ಮಂಗಳೂರು : ಮೀನುಗಾರ ಸಮುದಾಯದ ಸೋಮನಾಥ ಪುತ್ರನ್ ಅವರ ಆತ್ಮಹತ್ಯೆಗೆ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ ದೌರ್ಜನ್ಯ ಕಾರಣ ಎಂದು ಆರೋಪಿಸುವ ದ.ಕ.ಮೊಗವೀರ ಸಂಯುಕ್ತ ಸಭಾ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.
ಮಂಗಳೂರು ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಸಂಯುಕ್ತ ಸಭಾದ ಅಧ್ಯಕ್ಷ ಭರತ್ ಉಳ್ಳಾಲ್, ಮೃತರು ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದು, ಅಪರಾ ಹಿನ್ನೆಲೆ ಹೊಂದದ ವ್ಯಕ್ತಿ. ಈ ಪ್ರಕರಣದ ಸೂಕ್ತ ನ್ಯಾಯಾಂಗ ತನಿಖೆ ನಡೆಸಲು ಒತ್ತಾಯಿಸಿ ಮುಖ್ಯಮಂತ್ರಿ, ಗೃಹ ಹಾಗೂ ಉಸ್ತುವಾರಿ ಸಚಿವರು, ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಮೃತರು ಕುಟುಂಬದ ಏಕೈಕ ದುಡಿಮೆಗಾರರಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಮುಗ್ಧ ವ್ಯಕ್ತಿಯಾಗಿದ್ದರು. ಈ ಘಟನೆಯು ಕರಾವಳಿಯ ಮೀನುಗಾರರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
1.ಮಾನಸಿಕ ಹಿಂಸೆ ಕೊಟ್ಟು ಆತ್ಮಹತ್ಯೆಗೆ ಕಾರಣರಾಗಿರುವ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ BNS ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ತಕ್ಷಣ ಅಮಾನತು ಮಾಡಬೇಕು.
2. ಮೃತ ಸೋಮನಾಥ್ ಪುತ್ರುನ್ ರವರ ಪತ್ನಿಯವರು ತನ್ನ ವತಿಯ ಆತ್ಮಹತ್ಯೆಗೆ ಘಟನೆಗೆ ಮೂಲಕಾರಣರಾದ ಜೋಡಿಗಳಾದ ದಹಲಿ ಮೂಲದ ಕಾಜೋಲ್ ಮತ್ತು ಕೇರಳ ಮೂಲದ ರಿಯಾಜ್ ರವರ ಮೇಲೆ ದೂರು ನೀಡಿದ್ದು ಅವರನ್ನು ಇಲ್ಲಿವರೆಗೆ ಬಂಧಿಸದಿರುವುದು ಹಾಗೂ ಮೇಲ್ಕಾಣಿಸಿದ ಆಪರಾಧಿಗಳ ಹಸರನ್ನು FIR ನಲ್ಲಿ ನಮೂದಿಸದೇ ಇರುವುದು ನಮಗೆ ಅನುಮಾನ ಮೂಡಿಸಿದೆ. ಆದೂದರಿಂದ ಮೇಲ್ಯಾಣಿಸಿದ ಇಬ್ಬರನ್ನು 48 ಗಂಟೆಯೊಳಗೆ ಬಂಧಿಸಬೇಕು.
3.ಇದೇ ಇಲಾಖೆಯಿಂದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲದ ಕಾರಣ, ನಿವೃತ್ತ ಹಾಲಿ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಅಥವಾ CID ತನಿಖೆ ನಡೆಸಬೇಕು. ಮತ್ತು 30 ದಿನದೊಳಗೆ ವರದಿ ಸಾರ್ವಜನಿಕಗೊಳಿಸಬೇಕು.
4.ಪೊಲೀಸ್ ಠಾಣೆಯ CCTV ದೃಶ್ಯಾವಳಿ, ಜನರಲ್ ಡೈರಿ ಹಾಗೂ ದಾಖಲೆಗಳನ್ನು ಕೂಡಲೇ ವಶಪಡಿಸಿಕೊಳ್ಳಬೇಕು. 5.ಮೃತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.2 ಕೋಟಿ ಪರಿಹಾರ ನೀಡಬೇಕು. 6.ಮೃತರ ಪತ್ನಿಗೆ ‘ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು. 7.ಮೃತರ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. 8.ಸಾಕ್ಷಿದಾರರು ಮತ್ತು ಮೃತ ಕುಟುಂಬದವರ ಮೇಲೆ ಯಾವುದೇ ಸುಳ್ಳು ಪ್ರಕರಣ ದಾಖಲಿಸಬಾರದು ಎಂದು ಭರವಸೆ ನೀಡಬೇಕು. 9. ಸಂಬಂಧಪಟ್ಟ ಸಿಬ್ಬಂದಿ ಮತ್ತು ಅವರಿಗೆ ನಿರ್ದೇಶನ ನೀಡಿದ ಉನ್ನತಾಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು. 10. ಕರಾವಳಿಯ ಪೊಲೀಸ್ ಠಾಣೆಗಳಲ್ಲಿ “ಮೀನುಗಾರರ ರಕ್ಷಣಾ ಕೋಶ” ರಚಿಸಿ, ಪೊಲೀಸರಿಗೆ ಮೀನುಗಾರರೊಂದಿಗೆ ವ್ಯವಹರಿಸುವ ಬಗ್ಗೆ ತರಬೇತಿ ನೀಡಬೇಕು. ಮೇಲಿನ ಬೇಡಿಕೆಗಳಲ್ಲಿ 1, 2,3 ಮತ್ತು 5ನೇ ಬೇಡಿಕೆಯನ್ನು 48 ಗಂಟೆಯೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಇಡೀ ಕರಾವಳಿಯ ಮೀನುಗಾರ ಸಮುದಾಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಯುಕ್ತ ಸಭಾದ ಅಧ್ಯಕ್ಷ ಭರತ್ ಉಳ್ಳಾಲ್ ಅವರು ಹೇಳಿದರು.
ಮನೆಯ ಮುಂದೆ ಜೋಡಿಯ ಅನುಚಿತ ವರ್ತನೆ ಬಗ್ಗೆ ಪ್ರಶ್ನಿಸಿದ್ದು ಅನೈತಿಕ ಪೊಲೀಸ್ಗಿರಿಯೇ? : ‘ರಾತ್ರಿ ಹೊತ್ತಿನಲ್ಲಿ ಸುರತ್ಕಲ್ ಬೀಚ್ನಿಂದ ದೂರವಿರುವ ಸೋಮನಾಥ ಅವರ ಮನೆಯ ಮುಂದೆ ಜೋಡಿಯೊಂದು ಅನುಚಿತವಾಗಿ ವರ್ತಿಸಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಸೋಮನಾಥ ಅವರು ಮದ್ಯ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಯುವತಿ ಡ್ರಗ್ಸ್ ಸೇವನೆ ಮಾಡಿದ್ದರೇ ಎಂಬುದನ್ನು ಪರಿಶೀಲನೆ ಮಾಡಿದ್ದಾರೆಯೇ? ಆಕೆ ದಿಲ್ಲಿಯಿಂದ ಡ್ರಗ್ಸ್ ಮಾರಾಟ ಮಾಡಲು ಬಂದಿರುವ ಅನುಮಾನ ನಮಗಿದೆ’ ಎಂದು ಆರೋಪಿಸಿದ ಭರತ್ ಉಳ್ಳಾಲ್, ಸೋಮನಾಥ ಪುತ್ರನ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರ ಸಮುದಾಯದ ಪ್ರಮುಖ ಐದು ಬೇಡಿಕೆಗಳನ್ನು 48 ಗಂಟೆಯೊಳಗೆ ಈಡೇರಿಸದಿದ್ದರೆ, ಕರಾವಳಿಯ ಮೀನುಗಾರ ಸಮುದಾಯ ಎಂಆರ್ಪಿಎಲ್ ವಿರುದ್ಧ ನಡೆದ ಪ್ರತಿಭಟನೆಗಿಂತ ತೀವ್ರವಾಗಿ ಪ್ರತಿಭಟನೆ ನಡೆಸಲಿದೆ’ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಜಯ ಸಿ. ಕೋಟ್ಯಾನ್, ಶರಣ್, ಉದಯ್ ಕುಮಾರ್, ಚಂದ್ರಕಾಂತ್, ವಿನಯ್ ಸೇರಿದಂತೆ ಇತರ ಅನೇಕರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.





Discussion about this post