ನವದೆಹಲಿ: ಹರಿಯಾಣ ಮತ್ತು ಪಂಜಾಬ್‍ನಲ್ಲಿ ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ಮನೆ ಮೇಲೆ ಇಡಿ (Enforcement Directorate) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ 5 ಕೋಟಿ ರೂ. ಹಣ, ವಿದೇಶಿ ನಿರ್ಮಿತ ಅಕ್ರಮ ಶಸ್ತ್ರಾಸ್ತ್ರ, 300 ಕಾಟ್ರಿಡ್ಜ್‌ಗಳನ್ನು, 100 ಮದ್ಯದ ಬಾಟಲಿಗಳು ಸೇರಿದಂತೆ 4 ರಿಂದ 5 ಕೆಜಿ ತೂಕದ ಮೂರು ಚಿನ್ನದ ಬಿಸ್ಕೆಟ್‍ಗಳು ಪತ್ತೆಯಾಗಿವೆ.
ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‍ಎಲ್‍ಡಿ) ಮಾಜಿ ಶಾಸಕ ದಿಲ್‍ಬಾಗ್ ಸಿಂಗ್, ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ಗಣಿಗಾರಿಕೆಯನ್ನು ನಿಷೇಧಿಸಿದ ನಂತರ ಯಮುನಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಂಡೆಗಳು, ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಲು ಹರಿಯಾಣ ಪೊಲೀಸರು ಅನೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಬಳಿಕ ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ಇದಾದ ಬಳಿಕ ಈ ಇಬ್ಬರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು ಅಪಾರ ಪ್ರಮಾಣದ ನಗದು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಣಿಗಾರಿಕೆ ಸಂಬಂಧಿತ ತೆರಿಗೆ ವಂಚನೆ ತಡೆಯಲು ಸರ್ಕಾರ ಆನ್‍ಲೈನ್ ಪೋರ್ಟಲ್‍ನ್ನು ಜಾರಿಗೆ ತಂದಿದೆ. ಕೆಲವು ಶಾಸಕರು ಈ ನಕಲಿ ಪೋರ್ಟಲ್ ಸೃಷ್ಟಿಸಿ ವಂಚಿಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post