ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನ ಸಬಾ ಕ್ಷೇತ್ರ ದ ಇಡ್ಯಾ ಪೂರ್ವ ವಾರ್ಡ್ 6 ರ ಕಟ್ಲ ನವನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 14 ಕೋಟಿ ರೂಪಾಯಿ 44 ಲಕ್ಷ ವೆಚ್ಚದಲ್ಲಿ 192 ಕುಟುಂಬಗಳಿಗೆ ನಿರ್ಮಾಣಗೊಳ್ಳುತ್ತಿರುವ ನೂತನ ವಸತಿ ಸಮುಚ್ಚಯ ಕಾಮಗಾರಿಗೆ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಬಡ ಕುಟುಂಬಗಳಿಗೆ ಸ್ವಂತ ಮನೆ ಒಂದು ಕನಸಾಗಿರುತ್ತದೆ. ಹೀಗಾಗಿ ಈ ಹಿಂದೆ ನೀಡಿದಂತೆ ಸೈಟ್ಗಳನ್ನ ನೀಡಲು ಸರಕಾರಿ ಭೂಮಿಯ ಕೊರತೆ ಇರುವುದರಿಂದ ಸರಕಾರವೇ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಿಸಿ ಮನೆ ಕಟ್ಟಿ ಕೊಡಲಾಗುತ್ತಿದೆ ಎಂದು ನುಡಿದರು.
ಜನತಾ ಕಾಲನಿಯಲ್ಲಿ 600 ಮನೆಗಳುಳ್ಳ ವಸತಿ ಸಮುಚ್ಚಯದ ಕೆಲಸ ನಡೆಯುತ್ತಿದೆ.ಒಟ್ಟು 792 ಮನೆಗಳು ನಗರ ಭಾಗದಲ್ಲಿ ಬಡ ಕುಟುಂಬಗಳಿಗೆ ಸಿಗಲಿದೆ ಎಂದರು. ಕಾರ್ಯಕ್ರಮದಲ್ಲಿ ವಸತಿ ಸಮುಚ್ಚಯದ ವಿನ್ಯಾಸವನ್ನು ಶಾಸಕರು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು. ಕಾಮಗಾರಿಗೂ ಮುನ್ನ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯನ ಕೋಟ್ಯಾನ್, ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಸರಿತಾ ಶಶಿಧರ್ ಲಕ್ಷ್ಮಿ ಶೇಖರ್ ದೇವಾಡಿಗ, ಶೋಭಾ ರಾಜೇಶ್, ವೇದಾವತಿ, ವರುಣ್ ಚೌಟ, ಶ್ವೇತಾ ಪೂಜಾರಿ, ಪ್ರಶಾಂತ ಮುಡಾಯಿಕೋಡಿ, ರಂಜಿನಿ ಕೋಟ್ಯಾನ್,ಮನೋಜ್ ಕುಮಾರ್ ಹಾಗೂ ಮಹಾ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು
ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಗುತ್ತಿಗೆದಾರರು, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರು ಮಹೇಶ್ ಮೂರ್ತಿ, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಯುವಮೋರ್ಚಾ ಅಧ್ಯಕ್ಷರು ಭರತ್ ರಾಜ್ ಕೃಷ್ಣಾಪುರ, ಬಾಬುಚಂದ್ರ, ಸುಲತಾ ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಹಿರಿಯ ಬಿಜೆಪಿ ಕಾರ್ಯಕರ್ತರು ಚಂದ್ರಹಾಸ್ ಶೆಟ್ಟಿ, ಸ್ಥಳೀಯರಾದ ಶೇಖರ್, ಆನಂದ ಪೂಜಾರಿ ಬಿಜೆಪಿ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು, ಫಲಾನುಭವಿಗಳು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post