ಮಂಗಳೂರು,ಫೆ.7; ಕೊಂಕಣಿ ಲೇಖಕರ ಸಂಘವು ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರಿಗೆ ನೀಡುವ ಪ್ರಶಸ್ತಿಗೆ 2022ನೇ ಸಾಲಿನಲ್ಲಿ ಲೇಖಕಿ ಐರಿನ್ ಪಿಂಟೊ ಅವರನ್ನು ಆಯ್ಕೆ ಮಾಡಿದೆ ಎಂದು ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೊಂಕಣಿ ಲೇಖಕ ಸಂಘ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು. ಅದರಂತೆ, ಕೊಂಕಣಿ ಲೇಖಕ ಸಂಘದ ಪ್ರಶಸ್ತಿ ಸಮಿತಿಯು ಖ್ಯಾತ ಕೊಂಕಣಿ ಲೇಖಕಿ ಶ್ರೀಮತಿ ಐರಿನ್ ಪಿಂಟೊ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2023ರ ಫೆಬ್ರಬರಿ 25ರಂದು ಸಂಜೆ 6.30ಕ್ಕೆ ಮಂಗಳೂರು ನಂತೂರಿನ, ಬಟ್ಟೋಡಿಯ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ರಾ’ ಕೊಂಕಣಿ ವಾರಪತ್ರಿಕೆಯ ಮಾಜಿ ಸಂಪಾದಕರಾದ ಫಾದರ್ ಫ್ರಾನ್ಸಿಸ್ ರೊಡ್ರಿಗಸ್ ಭಾಗವಹಿಸಲಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ| ರಾಧಾಕೃಷ್ಣ ಎನ್. ಬೆಳ್ಳೂರ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಡೊಲ್ಫಿ ಎಫ್.ಲೋಬೊ, ಸಲಹಾ ಸಮಿತಿ ಸದಸ್ಯರಾದ ಜೆ.ಎಫ್.ಡಿಸೋಜ, ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post