ಲಾಸ್ ಏಂಜಲೀಸ್: ಅಮೆರಿಕಾದ ಪಾಪ್ ಸ್ಟಾರ್, ರ್‍ಯಾಪರ್, ನಟ ಆರನ್ ಕಾರ್ಟರ್ ಶನಿವಾರ ದಕ್ಷಿಣ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 34 ವರ್ಷದ ಗಾಯಕ ಆರನ್ ಕಾರ್ಟರ್ ಸಾವನ್ನಪ್ಪಿರುವ ಕುರಿತು ಕುಟುಂಬಸ್ಥರು ದೃಢಪಡಿಸಿದ್ದಾರೆ ಎಂದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬಾಲ್ಯದಲ್ಲೇ ಪ್ರದರ್ಶನ ನೀಡಲು ಪ್ರಾರಂಭಿಸಿದ್ದ ಗಾಯಕ ಆರನ್ ಕಾರ್ಟರ್ ಹದಿಹರೆಯದ ವಯಸ್ಸಿಗೆ ಬಂದಾಗ ಅನೇಕ ಹಿಟ್ ಆಲ್ಬಮ್ಗಳ ಒಡೆಯನಾಗಿದ್ದರು. ನಟನೆ ಹಾಗೂ ಗಾಯನವನ್ನು ಪ್ರಾರಂಭಿಸುವ ಮೊದಲು ತಮ್ಮ ಸಹೋದರ ನಿಕ್ ಕಾರ್ಟರ್ ಅವರ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಬ್ಯಾಂಡ್ ಹಾಗೂ ಬ್ರಿಟ್ನಿ ಸ್ಪಿಯರ್ಸ್ ಮೂಲಕ ತಮ್ಮ ಪ್ರದರ್ಶನಗಳನ್ನು ಪ್ರಾರಂಭಿಸಿದ್ದರು. ‘ಆರನ್ಸ್ ಪಾರ್ಟಿ (ಕಮ್ ಗೆಟ್ ಇಟ್)’ ಮತ್ತು ‘ಐ ವಾಂಟ್ ಕ್ಯಾಂಡಿ ಸೇರಿದಂತೆ ಹಲವಾರು ಹಿಟ್ ರೆಕಾರ್ಡ್ಗಳನ್ನು ನೀಡಿದ್ದರು.
ಕಾರ್ಟರ್ 1997 ರಲ್ಲಿ ತಮ್ಮ 9ನೇ ವಯಸ್ಸಿಗೆ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮೂಲಕ ಪ್ರದರ್ಶನಗಳನ್ನು ಪ್ರಾರಂಭಿಸಿದರು. ಅದೇ ವರ್ಷ ಅವರ ಚೊಚ್ಚಲ ಆಲ್ಬಂ ಕೂಡ ಬಿಡುಗಡೆಯಾಗಿತ್ತು. 2017 ರಲ್ಲಿ ಕಾರ್ಟರ್ ‘ದಿ ಡಾಕ್ಟರ್ಸ್’ ಎಂಬ ಟಿವಿ ಶೋದಲ್ಲಿ ತಾವು ಖಿನ್ನತೆಯಿಂದ ಬಳಲುತ್ತಿದ್ದು, ಮಾದಕ ವ್ಯಸನಿಯಾಗಿರುವುದರ ಬಗ್ಗೆ ಹೇಳಿಕೊಂಡಿದ್ದರು. ಅದೇ ವರ್ಷ ಮದ್ಯಪಾನ ಮತ್ತು ಗಾಂಜಾ ಸೇವಿಸಿ ಚಾಲನೆ ಮಾಡಿದ ಆರೋಪದಡಿಯಲ್ಲಿ ಬಂಧನಕ್ಕೂ ಒಳಗಾಗಿದ್ದರು. ಕಾರ್ಟರ್ ಅವರ ಐದನೇ ಮತ್ತು ಅಂತಿಮ ಸ್ಟುಡಿಯೋ ಆಲ್ಬಂ, “ಲವ್,” 2018 ರಲ್ಲಿ ಬಿಡುಗಡೆಯಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post