ಉಳ್ಳಾಲ : ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕ ಡಾ| ವೇದವ ಪಿ. ವಿರುದ್ಧ ಕನ್ನಡ ವಿಭಾಗದ ಕೊಡವ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಿಂದ ಕ್ಲೀನ್ ಚಿಟ್ ನೀಡಿ ನಿರಪರಾಧಿ ಎಂದು ಸಾಬೀತುಪಡಿಸಿದೆ.
2004ರಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೊಡವ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕಿ ಪೂರ್ಣಿಮಾ ಎಂಬವರು ಸಹಪ್ರಾಧ್ಯಾಪಕ ಡಾ.ವೇದವ .ಪಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. 2013ರ ಜೂ.6 ರಂದು ಅತ್ಯಾಚಾರ ನಡೆಸಿ ಜೀವಬೆದರಿಕೆಯನ್ನು ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಕ್ಷ್ಯಗಳು ಪತ್ತೆಯಾಗದೇ, ಜಿಲ್ಲಾ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆರೋಪ ಪಟ್ಟಿಯನ್ನು ಪರಿಗಣಿಸಿ ಸಮನ್ಸ್ ಜ್ಯಾರಿಗೊಳಿಸಿದ್ದರು. ಹಿಯರಿಂಗ್ ಬಿಫೋರ್ ಚಾರ್ಜ್ ಹಂತದಲ್ಲಿ ಆರೋಪದಿಂದ ಬಿಡುಗಡೆಗೊಳಿಸಲು ಕಲಂ 227ರ ಪ್ರಕಾರ ಡಾ| ವೇದವ್ ಡಿಸ್ಚಾರ್ಜ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಡಾ| ವೇದವ್ ಹೈಕೋರ್ಟ್ ನಲ್ಲಿ 482ರಡಿ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದರು. 2012 ರಲ್ಲಿ ಜಿಲ್ಲಾ ನ್ಯಾಯಾಧೀಶರ ಡಿಸ್ಚಾರ್ಜ್ ಅರ್ಜಿಯ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿತ್ತು.
2013ರ ಫೆ.23 ರಂದು ನಡೆದ ಅಂತಿಮ ಹಿಯರಿಂಗ್ ನಲ್ಲಿ ಆರೋಪಗಳನ್ನು ಸಾಬೀತುಪಡಿಸಲು ಆರೋಪ ಪಟ್ಟಿ ಮತ್ತು ಎಫ್ ಐ ಆರ್ ಯಾವುದೇ ಪುರಾವೆಗಳನ್ನು ಹೊಂದಿಲ್ಲವೆಂದು ಸರ್ವೋಚ್ಛ ನ್ಯಾಯಾಲಯದ 2018ರ ಮಹಾರಾಷ್ಟ್ರ ರಾಜ್ಯ ಸರಕಾರದ ವಿರುದ್ಧದ ಡಾ| ಧ್ರುವಮ್ ಡಾ| ಮುರಳೀಧರ್ ಸೋನಾರ್ ಪ್ರಕರಣ ಮತ್ತು ಉತ್ತರಪ್ರದೇಶ ಸರಕಾರದ ವಿರುದ್ಧದ ಶಂಭು ಖಾರವಾರ್ ಪ್ರಕರಣವನ್ನು ಮುಂದಿಟ್ಟು ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ, ದ.ಕ ಜಿಲ್ಲಾ ಮತ್ತು ಸೆಷೆನ್ ನ್ಯಾಯಾಧೀಶರು ಡಾ| ವೇದವ ಪಿ. ಸಲ್ಲಿಸಿದ ಡಿಸ್ಚಾರ್ಜ್ ಅರ್ಜಿಯನ್ನು ತಿರಸ್ಕರಿಸಿದ ತೀರ್ಪನ್ನು ರದ್ದು ಮಾಡಿ ಆರೋಪಿಯನ್ನು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿರುವುದು ಕಂಡುಬರುತ್ತಿಲ್ಲ ಮತ್ತು ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪವು ಸಿಆರ್ ಪಿಸಿ 376 ಮತ್ತು 506 ರ ಪ್ರಕಾರ ಅಪರಾಧವಾಗುವುದಿಲ್ಲ. ಈ ಅಪರಾಧಗಳಿಗೆ ಅಗತ್ಯ ಅಂಶಗಳಿಲ್ಲ , ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪು ಒಪ್ಪತಕ್ಕದಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿದೆ. ಬಲತ್ಕಾರದ ಲೈಂಗಿಕಕ್ರಿಯೆ
2013ರ ಜೂ.2 ರಂದು ನಡೆದು, ಎಫ್ ಐ ಆರ್ ನ್ನು 2014ರ ಅ.16 ರಂದು ದಾಖಲಿಸಿರುವುದರಿಂದ ಆರೋಪಿ ಮತ್ತು ಫಿರ್ಯಾದಿದಾರಳ ನಡುವೆ ಸಂಬಂಧವಿದ್ದು, ಅದು ಹಳಸಿದಾಗ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದ ಮತ್ತು ಪ್ರತೀಕಾರದ ಉದ್ದೇಶವಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ದೂರುದಾರೆ ಪೂರ್ಣಿಮಾ 2014ರ ಅ.29 ರಂದು ಮಂಗಳೂರು ವಿ.ವಿಯ ವ್ಯವಹಾರ ಆಡಳಿತ ವಿಭಾಗದ ಎದುರುಗಡೆ ಪ್ರತಿಭಟನೆಯನ್ನು ನಡೆಸಿದ್ದರು. ಆರೋಪಿ ಪರವಾಗಿ ಹೈಕೋರ್ಟ್ ಅಡ್ವಕೇಟ್ ಜನರಲ್ ರವಿಶಂಕರ್ ಕೊಡೆಂಕಿರಿ ವಾದಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post