ಮಂಗಳೂರು: ಜನವರಿ 17ರಂದು ಮಂಗಳೂರಿನ ಕೆ.ಸಿ.ರೋಡ್ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ನಡೆದ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸುರಕ್ಷತಾ ಕ್ರಮದ ಬಗ್ಗೆ ಸಲಹೆ ನೀಡಿದರು.
ಫೆ.3, 4, 5ರಂದು ಈ ಸಭೆ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿ, ಇತರ ಬ್ಯಾಂಕ್‌ಗಳು, ಎಟಿಎಂಗಳು, ಸಹಕಾರಿ ಸಂಘಗಳು, ಕೋ-ಆಪರೇಟಿವ್ ಸೊಸೈಟಿಗಳು, ಫೈನಾನ್ಸ್ ಕಂಪೆನಿಗಳು, ಮೈಕ್ರೋ ಫೈನಾನ್ಸ್ ಕಂಪೆನಿಗಳು, ಜುವೆಲ್ಲರಿ ಅಂಗಡಿಗಳು ಚಿನ್ನದ ಗಿರವಿ ಅಂಗಡಿಗಳ 723 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಂಸ್ಥೆಗಳು ಹೈರೆಸೊಲ್ಯೂಷನ್ ಕೆಮರಾ, ಗ್ರಿಲ್ಸ್ ಕೊಲ್ಲಾಪ್ಸಿಬಲ್‌ಗೇಟ್, ಬರ್ಗಲರಿ ಅಲಾರ್ಮ್ ಪ್ಯಾನಿಕ್ ಸ್ವಿಚ್, ಸೆನ್ಸರ್‌ಯುಕ್ತ ಬಾಗಿಲುಗಳು, ಸೆನ್ಸಾರ್ ಲಾಕರ್‌ಗಳು (Collapsible gate, Burglary Alarm panic switches, Sensor doors & Sensor lockers) ಆಯುಧ ಸಹಿತ ಸೆಕ್ಯುರಿಟಿ ಗಾರ್ಡ್ ಅಳವಡಿಸುವ ಬಗ್ಗೆ ಆಯುಕ್ತ ಅನುಪಮ್ ಅಗರ್ವಾಲ್ ಸೂಚಿಸಿದ್ದಾರೆ. ಅಲ್ಲದೆ ಸಿಬಂದಿಗೆ ಬ್ಯಾಂಕ್ ಸುರಕ್ಷೆ ಬಗ್ಗೆ ತರಬೇತಿ, ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.
ದರೋಡೆ, ಕಳ್ಳತನ ಅಪರಾಧವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮತ್ತು ಸೂಕ್ತ ಸೂಚನೆ, ಆರ್ಬಿಐ ಮಾರ್ಗಸೂಚಿಯಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆ ನೀಡಿದರು. ಅಪಾಯ ಮತ್ತು ತುರ್ತು ಸಂದರ್ಭದಲ್ಲ್ಲಿ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಕೃತ್ಯ ನಡೆದ ಸ್ಥಳಗಳಿಗೆ ತಲುಪಿ ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಮನವರಿಕೆ ಮಾಡಿಕೊಲಾಯಿತು.
ಕೆಲವು ಸಂಸ್ಥೆಗಳು ಸೂಕ್ತ ಸುರಕ್ಷತೆ ಹಾಗೂ ಭದ್ರತೆಗಾಗಿ ಅತ್ಯಾಧುನಿಕ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅವರುಗಳನ್ನು ಪ್ರಶಂಶಿಸಿ ಇತರೆ ಸಂಸ್ಥೆಗಳಲ್ಲಿಯೂ ಸಹ ಅದೇ ರೀತಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
ಎಲ್ಲಾ ಠಾಣಾಧಿಕಾರಿಗಳು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಭದ್ರತೆಯ ಬಗ್ಗೆ ಚರ್ಚಿಸಿ ಪರಿಶೀಲಿಸಿ ಸುರಕ್ಷತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸೂಚಿಸಿದ್ದು, ತಮ್ಮ ಗ್ರಾಹಕರು ಅಪರಿಚಿತರಿಂದ ಸೈಬರ್ ವಂಚನೆಗೊಳಗಾದಲ್ಲಿ ಕೂಡಲೇ ಸೈಬರ್ ಕ್ರೈಂ ಸಹಾಯವಾಣಿ 1930 ನಂಬ್ರಕ್ಕೆ ಕರೆಮಾಡಲು ತಿಳುವಳಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸಹ ಸೂಚನೆ ನೀಡಿ ಗ್ರಾಹಕರಿಗೆ ಸಾಲ ವಸೂಲಿ ನೆಪದಲ್ಲಿ ಯಾವುದೇ ಮಾನಸಿಕ ಕಿರುಕುಳ ಮತ್ತು ತೊಂದರೆ ಕೊಡದಂತೆ ಸೂಚಿಸಲಾಗಿದೆ. ಎಲ್ಲಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕೆಂದು ತಿಳುವಳಿಕೆ ನೀಡಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post