ಮಂಗಳೂರು : ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ನಡೆದಿದ್ದ ಮಂಗಳೂರು ದಸರಾ ಶೋಭಾಯಾತ್ರೆ ಇಂದು ವೈಭವದಿಂದ ಆರಂಭವಾಗಿದೆ. ಮಂಗಳೂರಿನಲ್ಲಿ ಈ ಬಾರಿ ವೈಭವದ ಶೋಭಾಯಾತ್ರೆ ಕಳೆಗಟ್ಟಿದ್ದು ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ಆರಂಭವಾಗಿದೆ. ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಮೆರುಗು ನೀಡುತ್ತಿವೆ. ಮಂಗಳೂರಿನಲ್ಲಿ ಈ ಬಾರಿ ವೈಭವದ ಶೋಭಾಯಾತ್ರೆ ಕಳೆಗಟ್ಟಿದ್ದು ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ಆರಂಭವಾಗಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಮೆರುಗು ನೀಡುತ್ತಿವೆ.














Discover more from Coastal Times Kannada
Subscribe to get the latest posts sent to your email.








Discussion about this post