ಸಾಗರ್: ಮಧ್ಯ ಪ್ರದೇಶದಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಕಟ್ಟಡವನ್ನು ಜಿಲ್ಲಾಡಳಿತವು ಮಂಗಳವಾರ ನೆಲಸಮಗೊಳಿಸಿದೆ. ಜಗದೀಶ್ ಯಾದವ್ ಹತ್ಯೆ ಪ್ರಕರಣದಲ್ಲಿ ಮಿಶ್ರಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿತ್ತು. ಡಿಸೆಂಬರ್ 22ರಂದು ಜಗದೀಶ್ ಯಾದವ್ ಅವರ ಮೇಲೆ ಎಸ್‌ಯುವಿ ಹರಿಸಿ ಹತ್ಯೆಗೈಯಲಾಗಿದೆ ಎಂದು ಮಿಶ್ರಿ ವಿರುದ್ಧ ಆರೋಪಿಸಲಾಗಿದೆ
ಇಂದೋರ್‌ನ ವಿಶೇಷ ತಂಡ ಸ್ಫೋಟಕಗಳನ್ನು ಬಳಸಿ ಹೋಟೆಲ್ ಕಟ್ಟಡ ಧ್ವಂಸಗೊಳಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ನೆಲಸಮವಾಯಿತು. ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡಿಐಜಿ ತರುಣ್ ನಾಯಕ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಾಚರಣೆಗೆ ನೇತೃತ್ವ ವಹಿಸಿದರು.
ಸುರಕ್ಷತೆಯ ದೃಷ್ಟಿಯಿಂದ ಹೋಟೆಲ್‌ನ ಸುತ್ತಲೂ ಬ್ಯಾರಿಕೇಡ್ ಆಳವಡಿಸಲಾಗಿತ್ತು. ಹೋಟೆಲ್ ಸುತ್ತುಮುತ್ತಲಿನ ಕಟ್ಟಡಗಳಲ್ಲಿ ವಾಸಿಸುವ ಜನರನ್ನು ಎಚ್ಚರಿಸಲಾಗಿತ್ತು. ಎಲ್ಲವೂ ಸಮರ್ಪಕವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಗದೀಶ್ ಯಾದವ್ ಹತ್ಯೆ ಪ್ರಕರಣದಲ್ಲಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮಿಶ್ರಿಚಂದ್ ಗುಪ್ತಾ ತಲೆಮರೆಸಿದ್ದಾರೆ.
ಈ ಸಂಬಂಧ ಸುದ್ದಿಸಂಸ್ಥೆ ‘ಎಎನ್‌ಐ’ ವಿಡಿಯೊ ಹಂಚಿದೆ.
MP: Hotel of BJP leader, accused of murder razed with dynamites in Sagar
Read @ANI Story | https://t.co/NA5gtHTF2O#MadhyaPradesh #Sagar pic.twitter.com/sD9oX2co5x
— ANI Digital (@ani_digital) January 4, 2023
Discover more from Coastal Times Kannada
Subscribe to get the latest posts sent to your email.








Discussion about this post