ಮಂಗಳೂರು : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ. ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಹಾಗೂ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮ ದಿನಾಂಕ 07- 01 -2026 ನೇ _ಬುಧವಾರ ಸಾಯಂಕಾಲ 6.00 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪ, ಅಶೋಕನಗರ, ಮಂಗಳೂರು, ಇಲ್ಲಿ ನೆರವೇರಲಿದೆ.
ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಲಾದ ದೈವಜ್ಞ ಶ್ರೀ ಮಠವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯಗಳನ್ನು ಪೂರೈಸುತ್ತಾ ಮುಂದುವರೆಯುತ್ತಿದ್ದು, ಇದೀಗ ದೇವರನ್ನು ತಿಳಿದು ದೈವಯಜ್ಞ ಮುಂತಾದವುಗಳನ್ನು ಆಚರಿಸುತ್ತಾ ದೈವಜ್ಞರೆಂದು ಖ್ಯಾತರಾದ ಸಮಾಜ ಬಾಂಧವರನ್ನು ಸಂದರ್ಶಿಸಲು ಹಾಗೂ ತಮ್ಮ ಉತ್ತರಾಧಿಕಾರಿಯಾದ ಶ್ರೀಗಳವರನ್ನು ಪರಿಚಯಿಸಲು ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ತತ್ ಕರಕಮಲ ಸಂಜಾತರಾದ
ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರೊಂದಿಗೆ “ದೈವಜ್ಞ ದರ್ಶನ” ಎಂಬ ಕಾರ್ಯ ನಿಮಿತ್ತ ಮಂಗಳೂರಿಗೆ ಚಿತ್ತೈಸಲಿರುವರು.
ಸಂಜೆ 5.00 ಗಂಟೆಗೆ ಶ್ರೀ ಶ್ರೀಗಳವರ ಆಗಮನ : ಪೂರ್ಣಕುಂಭ ಸ್ವಾಗತ: ಉಭಯ ಶ್ರೀಗಳು ಮಣ್ಣಗುಡ್ಡೆ ಗುರ್ಜಿ ಬಳಿಯಿಂದ ಸಂಜೆ 5.30ಕ್ಕೆ ಪೂರ್ಣಕುಂಭ ಸ್ವಾಗತ – ಮೆರವಣಿಗೆ ಮೂಲಕ ದೈವಜ್ಞ ಕಲ್ಯಾಣ ಮಂಟಪಕ್ಕೆ ಅಗಮಿಸಲಿರುವರು. ದೈವಜ್ಞ ಮಹಿಳಾ ಮಂಡಳಿಯವರಿಂದ ಚೆಂಡೆ ಹಾಗೂ ಭಜನೆ ಕುಣಿತ ಹಾಗೂ ಟ್ಯಾಬ್ಲೋ, ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ದೈವಜ್ಞ ಕಲ್ಯಾಣ ಮಂಟಪಕ್ಕೆ ಆಗಮಿಸಿ ಗೌರವ ಸನ್ಮಾನ ಸ್ವೀಕರಿಸಿ, ಬಳಿಕ ಸಂಜೆ 6:30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಲಿರುವರು. ಇದೇ ವೇಳೆ ಗುರುವಂದನೆ. ಶ್ರೀ ಶ್ರೀಗಳವರಿಗೆ ಫಲಪುಷ್ಪ ಸಮರ್ಪಣೆ. ದಾನಿಗಳಿಗೆ ಗೌರವಾರ್ಪಣೆ ಹಾಗೂ ಶ್ರೀ ಶ್ರೀಗಳವರಿಗೆ ಸಮಾಜದ ವತಿಯಿಂದ ಪಾದೂಕಾ ಪೂಜೆ ನೆರವೇರಲಿದೆ ಎಂದು ದೈವಜ್ಞ ಬ್ರಾಹ್ಮಣರ ಸಂಘದ ಪ್ರಕಟಣೆ ತಿಳಿಸಿದೆ.

Discover more from Coastal Times Kannada
Subscribe to get the latest posts sent to your email.







Discussion about this post