ಮಂಗಳೂರು, ಡಿ. 02 : ಮೂಡುಶೆಡ್ಡೆ ಗ್ರಾಮ ಪಂಚಾಯತ್ ಕಚೇರಿಯ ಎದುರು ಮಗಳೇ ತನ್ನ ತಾಯಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ರಕ್ಷಣಾ ವೇದಿಕೆ ಮಧ್ಯ ಪ್ರವೇಶಿಸಿ ಮಗಳು ನೇತ್ರಾವತಿ ವಿರುದ್ಧ ದೂರು ದಾಖಲಿಸಿದೆ. ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷೆಯಾಗಿರುವ ರಮಿತಾ ಸೂರ್ಯವಂಶಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನ.25ರಂದು ಮಧ್ಯಾಹ್ನ 1 ಗಂಟೆಗೆ ಮೂಡುಶೆಡ್ಡೆ ಗ್ರಾಪಂ ಎದುರು ತಾಯಿಗೆ ಮಗಳು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ನ.29ರ ಪೂ. 11ಕ್ಕೆ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ವಿಚಾರಿಸಿದಾಗ ಯಾವುದೇ ದೂರು ದಾಖಲಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂತು. ಹಾಗಾಗಿ ತಾನು ದೂರು ದಾಖಲಿಸುತ್ತಿದ್ದು, ಕಾನೂನು ಕ್ರಮ ಜರುಗಿಸುವಂತೆ ಮತ್ತು ಮಗಳಿಂದ ಹಲ್ಲೆಗೊಳಗಾದ ತಾಯಿಯ ಬಗ್ಗೆಯೂ ಮಾಹಿತಿ ನೀಡುವಂತೆ ರಮಿತಾ ಸೂರ್ಯವಂಶಿ ಡಿ.1ರಂದು ಮನವಿ ಮಾಡಿದ್ದಾರೆ, ಹಿರಿಯ ನಾಗರಿಕರಾದ ನಿರ್ಮಲಾ ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ದೂರನ್ನು ದಾಖಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕಿ ರಮಿತಾ ಸೂರ್ಯವಂಶಿ ಹಾಗೂ ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೀಕ್ಷಿತ್ ಉಪಸ್ಥಿತರಿದ್ದರು.
ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post