ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾದ ಟೈಟಲ್ ವಿಜಯದಶಮಿ ಹಬ್ಬದಂದು (ಅ.5 ರಂದು) ರಿವೀಲ್ ಆಗಿದೆ. ಗಣೇಶ ಹಬ್ಬದಂದು ರಮ್ಯಾ ಅವರು ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಆರಂಭಿಸಿದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಆ್ಯಪಲ್ ಬಾಕ್ಸ್ ನಲ್ಲಿ ಎರಡು ಚಿತ್ರ ಶೀಘ್ರದಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದ್ದರು. ಈಗ ಮೊದಲ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ವಿಭಿನ್ನ ಟೈಟಲ್ ಜೊತೆ ರಮ್ಯ ಹೋಂ ಬ್ಯಾನರ್ ನಲ್ಲಿ ತೆರೆಗೆ ಬರ್ತಿದ್ದಾರೆ. ನಟಿ ರಮ್ಯಗೆ ನಾಯಕ ಯಾರು ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದ್ದು ರಮ್ಯನಿಗೆ ರಾಜ್ ಬಿ ಶೆಟ್ಟಿ ಜೊತೆಯಾಗಲಿದ್ದಾರೆ. ಕೇವಲ ಹೀರೋ ಮಾತ್ರವಲ್ಲ ರಮ್ಯ ಈ ಸಿನಿಮಾಗೆ ರಾಜ್ ಬಿ ಶೆಟ್ಟಿ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ವಿಜಯ ದಶಮಿಯಂದು ಈ ಸಿಹಿಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಮ್ಯಾ ಅವರು ಬಹು ಸಮಯದ ಬಳಿಕ ಬಣ್ಣದ ಲೋಕಕ್ಕೆ ನಟಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ʼಗುರುಡ ಗಮನ ವೃಷಭ ವಾಹನʼದ ಬಳಿಕ ರಾಜ್.ಬಿ.ಶೆಟ್ಟಿ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಪೋಸ್ಟರ್ ನೋಡಿದರೆ ಮೇಲ್ನೋಟಕ್ಕೆ ಇದೊಂದು ಲವ್ ಸ್ಟೋರಿವುಳ್ಳ ಕಥೆಯ ಹಾಗೆ ಕಾಣುತ್ತದೆ.
And here is the title of our maiden production
Swathi Muthina Male Haniye 🌼#HappyVijayadashami #SwathiMutthinaMaleHaniye @divyaspandana @rajbshettyOMK @m3dhun @lighterbuddha pic.twitter.com/iMiWX4pfqu— Applebox Studios (@StudiosApplebox) October 5, 2022
Discover more from Coastal Times Kannada
Subscribe to get the latest posts sent to your email.








Discussion about this post