ಕೊಣಾಜೆ: ಮುಡಿಪುವಿನಲ್ಲಿ ನೂತನವಾಗಿ ನಿರ್ಮಿಸಲಾದ ಡಾ.ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಪ್ರಯುಕ್ತ ನೂತನ ಕುಲಾಲ ಸಮುದಾಯ ಭವನದ ಉದ್ಘಾಟನೆ ರವಿವಾರ ನಡೆಯಿತು.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಸ್ವಾಮೀಜಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಕಾಲ ಇದು. ಹಿರಿಯರ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು ಜೊತೆಗೆ ನೈತಿಕ ಬದ್ದತೆ, ಮೌಲ್ಯವನ್ನು ತಿಳಿಸುವ ಕಾರ್ಯ ಆಗಬೇಕು. ಕುಲಾಲ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಅಗತ್ಯವಿದ್ದು, ಇಡೀ ಸಮಾಜ ಒಗ್ಗಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯರು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕುಲಾಲ ಭವನಕ್ಕೆ ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡುವ ಮೂಲಕ ಕುಲಾಲ ಸಮುದಾಯ ಎಲ್ಲಾ ಸಮಾಜದ ಪ್ರೀತಿಗೆ ಪಾತ್ರವಾಗಿದೆ ಎಂದರು.
ಶಾಸಕ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜಕ್ಕೆ ಕುಲಾಲ ಸಮುದಾಯದ ಕೊಡುಗೆ ಅಪಾರ. ನಮ್ಮ ಸಂಪತ್ತು ಕೇವಲ ಕೇವಲ ಕೆಲವೇ ವರ್ಗಕ್ಕೆ ಸೀಮಿತವಾಗದೆ ಎಲ್ಲರಿಗೂ ಹಂಚಿ ತಿನ್ನುವ ಕಾರ್ಯ ಆಗಬೇಕು. ಅಮ್ಮೆಂಬಳ ಬಾಳಪ್ಪ ನಮ್ಮ ನಾಡು ಕಂಡ ಶ್ರೇಷ್ಠ ನಾಯಕ. ಅವರ ಹೆಸರಿನಲ್ಲಿ ಮುಡಿಪುವಿನಲ್ಲಿ ನಡುವೆ ನಿರ್ಮಾಣವಾಗಲಿರುವ ಡಾ.ಅಮ್ಮೆಂಬಳ ಬಾಳಪ್ಪ ವೃತ್ತಕ್ಕೆ ಸಹಕಾರವಿದೆ ಎಂಬ ಭರವಸೆ ನೀಡಿದರು.
ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ, ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ನಿವೃತ್ತ ತಹಶೀಲ್ದಾರ ಬಿ.ಎಸ್.ಕುಲಾಲ್, ಕುರ್ನಾಡು ಪಂಚಾಯಿತಿ ಅಧ್ಯಕ್ಷ ಗಣೇಶ್ ನಾಯ್ಕ್, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮುಡಿಪು ಕುಲಾಲ ಸಂಘದ ಮಾಜಿ ಅಧ್ಯಕ್ಷ ವೆಂಕಪ್ಪ ಮಾಸ್ತರ್ ಅಸೈಗೋಳಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಸುರೇಶ್ ಕುಲಾಲ್, ಕಸ್ತೂರಿ ಪಂಜ, ಚಂದ್ರಹಾಸ ಪಂಡಿತೌಸ್, ರೂಪಾ ಡಿ.ಬಂಗೇರ, ಕಮಲಾಕ್ಷಿ ಕೆ.ಕಾಸರಗೋಡು, ಮಮತಾ ಗಟ್ಟಿ, ಭಾಸ್ಕರ ಎಂ.ಪೆರುವಾಯಿ, ರಾಮ ಯು., ನವೀನ್ ಪಾದಲ್ಪಾಡಿ, ವಕೀಲ ರವೀಂದ್ರ ಮುನ್ನಿಪ್ಪಾಡಿ, ಸುಕುಮಾರ್, ಪುರಂದರ, ಜಗದೀಶ್ ಆಳ್ವ ಕೂವೆತ್ತಬೈಲ್, ಬಾಸ್ಕರ ಕುತ್ತಾರ್, ಕಟ್ಟಡ ಸಮಿತಿಯ ಗೋಪಾಲ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post