• About us
  • Contact us
  • Disclaimer
Tuesday, September 16, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೋಹನ್ ಸಿಟಿ ಬಿಜೈ ‘ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ’ ಸ್ಕೀಮಿನ ಅನಾವರಣ

Coastal Times by Coastal Times
November 2, 2023
in ಕರಾವಳಿ
ರೋಹನ್ ಸಿಟಿ ಬಿಜೈ ‘ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ’ ಸ್ಕೀಮಿನ ಅನಾವರಣ
86
VIEWS
WhatsappTelegramShare on FacebookShare on Twitter

ಮಂಗಳೂರು, ನ.2: ರೋಹನ್ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಬರುವ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಜೈ ಮುಖ್ಯ ರಸ್ತೆಯಲ್ಲಿನ ‘ರೋಹನ್ ಸಿಟಿ’ ವಾಣಿಜ್ಯ ಮಳಿಗೆಗಳ ಹೂಡಿಕೆದಾರರಿಗೆ ಖಚಿತ 7.50% ಪ್ರತಿಫಲ ನೀಡುವ ಸ್ಕೀಮ್ ಅನ್ನು ಎರಡು ತಿಂಗಳ ಅವಧಿಗೆ ಹಮ್ಮಿಕೊಳ್ಳಲಾಗಿದೆ.

ಈ ಎರಡು ತಿಂಗಳುಗಳಲ್ಲಿ ವಿಶೇಷ ದರ ಕಡಿತದೊಂದಿಗೆ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಲಾಗುವುದು. ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಮಾತ್ರವಲ್ಲದೆ, ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾ ಸಾಗುತ್ತಿವೆ.

‘ರೋಹನ್ ಸಿಟಿ’ ರೋಹನ್ ಕಾರ್ಪೊರೇಷನ್ ನ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು546 ಅಪಾರ್ಟ್ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್,6 ಬಿಎಚ್‌ಕೆ, 4 ಬಿಎಚ್‌ಕೆ, 1405 ರಿಂದ 1900 ಚದರ ಅಡಿ 3 ಬಿಎಚ್‌ಕೆ, 1075 ರಿಂದ 1135 ಚದರ ಅಡಿ2 ಬಿಎಚ್‌ಕೆ ಮತ್ತು700 ರಿಂದ 815 ಚದರ ಅಡಿ 1ಬಿಎಚ್‌ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ.

ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು : • 2 ಹಂತಗಳಲ್ಲಿ35000 ಚದರ ಅಡಿ ಹೈಪರ್ ಮಾರುಕಟ್ಟೆ • ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ • ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ • ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು • ಪ್ರಮುಖ ನ್ಯಾಶನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ • ತ್ವರಿತ ಸಾಲ ಸೌಲಭ್ಯ ಸೇವೆ • ಡೀಸೆಲ್ ಜನರೇಟರ್‌ಗಳೊಂದಿಗೆ 100% ಪವರ್ ಬ್ಯಾಕಪ್ • ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ • ಅತ್ಯಾಧುನಿಕ ಭದ್ರತಾ ವ್ಯವಸ್ಥೆ • ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ • ಹಸಿರುವನ, ಉದ್ಯಾನವನ • ಘನ ತ್ಯಾಜ್ಯ ಸಂಸ್ಕರಣಾ ಘಟಕ • ಸೌರ ಶಕ್ತಿ ಸಂಗ್ರಹ ಘಟಕ • ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)

ಅಂತಾರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ನ ವಿಶೇಷತೆಗಳು
ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ • ಫ್ಯಾಮಿಲಿ ರೆಸ್ಟೋರೆಂಟ್ • ಕಾಫಿ ಶಾಪ್ • ಒಳಾಂಗಣ ಕ್ರೀಡೆ • ಬಾಸ್ಕೆಟ್ ಬಾಲ್ ಕೋರ್ಟ್ • ಬಾಡ್ಮಿಂಟನ್ ಕೋರ್ಟ್ • ವಿಡಿಯೋ ಗೇಮ್ಸ್ ವಲಯ • ಸುಸಜ್ಜಿತ ಜಿಮ್ • ಸ್ಪಾ, ಯುನಿಸೆಕ್ಸ್ ಸಲೂನ್ • ಆರ್ಯುವೇದಿಕ್ ವೆಲ್‌ನೆಸ್ ಸೆಂಟರ್ •3ಡಿ ಥಿಯೇಟರ್ • ಮಲ್ಟಿ-ಪರ್ಪಸ್ ಹಾಲ್ • ಸ್ವಿಮ್ಮಿಂಗ್ ಪೂಲ್ • ಜಾಗಿಂಗ್ ಟ್ರ‍್ಯಾಕ್ • ಸೀನಿಯರ್ ಸಿಟಿಜನ್ ಪಾರ್ಕ್ • ಚಿಣ್ಣರ ಆಟದ ವಲಯ • ಸುಸಜ್ಜಿತ ಗ್ರಂಥಾಲಯ • ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.

ರೋಹನ್ ಮೊಂತೇರೊ – ಯಶಸ್ಸಿನ ರೂವಾರಿ : ರೋಹನ್ ಮೊಂತೇರೊ ಯುವ ಪ್ರಾಯದಲ್ಲೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಜ್ಜೆಯನ್ನು ಇಟ್ಟಿದ್ದು, ಇಂದು ‘ರೋಹನ್ ಕಾರ್ಪೊರೇಷನ್’ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ವೃತ್ತಿಯಲ್ಲಿ ಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದ ರಿಯಲ್ ಎಸ್ಟೇಟ್ ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ. ರೋಹನ್ ಮೊಂತೇರೊ ನಿರ್ಮಾಪಕರಾಗಿ ಎಲ್ಲಾ ಕೆಲಸಗಳಲ್ಲೂ ಸೂಕ್ಷö್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರ ಅಭಿಮಾನವನ್ನು ಗಳಿಸಿದ್ದಾರೆ. ರೋಹನ್ ಮೊಂತೇರೊ ಇವರ ನಾಯಕತ್ವದಲ್ಲಿ ಅವರ ನಿರ್ಮಾಣ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿ ರೋಹನ್ ಎಸ್ಟೇಟ್, ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಮತ್ತು ರೋಹನ್ ಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‌ವೆಲ್ ಬಳಿಯ ಕಪಿತಾನಿಯೊದಲ್ಲಿನ ರೋಹನ್ ಸ್ಕ್ವೇರ್ ನಿರ್ಮಾಣದ ಕೊನೆಯ ಹಂತದಲ್ಲಿದೆ.

‘ರೋಹನ್ ಸಿಟಿ’ ಹೆಚ್ಚು ಅನುಕೂಲಕರ ಹೂಡಿಕೆ ತಾಣವಾಗಿ, ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅದರ ಹೇರಳವಾದ ವಾಣಿಜ್ಯ ಘಟಕಗಳೊಂದಿಗೆ, ನಗರವು ವಾಣಿಜ್ಯೋದ್ಯಮಿಗಳು, ಸ್ಟಾರ್ಟ್ಅಪ್ಸ್ ಗಳು ಮತ್ತು ಸ್ಥಾಪಿತ ವ್ಯವಹಾರಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ವೈವಿಧ್ಯಮಯ ವಾಣಿಜ್ಯ ಸ್ಥಳಗಳ ಲಭ್ಯತೆಯು, ಉದ್ಯಮಿಗಳು ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ, ಹಾಗೆಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳ ವಿಸ್ತರಣೆಯ ಅಗತ್ಯಗಳನ್ನು ಪೂರೈಸುತ್ತದೆ. ಇದಲ್ಲದೆ, ಹೂಡಿಕೆದಾರರು ವಾಣಿಜ್ಯ ಆಸ್ತಿಗಳನ್ನು ಖರೀದಿಸುವ ಅವಕಾಶವನ್ನು ಬಳಸಿ, ನಗರದ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಪರಿಸರದ ಲಾಭವನ್ನು ಪಡೆಯಬಹುದು.

‘ರೋಹನ್ ಸಿಟಿ’ಯ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡಿ, ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು, ಸ್ಥಿರವಾದ ಆದಾಯವನ್ನು ಖಾತ್ರಿಪಡಿಸಿಕೊಳ್ಳಬಹುದು. ಹೀಗಾಗಿ ದೃಢವಾದ ಮಾರುಕಟ್ಟೆ, ಸಾಕಷ್ಟು ಅವಕಾಶಗಳು ಮತ್ತು ಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯೊಂದಿಗೆ, ‘ರೋಹನ್ ಸಿಟಿ’ ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮೃದ್ಧ ನಗರ ಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿದೆ.

ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845490100 / 9845607725 / 9845607724 / 9036392627 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಂತರ್‌ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು : ಅಖಿಲ ಭಾರತ ಕೊಂಕಣಿ ಸಮ್ಮೇಳನಕ್ಕೆ ಹೇಮಾ ನಾಯ್ಕ ಅಧ್ಯಕ್ಷೆ

Next Post

ಸುಳ್ಯ ಮೂಲದ ಮಹಿಳೆ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಕಿರುಕುಳ, ಪತಿ, ಮಾವ,ಅತ್ತೆ ಸೇರಿ ಐವರ ಸೆರೆ

Related Posts

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು
ಕರಾವಳಿ

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
55
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ
ಕರಾವಳಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
59
Next Post
ಸುಳ್ಯ ಮೂಲದ ಮಹಿಳೆ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಕಿರುಕುಳ, ಪತಿ, ಮಾವ,ಅತ್ತೆ ಸೇರಿ ಐವರ ಸೆರೆ

ಸುಳ್ಯ ಮೂಲದ ಮಹಿಳೆ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಕಿರುಕುಳ, ಪತಿ, ಮಾವ,ಅತ್ತೆ ಸೇರಿ ಐವರ ಸೆರೆ

Discussion about this post

Recent News

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT )  ಚಿತ್ರದ ‘ಗಂಗಿ ಗಂಗಿ’…  ಹಾಡು ರಿಲೀಸ್.

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT ) ಚಿತ್ರದ ‘ಗಂಗಿ ಗಂಗಿ’… ಹಾಡು ರಿಲೀಸ್.

September 15, 2025
20
ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
55
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT )  ಚಿತ್ರದ ‘ಗಂಗಿ ಗಂಗಿ’…  ಹಾಡು ರಿಲೀಸ್.

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT ) ಚಿತ್ರದ ‘ಗಂಗಿ ಗಂಗಿ’… ಹಾಡು ರಿಲೀಸ್.

September 15, 2025
ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d