ನೆಲ್ಯಾಡಿ : ಪ್ರಿಯಾ ಫ್ಯಾಶನ್ಸ್ ಸಂಸ್ಥೆಯ ಆಯೋಜನೆಯಲ್ಲಿ ಹಾಗೂ ಗೋಶನ್ ಈವೆಂಟ್ ಮೀಡಿಯಾ ಅವರ ಸಹಯೋಗದಲ್ಲಿ ದುಬೈನಲ್ಲಿ ನಡೆದ ಮಿಸೆಸ್ ಮಂಗಳೂರು ದಿವಾ 2025 ಸ್ಪರ್ಧೆಯಲ್ಲಿ ಜಿಲ್ಲೆಯ ನೆಲ್ಯಾಡಿ ನಿವಾಸಿ, ಪ್ರಸ್ತುತ ದುಬೈಯಲ್ಲಿರುವ ಮಿನು ಜೋಸ್ ಅವರು ಈ ಬಾರಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕೊಕ್ಕಡ ಸಮೀಪದ ಶಿಶಿಲದಲ್ಲಿ ಜನಿಸಿದ ಮಿನು ಜೋಸ್, ನೆಲ್ಯಾಡಿದ ಯುವಕನನ್ನು ವಿವಾಹವಾಗಿ ಪ್ರಸ್ತುತ ದುಬೈನಲ್ಲಿ ವಾಸವಾಗಿದ್ದಾರೆ. ಮಿನು ಜೋಸ್ ಅವರ ಪತಿ ಅನೂಪ್ ಜೋಸ್, ಮಗಳು ಐಝಲ್ ಎಲಿಜಬೆತ್.
ಆಕರ್ಷಕ ವೇಷಭೂಷಣೆ, ಆತ್ಮವಿಶ್ವಾಸಭರಿತ ಪ್ರದರ್ಶನ ಹಾಗೂ ವಿನಯಶೀಲ ವ್ಯಕ್ತಿತ್ವದಿಂದ ಮಿನು ಜೋಸ್ ಅವರು ದುಬೈ ತೀರ್ಪುಗಾರರ ಮೆಚ್ಚುಗೆ ಗಳಿಸಿದರು. ಈ ಸ್ಪರ್ಧೆಯಲ್ಲಿ ನಯನಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಹಾಗೂ ಅಶ್ಮಿತಾ ಕೊಟ್ಯಾನ್ ಸೆಕೆಂಡ್ ರನ್ನರ್ ಅಪ್ ಆದರು. ಮಿಸ್ ವಿಭಾಗದಲ್ಲಿ ತನುಶ್ರೀ ಶೆಟ್ಟಿ ವಿಜೇತೆ ಆಗಿ, ಶೆರ್ಲಿ ಕ್ರಾಸ್ತಾ ಫಸ್ಟ್ ರನ್ನರ್ ಅಪ್ ಮತ್ತು ಸಿಂಥಿಯಾ ಡಿ’ಸೋಝಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು.


ಮಂಗಳೂರು ಮೂಲದ ಪ್ರತಿಭೆಗಳಿಗೆ ತಮ್ಮ ಕಿರೀಟದ ಕನಸನ್ನು ನನಸು ಮಾಡಿಕೊಳ್ಳಲು ಈ ವೇದಿಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಮಿನು ಜೋಸ್ ಅವರ ಈ ಸಾಧನೆ ವಿದೇಶದಲ್ಲಿರುವ ಕರಾವಳಿ ಮಹಿಳೆಯರಿಗೆ ಪ್ರೇರಣೆಯಾದಂತಾಗಿದೆ.
ಮಿನು ಜೋಸ್ ಅವರ ಮಾವ ಜೋಸ್ ಅವರು ಮಾಧ್ಯಮದ ಜೊತೆಗೆ ಮಾತನಾಡಿ, ನಮ್ಮ ಮನೆತನಕ್ಕೆ ಇದು ಬಹಳ ಹೆಮ್ಮೆಯ ಕ್ಷಣ. ನನ್ನ ಸೊಸೆ ಮತ್ತು ನಮ್ಮ ಮನೆಮಗಳು ಮಿನು ದುಬೈಯಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ‘ಮಿಸೆಸ್ ಮಂಗಳೂರು ದಿವಾ 2025’ ಕಿರೀಟ ಗೆದ್ದಿರುವುದು ನಮ್ಮೆಲ್ಲರಿಗೂ ಅತ್ಯಂತ ಸಂತೋಷ ತಂದಿದೆ ಎಂದರು.
Discover more from Coastal Times Kannada
Subscribe to get the latest posts sent to your email.







Discussion about this post