• About us
  • Contact us
  • Disclaimer
Thursday, January 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸ್ಪ್ಲೆಂಡರ್, ಆ್ಯಕ್ಟಿವಾ ಬೈಕ್​ಗಳೇ ಈತನ ಟಾರ್ಗೆಟ್ ಅಂತರ್‌ ಜಿಲ್ಲಾ ಕಳ್ಳನ ಸಹಿತ ನಾಲ್ವರ ಬಂಧನ

Coastal Times by Coastal Times
March 3, 2025
in ಕ್ರೈಮ್ ನ್ಯೂಸ್
ಸ್ಪ್ಲೆಂಡರ್, ಆ್ಯಕ್ಟಿವಾ ಬೈಕ್​ಗಳೇ ಈತನ ಟಾರ್ಗೆಟ್ ಅಂತರ್‌ ಜಿಲ್ಲಾ ಕಳ್ಳನ ಸಹಿತ ನಾಲ್ವರ ಬಂಧನ
71
VIEWS
WhatsappTelegramShare on FacebookShare on Twitter

ಮಂಗಳೂರು : ಸ್ಪ್ಲೆಂಡರ್, ಆ್ಯಕ್ಟಿವಾಗಳನ್ನೇ ಟಾರ್ಗೆಟ್ ಮಾಡಿಕೊಂಡು 20 ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಆರೋಪಿಯನ್ನು ಮಂಗಳೂರು ಮಹಾನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಕಡಸೂರು ಮೂಲದ ಸದ್ಯ ಮೂಡುಬಿದಿರೆಯಲ್ಲಿ ವಾಸ್ತವ್ಯವಿರುವ ಮಣಿಕಂಠಗೌಡ ಕೆ (24) ಎಂಬಾತನೇ ಬೈಕ್ ಕದ್ದ ಆರೋಪಿ. ಈತ ಪಾರ್ಕಿಂಗ್ ಮಾಡಿದ್ದರಿಂದಲೇ ಬೈಕ್ ಅನ್ನು ಎಗರಿಸುವ ಚಾಲಾಕಿ. ಜಾತ್ರೆ, ಕೋಲ, ಕಂಬಳ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳೇ ಈತನ ಟಾರ್ಗೆಟ್. ಈ ಖತರ್ನಾಕ್ ಖದೀಮ ಇದೀಗ ಪೊಲೀಸ್ ಅತಿಥಿಯಾಗಿದ್ದು, ಈತನಿಂದ 20 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡುಬಿದಿರೆಯಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದರಿಂದ ಈತ ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನಗಳನ್ನು ಎಗರಿಸುವ ಚಾಕಚಕ್ಯತೆಯನ್ನು ಹೊಂದಿದ್ದ. ವಿಶೇಷವಾಗಿ ಹೀರೋ ಹೋಂಡಾ ಸ್ಪ್ಲೆಂಡರ್‌ಗಳಿಗೆ ರಿಸೇಲ್ ವ್ಯಾಲ್ಯೂ ಇರುವುದರಿಂದ ಅದನ್ನೇ ಕೇಂದ್ರೀಕರಿಸಿ ಕಳವು ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ಎಗರಿಸಿದ ಬೈಕ್‌ಗಳಿಗೆ ದಾಖಲೆ ಪತ್ರಗಳು ಇರದ ಕಾರಣ, ವಲಸೆ ಕಾರ್ಮಿಕರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಮಣಿಕಂಠ ತಾನು ಕದ್ದ ಬೈಕ್‌ಗಳನ್ನು ಕಾರ್ಕಳದ ಹೊಸ್ಮಾರಿನ ಈದು ಗ್ರಾಮದ ಸತೀಶ್ ಬಂಗೇರ(32), ಮೂಡುಬಿದಿರೆಯ ವಲ್ಪಾಡಿ ಪಣಪಿಲ ಗ್ರಾಮದ ದೀಕ್ಷಿತ್ (23), ವಿಜಯಪುರ ಜಿಲ್ಲೆಯ ಮೂಲದ ಸದ್ಯ ಮೂಡುಬಿದಿರೆ ಕೊಡ್ಯಡ್ಕದಲ್ಲಿ ವಾಸವಿರುವ ಸಂಗಣ್ಣ ಹೊನ್ನಾಳಿ (30) ಎಂಬವರ ಮೂಲಕ ಮಾರಾಟ ಮಾಡಿಸುತ್ತಿದ್ದ. ಸದ್ಯ ಮೂಡುಬಿದಿರೆಯಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ತನಿಖೆಯ ವೇಳೆ ಮಣಿಕಂಠ ನೀಡಿದ ಮಾಹಿತಿಯನ್ವಯ ಕದ್ದ ಬೈಕ್‌ಗಳ ಮಾರಾಟಕ್ಕೆ ಸಹಕರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ‌.

ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, ‘ಮಂಗಳೂರಿನ ವಿವಿಧೆಡೆ ಬೈಕ್ ಕಳವು ಪ್ರಕರಣ ವರದಿಯಾಗುತ್ತಿತ್ತು. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕಂಕನಾಡಿ ನಗರ ಠಾಣೆಯ ಕ್ರೈಂ ಟೀಂಗೆ ಆರೋಪಿಯ ಸುಳಿವು ಸಿಕ್ಕಿತ್ತು. ಆರೋಪಿ ಮೂಡಬಿದಿರೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷದಿಂದ ಕಂಬಳೋತ್ಸವ, ಜಾತ್ರೋತ್ಸವ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್​ಗಳಲ್ಲಿ ಪಾರ್ಕ್ ಮಾಡಲಾಗುತ್ತಿದ್ದ ದ್ವಿಚಕ್ರ ವಾಹನ ಕದಿಯುತ್ತಿದ್ದ. ಹೀರೋ ಹೋಂಡಾ ಸ್ಪ್ಲೆಂಡರ್‌, ಆ್ಯಕ್ಟಿವಾಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಎರಡು ವರ್ಷದಿಂದ 20 ದ್ವಿಚಕ್ರ ವಾಹನ ಕಳವು ಮಾಡಿದ್ದು, ಅವುಗಳನ್ನ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪುತ್ತೂರು ಬಳಿ ಕೆಎಸ್ಆರ್‌ಟಿಸಿ ಬಸ್‌ಗೆ ಆಟೋ ಡಿಕ್ಕಿ ; ಪ್ರಯಾಣಿಕರಿಬ್ಬರು ಸಾವು, ಚಾಲಕನ ಸ್ಥಿತಿ ಗಂಭೀರ

Next Post

ಮಂಗಳೂರು: ಯುವಕನನ್ನು ಸೆಕ್ಸ್‌ಗೆ ಬಳಸಿ ಮೋಸ ಮಾಡಿದ್ರಾ CISF ಮಹಿಳಾ ಅಧಿಕಾರಿ? ಇನ್ಸ್ಟಾದಲ್ಲಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

Related Posts

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ

January 15, 2026
1
ಬೆಳ್ತಂಗಡಿ: ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆ
ಕ್ರೈಮ್ ನ್ಯೂಸ್

ಬೆಳ್ತಂಗಡಿ: ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆ

January 14, 2026
58
Next Post
ಮಂಗಳೂರು: ಯುವಕನನ್ನು ಸೆಕ್ಸ್‌ಗೆ ಬಳಸಿ ಮೋಸ ಮಾಡಿದ್ರಾ CISF ಮಹಿಳಾ ಅಧಿಕಾರಿ? ಇನ್ಸ್ಟಾದಲ್ಲಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

ಮಂಗಳೂರು: ಯುವಕನನ್ನು ಸೆಕ್ಸ್‌ಗೆ ಬಳಸಿ ಮೋಸ ಮಾಡಿದ್ರಾ CISF ಮಹಿಳಾ ಅಧಿಕಾರಿ? ಇನ್ಸ್ಟಾದಲ್ಲಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

Discussion about this post

Recent News

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ

January 15, 2026
1
ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
19
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ

ಬೆಳ್ತಂಗಡಿ: ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಪೋಸ್ಟ್ ಮಾರ್ಟಂ ವರದಿ, ರಕ್ತ ಬಿದ್ದ ಜಾಗದಲ್ಲಿ ಲೂಮಿನಾಲ್ ಪರೀಕ್ಷೆ

January 15, 2026
ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d