ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ವಾರ್ಷಿಕ ಕೋಲ ಸೇವೆಯು ಇದೇ ಬರುವ ದಿನಾಂಕ 7 -12.-2025 ನೇ ಭಾನುವಾರದಂದು ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಅಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ 7 ಗಂಟೆಯಿಂದ ಮಹಾಗಣಪತಿ ಹೋಮ, ನಂತರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಲಿದೆ.
ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ಆರಂಭಗೊಳ್ಳಲಿದ್ದು, ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಹರಿ ನಾರಾಯಣ ದಾಸ ಅಸ್ರಣ್ಣರ ದಿವ್ಯ ಸಾನಿಧ್ಯ ಇರಲಿರುವುದು. ಹಾಗೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ನೆರವೇರಲಿದೆ.
ಸಂಜೆ 5 ಗಂಟೆಗೆ ಕೋಲ ಸೇವೆ ಆರಂಭ : ಸಂಜೆ 5 ಗಂಟೆಗೆ ಸ್ವಾಮಿ ಕೊರಗ ತನಿಯ ದೈವದ ಕೋಲ ಸೇವೆ ಜರುಗಲಿದೆ. ರಾತ್ರಿ 8 ಗಂಟೆಯಿಂದ ಭಕ್ತಿಗಾನ ಸುಧೆ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಇದೇ ವೇಳೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಅಗೆಲು ಸೇವೆ : ದಿನಾಂಕ 08-12-2025 ನೇ ಸೋಮವಾರ ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಲಿದೆ.
ಸಾನಿಧ್ಯಕ್ಕೆ ಹೊರೆ ಕಾಣಿಕೆ ನೀಡಲಿಚ್ಛಿಸುವ ಭಕ್ತರು 05- 12 -2025 ರ ಒಳಗಾಗಿ ತಲುಪಿಸಬೇಕಾಗಿ ವಿನಂತಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕರಿಗಂಧ ಪ್ರಸಾದ ಸ್ವೀಕರಿಸಿ ಸ್ವಾಮಿ ಕೊರಗ ತನಿಯ ದೈವದ ಕ್ರಪೆಗೆ ಪಾತ್ರರಾಗಬೇಕಾಗಿ ಸಾನಿಧ್ಯದ ಯಜಮಾನರಾದ ಶ್ರೀ ಭಾಸ್ಕರ ಬಂಗೇರರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post