ಕಾಸರಗೋಡು: ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ ’ಕವಿತಾ ಫೆಸ್ತ್’ ಈ ಭಾರಿ ಕಾಸರಗೋಡು ಜಿಲ್ಲೆಯ ಬೇಳದಲ್ಲಿ ನಡೆಯಲಿದೆ. ಜನೆವರಿ 8 ಭಾನುವಾರ ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕೊಂಕಣಿ ಬರಹಗಾರ ಹಾಗೂ ಪತ್ರಕರ್ತರಾದ ಆಸ್ಟಿನ್ ಡಿ ಸೋಜಾ ಪ್ರಭು ಉದ್ಘಾಟಿಸಲಿರುವರು. ಯುವ ಬರಹಗಾರರಾದ ಸ್ಟ್ಯಾನಿ ಬೇಳ ಹಾಗೂ ಕೆಬಿಎಂ, ಗೋವಾ ಇದರ ಅಧ್ಯಕ್ಷರಾದ ಅನ್ವೇಶ ಸಿಂಗ್ಭಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ನೆಲ್ಸನ್ ಹಾಗೂ ಲವೀನಾ ರೋಡ್ರಿಕ್ಸ್ ಪ್ರಾಯೋಜಕತ್ವದ ಚಾಫ್ರಾ ದೆಕೋಸ್ತಾ ಸ್ಮಾರಕ ಅಖಿಲ ಭಾರತ ಕವನ ವಾಚನ ಸ್ಪರ್ಧೆ ನಡೆಯಲಿದೆ. ಕಾಸರಗೋಡಿನಲ್ಲಿ ಕೊಂಕಣಿಗರು ಎಂಬ ವಿಶಯದ ಮೇಲೆ ಕೊಂಕಣಿ ಬರಹಗಾರ ಸಂತೋಶ್ ಪೆರ್ಲ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ. ವಿಲ್ಲಿಯಂ ಪಾಯ್ಸ್ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಂಕಣಿ ಕವಿ ಹಾಗೂ ಸಾಹಿತಿಗಳಾದ ವಿಲ್ಸನ್ ಕಟೀಲ್ ರಚನೆಯ ’ಚಿತುರ್ಲೆಚೆ ಅಚ್ಛೇ ದಿನ್’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.
ಸಂಜೆ ನಡೆಯಲಿರುವ ಸಮರೋಪ ಸಮಾರಂಭದಲ್ಲಿ ನಿರಾಕರ್ ಎಜುಕೇಶನ್ ಸೊಸಾಯ್ಟಿ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ್ ಮುಖ್ಯ ಅಥಿತಿಯಾಗಿ ಭಾಗವಹಿಸಲಿರುವರು. ಗೀತಾರಚನೆಕಾರ ರತ್ನಮಾಲ ದಿವಾಕರ್ ಹಾಗೂ ಅನಿವಾಸಿ ಉಧ್ಯಮಿ ಗೋಕುಲ್ ನಾಥ್ ಪ್ರಭು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಹಿರಿಯ ಕೊಂಕಣಿ ಕವಯತ್ರಿ ಇಂದು ಅಶೋಕ್ ಗೇರುಸೊಪ್ಪೆಯವರಿಗೆ ಮಥಾಯಸ್ ಕುಟಾಮ್ ಕವಿತಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
Discover more from Coastal Times Kannada
Subscribe to get the latest posts sent to your email.








Discussion about this post