ಬೆಂಗಳೂರು: ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಅನ್ನೋದು ದೃಢಪಟ್ಟಿದೆ. ಈ ಕಾರಣದಿಂದ ಅವರ ಡಿಗ್ರೀ ಹಾಗೂ ಎಲ್ಎಲ್ಬಿ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಹಿಮಾಂಶು ಭಾಟಿ ಎಂಬುವವರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿತ್ತು.
ಕೆಎನ್ ಜಗದೀಶ್ ಕುಮಾರ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ತಾವು ಎಲ್ಲ ಕಡೆಗಳಲ್ಲಿ ವಕೀಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣ. ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಅನ್ನೋದು ದೃಢಪಟ್ಟಿದೆ. ಈ ಕಾರಣದಿಂದ ಅವರ ಡಿಗ್ರೀ ಹಾಗೂ ಎಲ್ಎಲ್ಬಿ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಹಿಮಾಂಶು ಭಾಟಿ ಎಂಬುವವರು ಜಗದೀಶ್ ವಿರುದ್ಧ ದೂರು ನೀಡಿದ್ದರು. ಅವರ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿತ್ತು.
ದೆಹಲಿ ಬಾರ್ ಕೌನ್ಸಿಲ್ ಆದೇಶದ ಪ್ರಕಾರ ಜಗದೀಶ್ ಕುಮಾರ್ ಅವರು ಯಾವುದೇ ಕೋರ್ಟ್ನಲ್ಲಿ ವಾದ ಮಂಡಿಸುವಂತಿಲ್ಲ. ಅವರು ವಕೀಲರೇ ಅಲ್ಲ. ಈಗ ಹೆಸರಿಗಷ್ಟೇ ತಾವು ವಕೀಲರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಅಷ್ಟೇ. ಈ ವಿಚಾರ ಹೊರ ಬರುತ್ತಿದ್ದಂತೆ ಎಲ್ಲರೂ ಅವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದ ಅವರು ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅವರು ಒಮ್ಮೆ ಹೊರಕ್ಕೆ ಹೋಗುವ ನಿರ್ಧಾರಕ್ಕೂ ಬಂದಿದ್ದರು. ನಂತರ ಮನಸ್ಥಿತಿ ಬದಲಿಸಿಕೊಂಡಿದ್ದಾರೆ.
ಈ ವಾರಾಂತ್ಯದ ಎಪಿಸೋಡ್ಗೆ ಎಲ್ಲರೂ ಕಾದಿದ್ದಾರೆ. ಮೊದಲ ವಾರ ಸಾಮಾನ್ಯವಾಗಿ ಸುದೀಪ್ ಕೂಲ್ ಆಗಿಯೇ ಇರುತ್ತಾರೆ. ಎಲ್ಲರಿಗೂ ಮನೆ ಹೊಸದು ಎನ್ನುವ ಕಾರಣಕ್ಕೆ ಸುದೀಪ್ ಈ ರೀತಿ ಮಾಡುತ್ತಾರೆ. ಆದರೆ, ಈ ವಾರ ಎಲ್ಲರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಜಗದೀಶ್ ವಿರುದ್ಧ ಸುದೀಪ್ ಕೆಂಡಾಮಂಡಲ ಆಗೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post