• About us
  • Contact us
  • Disclaimer
Monday, March 23, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ

Coastal Times by Coastal Times
August 6, 2025
in ಕ್ರೈಮ್ ನ್ಯೂಸ್
ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ
6
VIEWS
WhatsappTelegramShare on FacebookShare on Twitter

ಮಂಗಳೂರು: ಅಕ್ರಮವಾಗಿ ಪಿಸ್ತೂಲ್‌ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪಂಪ್‌ವೆಲ್‌ನ ತೌಸಿಫ್ ಅಹಮ್ಮದ್‌ (38) ಮತ್ತು ಕೆ.ಸಿ.ರೋಡ್‌ನ‌ ಅಬ್ದುಲ್‌ ಖಾದರ್‌ (41) ಬಂಧಿತರು.

ಪಿಎಸ್‌ಐ ಶಿವಕುಮಾರ್‌ ಅವರು ಸಿಬಂದಿಯ ಜತೆ ಸೋಮವಾರ ಅಪರಾಹ್ನ ರೌಂಡ್ಸ್‌ ಕರ್ತವ್ಯ ನಡೆಸುತ್ತಾ ಜೆಪ್ಪಿನಮೊಗರು ಜಂಕ್ಷನ್‌ ಕಡೆಯಿಂದ ಕಲ್ಲಾಪು ಕಡೆಗೆ ಹೋಗುತ್ತಿದ್ದಾಗ ಕಡೆಕಾರ್‌ ಕ್ರಾಸ್‌ ಬಳಿ ಆರೋಪಿಗಳು ನಿಂತಿದ್ದರು. ಪೊಲೀಸ್‌ ವಾಹನವನ್ನು ನೋಡಿ ಓಡಿ ಹೋಗಲು ಯತ್ನಿಸಿದ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಿಚಾರಿಸಿದಾಗ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಪಿಸ್ತೂಲ್‌ ಹಾಗೂ 6 ಸಜೀವ ಗುಂಡುಗಳನ್ನು ಹೊಂದಿರುವುದು ಕಂಡುಬಂದಿದೆ.

ಕುತ್ತಾರ್‌ ನಿವಾಸಿ ಅಜೀಜ್‌ ಆಗ್ರಾಕ್ಕೆ ಹೋಗಿ ಅನಂತರ ಅಲ್ಲಿಗೆ ಅಬ್ದುಲ್‌ ಖಾದರ್‌ನನ್ನು ಕರೆಯಿಸಿಕೊಂಡಿದ್ದ. ಅಲ್ಲಿಂದ 2025ರ ಮಾರ್ಚ್‌ನಲ್ಲಿ ಅವರೀರ್ವರು ಪಿಸ್ತೂಲ್‌ ಮತ್ತು ಮದ್ದುಗುಂಡುಗಳೊಂದಿಗೆ ರೈಲಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಅಜೀಜ್‌ ಕುಮಟಾ ಬಳಿ ಹೃದಯಾಘಾತದಿಂದ ಮೃತಪಟ್ಟಿದ್ದ. ಅನಂತರ ಅಜೀಜ್‌ನ ಸೋದರ ಸಂಬಂಧಿ ಹಮೀದ್‌ ಎಂಬಾತ ಅಬ್ದುಲ್‌ ಖಾದರ್‌ನಿಂದ ಪಿಸ್ತೂಲ್‌ನ್ನು ಕೇಳಿ ಪಡೆದುಕೊಂಡು ಅದನ್ನು ಆತನ ವಶದಲ್ಲಿಟ್ಟುಕೊಂಡಿದ್ದ. ಕೆಲವು ದಿನಗಳ ಅನಂತರ ಅದನ್ನು ಬೋಳಾರದ ತೌಸಿಫ್ನಿಗೆ ನೀಡಿದ್ದ. ಬೋಳಾರದ ತೌಸಿಫ್ ಜು. 31ರಂದು ತೌಸಿಫ್ ಅಹಮ್ಮದ್‌ ಎಂಬಾತನಿಗೆ ನೀಡಿ ಅದನ್ನು ಹಮೀದ್‌ಗೆ ನೀಡುವಂತೆ ಹೇಳಿದ್ದ. ಅದರಂತೆ ತೌಸಿಫ್ ಅಹಮ್ಮದ್‌ ಪಿಸ್ತೂಲ್‌ ಮತ್ತು ಮದ್ದುಗುಂಡುಗಳನ್ನು ಹಮೀದ್‌ಗೆ ನೀಡುವುದಕ್ಕೆಂದು ಬಂದಿದ್ದ. ಈ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಖಾದರ್‌ ಚಾಲಕ ವೃತ್ತಿ ಮಾಡುತ್ತಿದ್ದ. ಆರೋಪಿಗಳು ಯಾವ ಉದ್ದೇಶಕ್ಕಾಗಿ ಅಕ್ರಮವಾಗಿ ಪಿಸ್ತೂಲು ಹೊಂದಿದ್ದರು ಎಂಬುದು ಗೊತ್ತಾಗಿಲ್ಲ. ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದರು. ಅಜೀಜ್‌ ಪ್ರಮುಖ ಆರೋಪಿಯಾಗಿರುತ್ತಿದ್ದ. ಆದರೆ ಆತ ಮೃತಪಟ್ಟಿದ್ದಾನೆ. ಉಳಿದ ಆರೋಪಿಗಳ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪತ್ರಕರ್ತರಿಗೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ ಸ್ಥಾನ

Next Post

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

Related Posts

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ
ಕ್ರೈಮ್ ನ್ಯೂಸ್

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ

March 23, 2026
39
ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ  ಉಳ್ಳಾಲದ ನಟೋರಿಯಸ್ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ
ಕ್ರೈಮ್ ನ್ಯೂಸ್

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ಉಳ್ಳಾಲದ ನಟೋರಿಯಸ್ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
50
Next Post
ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

Discussion about this post

Recent News

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

March 23, 2026
4
ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ

March 23, 2026
39
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

March 23, 2026
ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.5 ಲಕ್ಷದ ಎಂಡಿಎಂಎ ಡ್ರಗ್ಸ್ ಸಹಿತ ಮೂವರ ಬಂಧನ

March 23, 2026
ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ

March 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d