ಚೆನ್ನೈ, ಜುಲೈ 2: ತಿರುಪತಿ ಬಳಿಯ ತಾಲಕೋಣ ಜಲಪಾತಕ್ಕೆ ಟೂರ್ ಹೋಗಿದ್ದ ಚೆನ್ನೈನಲ್ಲಿ ಎಂಎಸ್ಸಿ ಓದುತ್ತಿದ್ದ ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ರೀಲ್ಸ್ ಮಾಡಲು ಹೋಗಿ ತನ್ನ ಜೀವವನ್ನೇ ಕಳಕೊಂಡಿದ್ದಾನೆ. ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಸುಮಂತ್(22) ಮೃತ ವಿದ್ಯಾರ್ಥಿ.
ಸ್ನೇಹಿತರೊಂದಿಗೆ ತಿರುಪತಿ ಬಳಿಯ ತಲಕೋನಾ ಜಲಪಾತಕ್ಕೆ ತೆರಳಿದ್ದ. ಸುಮಂತ್ ಈ ವೇಳೆ ನೀರಿಗೆ ಜಿಗಿಯಲು ಹೋಗಿದ್ದರು. ಈ ಸಮಯದಲ್ಲಿ, ಅವರು Instagram ರೀಲ್‌ಗಾಗಿ ನೀರಿಗೆ ಹಾರಿ ವೀಡಿಯೊವನ್ನು ಶೂಟ್ ಮಾಡಲು ತಮ್ಮ ಸ್ನೇಹಿತರನ್ನು ಕೇಳಿದರು.ಅದರಂತೆ ಆತನ ಸ್ನೇಹಿತರು ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು.ಸುಮಂತ್ ಬಂಡೆಯ ಮೇಲೆ ಹೋಗಿ 10 ರಿಂದ 15 ಅಡಿ ದೂರದಿಂದ ನೀರಿಗೆ ಹಾರಿದ್ದಾರೆ.
ಜಲಪಾತಕ್ಕೆ ಹಾರಿದ ನಂತರ ಸುಮಂತ್ ನೀರಿನಿಂದ ಮೇಲಕ್ಕೆ ಬಂದಿರಲಿಲ್ಲ. ಭಯಗೊಂಡ ಸ್ನೇಹಿತರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಾತ್ರಿ ವೇಳೆಗೆ ಸುಮಂತ್ ಶವ ನೀರಿನಾಳದಲ್ಲಿ ಬಂಡೆಗಳ ಎಡೆಯಲ್ಲಿ ಸಿಲುಕಿದ್ದನ್ನು ಪತ್ತೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಸುಮಂತ್ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಆತನ ತಲೆ ಎರಡು ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದರಿಂದ ಮೇಲೆ ಬರಲಾಗದೆ ಸಿಕ್ಕಿಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post