ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜನವರಿ 3, 2026 ಶನಿವಾರ, ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು.


ಈ ಸಂಧರ್ಭದಲ್ಲಿ ಸಾಮಾಜಿಕ ಸೌಹಾರ್ದತೆ ಯನ್ನು ಉತ್ತೇಜಿಸುವ “ಸಹಬಾಳ್ವೆ” ಕಾರ್ಯಕ್ರಮ ಪುಣ್ಯಕ್ಷೇತ್ರದ ಆಂಗಣದಲ್ಲಿ ನಡೆಯಿತು. ಮುನೀರ್ ಕಾಟಿಪಳ್ಳ (ಸಾಮಾಜಿಕ ಕಾರ್ಯಕರ್ತ ), ಶ್ರೀಮತಿ ಶಾಲೇಟ್ ಪಿಂಟೊ (ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ) ಹಾಗೂ ಶ್ರೀ ದಿನೇಶ್ ಹೆಗಡೆ, ಉಳೇಪಾಡಿ (ಮಾನವ ಹಕ್ಕುಗಳ ಹೋರಾಟಗಾರ, ವಕೀಲರು) ಭಾಗವಹಿಸಿದರು. ಸಮಾಜದಲ್ಲಿ ಸಹೋದರತ್ವ ಮತ್ತು ಏಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.



ಕಾರ್ಯಕ್ರಮದಲ್ಲಿ ವಂ. ಪ್ರವೀಣ್ ಮಾರ್ಟಿಸ್ (ಉಪಕುಲಪತಿ, ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯ); ಸಿಸ್ಟರ್ ರೀನಾ ಡಿಸೋಜಾ, (ಸಾಂತಾ ಕ್ರೂಸ್ ಕಾನ್ವೆಂಟ್, ಕುಲಶೇಖರ); ಹಾಗೂ ಕಾರ್ಪೊರೇಟರ್ ಗಳಾದ ಕೇಶವ್ ಮತ್ತು ನವೀನ್ ಉಪಸ್ಥಿತರಿದ್ದರು. ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನು ಗೌರವಿಸಲಾಯಿತು. ವಂ. ಮೆಲ್ವಿನ್ ಡಿ’ಕುನ್ನಾ, ಸಂತ ಜೋಸೆಫ್ ಮಠದ ಮಠಾಧೀಶರು) ಮತ್ತು ವಂ. ಸ್ಟೀಫನ್ ಪಿರೇರಾ, ಪುಣ್ಯಕ್ಷೇತ್ರದ ನಿರ್ದೇಶಕರು ಭಕ್ತರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆಯ ಭರವಸೆ ನೀಡಿದರು.
ಅಂತಿಮವಾಗಿ ವಂ. ಪ್ರವೀಣ್ ಮಾರ್ಟಿಸ್ ಧ್ವಜಕ್ಕೆ ಆಶೀರ್ವಾದ ನೀಡಿ ಧ್ವಜಾರೋಹಣ ಮಾಡುವ ಮೂಲಕ ನವೆನಾ ಮತ್ತು ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ವರ್ಷದ ಮಹೋತ್ಸವದ ಧ್ಯಾನದ ವಿಷಯ “ ಕರೆದಿಹರು ಕಾರ್ಮೆಲ್ ಗಿರಿಗೆ, ಕುರಿಮರಿಯ ಲಗ್ನ ಉತ್ಸವಕೆ” ಎಂಬುದಾಗಿದ್ದು, ಶಿಲುಬೆಯ ಸಂತ ಯೊವಾನ್ನರ ಉಪದೇಶಗಳಿಂದ ಪ್ರೇರಿತವಾಗಿದೆ. ಅವರ ಸಂತತ್ವದ 300ನೇ ರ‍್ಷ ಮತ್ತು ಪವಿತ್ರ ರ‍್ಮಸಭೆಯ ಪಂಡಿತರೆಂದು ಘೋಷಿಸಲಾದ 100ನೇ ರ‍್ಷದ ಸ್ಮರಣೆಯೂ ಈ ವರ್ಷ ಆಚರಿಸಲಾಗುತ್ತಿದೆ.
ಜನವರಿ 5 ರಿಂದ 13ರವರೆಗೆ ದಿನವಿಡೀ ನವೆನಾವಿಧಿಗಳು, 9 ಪೂಜಾಕರ‍್ಯಗಳು ಹಾಗೂ ಪವಿತ್ರ ಸಂಸ್ಕಾರದ ಆರಾಧನೆ ನಡೆಯಲಿದ್ದು, ವರ್ಷದ ಜಾತ್ರೆ ಜನವರಿ 14 ಮತ್ತು 15, 2026ರಂದು ನಡೆಯಲಿದೆ.

Discover more from Coastal Times Kannada
Subscribe to get the latest posts sent to your email.







Discussion about this post