ಮುಂಬೈ, ಮಹಾರಾಷ್ಟ್ರ: 14 ಭಯೋತ್ಪಾದಕರು 400 ಕೆಜಿಗಳಷ್ಟು ಆರ್‌ಡಿಎಕ್ಸ್‌ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಹುಸಿ ಬೆದರಿಕೆ ಕರೆ ಮಾಡಿದ 50 ವರ್ಷದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪರಾಧ ವಿಭಾಗವು ಆರೋಪಿ ಅಶ್ವಿನಿಕುಮಾರ್ ಸುಪ್ರಾ ಅವರನ್ನು ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 79ರಲ್ಲಿರುವ ಅವರ ನಿವಾಸದಿಂದ ಬಂಧಿಸಿದೆ. ಬೆದರಿಕೆ ಕರೆ ಮಾಡಿದ 24 ಗಂಟೆಯೊಳಗೆ ಆರೋಪಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಬೈ ಟ್ರಾಫಿಕ್ ಪೊಲೀಸ್ ಹೆಲ್ಪ್ಲೈನ್ಗೆ ಆರೋಪಿ ಈ ಬೆದರಿಕೆ ಸಂದೇಶವನ್ನು ಕಳುಹಿಸಿದ್ದ. ಸಂದೇಶದಲ್ಲಿ 14 ಮಾನವ ಬಾಂಬ್‌ಗಳನ್ನು ಇಟ್ಟುಕೊಂಡಿರುವ ಭಯೋತ್ಪಾದಕರು ಮತ್ತು 400 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದು, ನಗರವನ್ನು ಸ್ಫೋಟಿಸಲು 34 ವಾಹನಗಳಲ್ಲಿ ಬಾಂಬ್ ಇರಿಸಿದ್ದಾರೆ ಎಂದು ಸಂದೇಶ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಬೆದರಿಕೆ ಸಂದೇಶದ ಬೆನ್ನಲ್ಲೇ ನಗರ ಪೊಲೀಸರು ಎಚ್ಚರವಹಿಸಿದ್ದರು. ಗಣೇಶ ಹಬ್ಬದ 10ನೇ ದಿನ ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ ನಿಮಿತ್ತ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲದೇ ಈ ಘಟನೆ ಕುರಿತು ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಸ್ವೀಕರಿಸಿ ಎಲ್ಲಾ ಆಯಾಮದಲ್ಲೂ ತನಿಖೆಗೆ ಮುಂದಾದರು. ಈ ಪ್ರಕರಣ ಕುರಿತು ಕ್ರೈಂ ಬ್ರಾಂಚ್ ತನಿಖಗೆ ಕೈಗೆತ್ತಿಕೊಂಡಿತು. ವಾಟ್ಸ್ಆ್ಯಪ್ಗೆ ರವಾನೆಯಾದ ಸಂದೇಶದ ಫೋನ್ ನಂಬರ್ ಪತ್ತೆಗೆ ಕ್ರೈಂ ಬ್ರಾಂಚ್ ಮುಂದಾಗಿತ್ತು. ಆದರ ಅದು ಗೌತಮ್ ಬುದ್ದ ನಗರ್ನಿಂದ ಬಂದಿರುವುದು ತಿಳಿದು ನೋಯ್ಡಾಗೆ ಪ್ರಯಾಣ ಬೆಳೆಸಿದ್ದು ಅಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಸಂದೇಶ ಕಳುಹಿಸಲು ಬಳಸಲಾಗಿದೆ ಎನ್ನಲಾದ ಆತನ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post