ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು 2025ನೇ ಶೈಕ್ಷಣಿಕ ವರ್ಷದ ವಿವಿಧ ಪದವಿ ಕೋರ್ಸ್‌ಗಳ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಮಂಗಳೂರು ನಗರದ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಆಯಿಷತ್ ಲುತ್‌ಫಾ ನಜಾ ಕೆ.ಎ. (ನೋಂದಣಿ ಸಂಖ್ಯೆ: U05PA22S0023) ರವರು ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ಪದವಿ ಕೋರ್ಸ್ ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಇವರು ಒಟ್ಟು 4550 ಅಂಕಗಳಲ್ಲಿ 4220 ಅಂಕಗಳನ್ನು ಪಡೆದು ಶೇಕಡ 92.75 ಸಾಧನೆ ಮಾಡಿದ್ದು, 9.56 ಸಿಜಿಪಿಎ (CGPA) ಗಳಿಸುವ ಮೂಲಕ ತಮ್ಮ ಉತ್ತಮ ಶೈಕ್ಷಣಿಕ ಮಟ್ಟದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕುಮಾರಿ ಆಯಿಷತ್ ಲುತ್‌ಫಾ ನಜಾ ಕೆ.ಎ. ಅವರ ಈ ವಿಶಿಷ್ಟ ಸಾಧನೆಗಾಗಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ . ಇವರ ಈ ಅತ್ಯುತ್ತಮ ಸಾಧನೆಯಿಂದ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಕುಮಾರಿ ಲುತ್‌ಫಾ ಅವರು ಕಾಸರಗೋಡು ಜಿಲ್ಲೆಯ ತೆಕ್ಕಿಲ್ ನಿವಾಸಿಗಳಾದ ಶ್ರೀ ಅಬ್ದುಲ್ಲ ಕೆ ಮತ್ತು ಶ್ರೀಮತಿ ಆಯಿಶತ್ ಫರೀದಾ ಅವರ ಪುತ್ರಿ. ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿಯಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಈ ಸಾಧನೆ ಮತ್ತೊಮ್ಮೆ ಸಂಸ್ಥೆಯ ಶೈಕ್ಷಣಿಕ ಮೇಲುಗೈ ಮತ್ತು ಸಮಗ್ರ ಅಭಿವೃದ್ಧಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಆಯಿಷತ್ ಲುತ್‌ಫಾ ನಜಾ ಕೆ.ಎ. ಅವರ ಈ ವಿಶಿಷ್ಟ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post