d