ಚೆನ್ನೈ, ಏ 03: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿ ಶಿಕ್ಷೆಗೆ ಗುರಿಯಾಗಿ ಬಿಡುಗಡೆಯಾಗಿರುವ ಮೂವರು ದೋಷಿಗಳನ್ನು ತಮ್ಮ ತವರು ದೇಶ ಶ್ರೀಲಂಕಾಗೆ ಭಾರಿ ಬಿಗಿ ಭದ್ರತೆಯಲ್ಲಿ ಕಳುಹಿಸಿಕೊಡಲಾಗಿದೆ. ದೋಷಿಗಳಾದ ಮುರುಗನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಅವರನ್ನು ಉತ್ತಮ ನಡವಳಿಕೆಯ ಆಧಾರದಲ್ಲಿ 2022ರಲ್ಲಿಯೇ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿತ್ತು. ಅದರಂತೆ ಬಿಡುಗಡೆಯಾದ ಆರು ಜನರಲ್ಲಿ ಈ ಮೂವರು ಸೇರಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಅವರಿಗೆ ವಸತಿ ನೀಡಲಾಗಿದ್ದ ತಿರುಚಿರಾಪಳ್ಳಿಯ ವಿಶೇಷ ಶಿಬಿರದಿಂದ ಅವರನ್ನು ಇಂದು ಮುಂಜಾನೆ ಕರೆತಂದ ಪೊಲೀಸ್ ಅಧಿಕಾರಿಗಳ ತಂಡ ಬಳಿಕ ಅವರನ್ನು ಚೆನ್ನೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ವಿಮಾನ ಹತ್ತಿಸಿ ಬಿಡಲಾಗಿದೆ. ಅವರಿಗೆ ಇತ್ತೀಚೆಗಷ್ಟೇ ದ್ವೀಪ ರಾಷ್ಟ್ರ ಶ್ರೀಲಂಕಾದಿಂದ ಪಾಸ್‌ಪೋರ್ಟ್ ನೀಡಲಾಗಿತ್ತು.
ಈಗ ಶ್ರೀಲಂಕಾಗೆ ಹೊರಟ ಮೂವರಲ್ಲಿ ಒಬ್ಬರಾದ ಮುರುಗನ್ ಅವರು ಭಾರತೀಯ ಪ್ರಜೆಯಾದ ಬಿಡುಗಡೆಯಾದ ಆರು ಜನರಲ್ಲಿ ಒಬ್ಬರಾದ ನಳಿನಿ ಅವರನ್ನು ವಿವಾಹವಾಗಿದ್ದಾರೆ. ಹೀಗಾಗಿ ಪತಿ ಶ್ರೀಲಂಕಾಗೆ ತೆರಳುವ ಸಂದರ್ಭದಲ್ಲಿ ಪತ್ನಿ ನಳಿನಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕೆಲಕಾಲ ಆತನೊಂದಿಗೆ ಸಮಯ ಕಳೆದಿದ್ದಾಳೆ. ಮೂರು ದಶಕಗಳ ಹಿಂದೆ, ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿ, ಪ್ರಸ್ತುತ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆಯಿಂದಾಗಿ ನಳಿನಿ ಅವರಿಗೆ ಮರಣದಂಡನೆ ಶಿಕ್ಷೆಯಿಂದ ಕ್ಷಮದಾನ ಸಿಕ್ಕಿತ್ತು. ಉಳಿದ ಆರೋಪಿಗಳಿಗೆ ಶಿಕ್ಷೆಯಾಘಿತ್ತು. ಶಿಕ್ಷೆಯ ಸಮಯದಲ್ಲಿ ನಳಿನಿ ಗರ್ಭಿಣಿಯಾಗಿದ್ದಳು. ಪ್ರಸ್ತುತ ಈಕೆಯ ಪುತ್ರಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ವೈದ್ಯೆಯಾಗಿದ್ದಾಳೆ.
ಇನ್ನು ಉಳಿದ ಆರೋಪಿಗಳ ಅವರ ಕ್ಷಮಾದಾನ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ರಾಷ್ಟ್ರಪತಿಗಳು ಅತಿಯಾದ ವಿಳಂಬವನ್ನು ಉಲ್ಲೇಖಿಸಿ, ಇತರ ದೋಷಿಗಳ ಮರಣದಂಡನೆಯನ್ನು ಉನ್ನತ ನ್ಯಾಯಾಲಯವು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಇತರ ಆರೋಪಿಗಳು ಶಿಕ್ಷೆಯಿಂದ ಬಚಾವಾಗಿದ್ದಾರೆ.
ಇನ್ನು ನಳಿನಿ ತನ್ನ ಮಗಳನ್ನು ಸೇರಿಕೊಳ್ಳಲು ವೀಸಾಕ್ಕಾಗಿ ಪ್ರಯತ್ನಿಸುತ್ತಿದ್ದು, ಬಹುಶಃ ನಳಿನಿ ಪತಿ ಮುರುಗನ್‌ಗೂ ಕೊಲಂಬೋದಿಂದ ವೀಸಾಕ್ಕಾಗಿ ಪ್ರಯತ್ನಿಸಬಹುದು ನಾವು ಕೇವಲ ಅವರ ಕುಟುಂಬದ ಪುನರ್ಮಿಲನವನ್ನು ಬಯಸುತ್ತಿದ್ದೇವೆ ಎಂದು ನಳಿನಿ ಸೋದರ ಪಕಿನಾಥನ್ ಹೇಳಿದ್ದಾರೆ. ಉಳಿದ ಆರು ಜನ ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದು, ಓರ್ವ ಆರೋಪಿ ಸಂಥನ್ ಎಂಬಾತ ಚೆನ್ನೈ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದ.
Discover more from Coastal Times Kannada
Subscribe to get the latest posts sent to your email.
Discussion about this post