ಬಂಟ್ವಾಳ: ಪಾರ್ಸಲ್ ಪಡೆಯಲು ಬಂದಿದ್ದ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲಡ್ಕದ ಕೋಳಿ ಟಿಕ್ಕಾ ಮಾರಾಟದ ಅಂಗಡಿಯೊಂದರ ಮಾಲೀಕ ಮಹಮ್ಮದ್ ಅಶ್ರಫ್ ಎಂಬಾತನ ವಿರುದ್ಧ ದೂರು ನೀಡಲಾಗಿದೆ. ಕಲ್ಲಡ್ಕ-ವಿಟ್ಲ ರಸ್ತೆಯಲ್ಲಿರುವ ಟಿಕ್ ಪಾಯಿಂಟ್ ಮಾಲಕ ಮಹಮ್ಮದ್ ಆಶ್ರಫ್ ಎಂಬಾತ ಪ್ರಕರಣದ ಆರೋಪಿ. ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್ ಗೆ ಪಾರ್ಸೆಲ್ ತರಲು ರಾತ್ರಿ ಸುಮಾರು 8 ಗಂಟೆಗೆ ಬಂದ ವೇಳೆ ಆರೋಪಿ ಕೃತ್ಯ ಎಸಗಿದ್ದಾನೆ. ಬಾಲಕ ಟಿಕ್ಕ ಪಾರ್ಸೆಲ್ ಕೇಳಿದಾಗ, ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿಯ ಒಳಗೆ ಬರುವಂತೆ ಹೇಳಿ, ಆತ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೌರ್ಜನ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ನಡೆದು ಎರಡು ತಿಂಗಳಾಗಿದ್ದು, ಬಳಿಕ ಮತ್ತೊಮ್ಮೆ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಆಗ ಬಾಲಕ ವಿರೋಧ ವ್ಯಕ್ತಪಡಿಸಿದಾಗ, ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post