• About us
  • Contact us
  • Disclaimer
Friday, March 6, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ

Coastal Times by Coastal Times
March 6, 2026
in ಕ್ರೈಮ್ ನ್ಯೂಸ್
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ
3
VIEWS
WhatsappTelegramShare on FacebookShare on Twitter

ಮಂಗಳೂರು, ಮಾರ್ಚ್ 5: ನಗರದ ಬದ್ರಿಯಾ ರಸ್ತೆಯ ಲಾಡ್ಜ್ ಒಂದರಲ್ಲಿ ಕುಳಿತು ನಿಷೇಧಿತ ಮಾದಕ ದ್ರವ್ಯ MDMA ಮತ್ತು ಹೈಡ್ರೋ ವೀಡ್ ಗಾಂಜಾವನ್ನು ಮಂಗಳೂರು ನಗರದ ಕಾಲೇಜು  ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ಪಾರ್ಕ್ ಮೈದಾನ  ಬಂದರು ಬಳಿಯಲ್ಲಿ ನಿಷೇಧಿತ ಮಾದಕ ವಸ್ತು ಹೈಡ್ರೋ ವೀಡ್ ಗಾಂಜಾ ಮತ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಮೂಲತಃ ಉಡುಪಿ ಜಿಲ್ಲೆಯ ಕೋಟೇಶ್ವರ, ಹಾಲಿ ಪಾಂಡೇಶ್ವರ ನಿವಾಸಿಗಳಾದ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಬಲ್ಮಠ ನಿವಾಸಿ ಮಕ್ಸೂದ್ ಸಾಗ್ (23), ಕೊಟ್ಟಾಯಂ ಮೂಲದ ಫೆಲಿಕ್ಸ್ ಪಿ. ಜೋಸೆಫ್ (20), ಕಂಕನಾಡಿ ನಿವಾಸಿ ಎಡಲ್ ರೋಚ್ (33), ಮಲ್ಲಿಕಟ್ಟೆ ನಿವಾಸಿ ಆರೋನ್ ವಿಶಾಲ್ ಲಾ‍ಸ್ರಾದೋ (18) ಬಂಧಿತರು. ಒಂದು ಪ್ರಕರಣದಲ್ಲಿ ಆರೋಪಿಗಳಿಂದ MDMA 53.87 ಗ್ರಾಂ, ಹೈಡ್ರೋವಿಡ್ ಗಾಂಜಾ – 103. 20 ಗ್ರಾಂ ಮತ್ತು MG Hector ವಾಹನ ಹಾಗೂ ಇನ್ನೊಂದು ಪ್ರಕರಣದಲ್ಲಿ ಹೈಡ್ರೋವಿಡ್ ಗಾಂಜಾ – 60 ಗ್ರಾಂ, ಗಾಂಜಾ- 1 ಕೆಜಿ155 ಗ್ರಾಂ ಮತ್ತು Maruti Swift ಕಾರು ವಶಕ್ಕೆ ಪಡೆಯಲಾಗಿದೆ. ‌

ಮುಂಬೈ ನಿವಾಸಿಯಾದ  ಸಂದೀಪ್ ಶೆಟ್ಟಿ ದುಬೈನಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ವೀಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಿಸುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಬೇರೆಡೆ ಸಾಗಿಸುವ ಕೆಲಸವನ್ನು ಎಡಲ್ ರೋಚ್ ಮಾಡುತ್ತಿದ್ದನು. ಎಡಲ್ ರೋಚ್  ಮತ್ತು ಆರೋನ್ ವಿಶಾಲ್ ಲಾ‍ಸ್ರಾದೋ ಅವರು ಮಕ್ಸೂದ್  ಸಾಗ್ ಎಂಬಾತನ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಎಂಬವರಿಗೆ  ಬೆಂಗಳೂರಿನಲ್ಲಿ ಮಾದಕ ವಸ್ತುವನ್ನು ಪೂರೈಸಿರುತ್ತಾರೆ.

ಮೊಹಮ್ಮದ್ ಸಯ್ಯದ್ ಆಫ್ರಿದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವಿಡ್‌ ಮತ್ತು ಎಂ.ಡಿ.ಎಂ.ಎ ಅನ್ನು ತಮ್ಮ ಎಂ.ಜಿ ಹೆಕ್ಟರ್‌ ವಾಹನದಲ್ಲಿ ತೆಗೆದುಕೊಂಡು ಬಂದಿದ್ದರು. ಇವರು ಬಂದರಿನ ಕ್ಲಾಸಿಕ್ ಕಂಫರ್ಟ್ ಲಾಡ್ಜ್ ನಲ್ಲಿ ಇರುವಾಗ ಬಂಧನ ಮಾಡಲಾಗಿದೆ.‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಸ್ಟೇಟ್ ಬ್ಯಾಂಕ್ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

Next Post

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

Related Posts

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ 10 ಲಕ್ಷ ರೂಪಾಯಿ ನಗದು,181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಕಳ್ಳರು
ಕ್ರೈಮ್ ನ್ಯೂಸ್

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ 10 ಲಕ್ಷ ರೂಪಾಯಿ ನಗದು,181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಕಳ್ಳರು

March 5, 2026
33
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ
ಕ್ರೈಮ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
109
Next Post
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

Discussion about this post

Recent News

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

March 6, 2026
8
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ

ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ

March 6, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

March 6, 2026
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ

ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ; ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ, ಆರು ಖದೀಮರ ಸೆರೆ

March 6, 2026
ಮಂಗಳೂರು: ಸ್ಟೇಟ್ ಬ್ಯಾಂಕ್ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

ಮಂಗಳೂರು: ಸ್ಟೇಟ್ ಬ್ಯಾಂಕ್ ಮೀನುಗಾರ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

March 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d