ಮಂಗಳೂರು ಮೇ 7: ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಅವರು ಇಂದು ಮುಲ್ಕಿ ಕೊಲ್ನಾಡು ಬಳಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ ಚುನಾವಣೆಯ ಸಂದರ್ಭ ದೇಶದ ಪ್ರಧಾನಿ, ಬಿಜೆಪಿ ಮುಖಂಡರು ಧರ್ಮ, ಜಾತಿ ಆತಂಕವಾದ ಬಗ್ಗೆ ಮಾತನಾಡು ತ್ತಾರೆ. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೇ ಆಗಿಲ್ಲ, ಮಾತನಾಡೋದು ಹೇಗೆ. ಕೊನೆಗೆ ಆತಂಕವಾದ, ಸುರಕ್ಷತೆಯ ಭಾಷಣ ಮಾಡಿ ಹೋಗ್ತಾರೆ. ಪ್ರಧಾನಿಯವರಿಗೆ ರೈತರ ಆತ್ಮಹತ್ಯೆಯ ಬಗ್ಗೆ ಗೊತ್ತಿದ್ಯಾ? ಕರ್ನಾಟಕದಲ್ಲಿ ಮತ್ತೊಂದು ಆತಂಕ ಇದೆ, ಇಲ್ಲಿ 40% ಸರ್ಕಾರದ ಆತಂಕ ಇದೆ. ಜನರನ್ನು ಲೂಟಿ ಮಾಡುವ ಬಿಜೆಪಿ ಸರ್ಕಾರದ ಬಗ್ಗೆ ಆತಂಕ ಇದೆ. 40% ಸರ್ಕಾರ ಪ್ರತೀ ಸರ್ಕಾರಿ ಹುದ್ದೆಗೂ ರೇಟ್ ಫಿಕ್ಸ್ ಮಾಡ್ತಿದೆ, ಇದರ ಆತಂಕವಿದೆ. ಭ್ರಷ್ಟಾಚಾರದ ಆತಂಕ ಇಡೀ ರಾಜ್ಯದಲ್ಲಿ ಇದೆ. ಇವತ್ತು ಇಡೀ ಕರ್ನಾಟಕದಲ್ಲಿ ಇದರ ಆತಂಕ ಇದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.
ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್ ಎಲ್ಲವನ್ನೂ ವಿಲೀನ ಮಾಡಿದ್ರು. ಇಂದಿರಾ ಗಾಂಧಿ ನವ ಮಂಗಳೂರು ಬಂದರು ನಿರ್ಮಾಣ ಮಾಡಿದರು. ನೆಹರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರು. ಆದರೆ ಮೋದಿ ಎರಡನ್ನೂ ಅದಾನಿ ಮಾರಾಟ ಮಾಡಿದರು. ಇದೆಲ್ಲವನ್ನೂ ಒಂದಿಬ್ಬರು ಜನರಿಗೆ ಮಾರಾಟ ಮಾಡೋದು ಆತಂಕ ಅಲ್ವಾ? ಇದೆಲ್ಲವೂ ಬಿಜೆಪಿಯ ಭ್ರಷ್ಟಾಚಾರದ ಬಹುದೊಡ್ಡ ಆತಂಕ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.
ಚುನಾವಣೆ ಹೊತ್ತಲ್ಲಿ ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ. ರಾಜ್ಯದ ಬಿಜೆಪಿ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಇವರ 40% ಸರ್ಕಾರ, ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ಕೆಎಂಎಫ್ ಸದೃಢವಾಗಿದೆ. ಈಗ ಗುಜರಾತ್ ನ ಅಮುಲ್ ಜತೆ ವಿಲೀನ ಮಾಡಲು ಯತ್ನಿಸ್ತಾ ಇದ್ದಾರೆ. ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ಆದರೆ ಅದಕ್ಕೆ ಹಣ ಎಲ್ಲಿಂದ ತರ್ತಾರೆ ಅಂತ ಪ್ರಶ್ನೆಸ್ತಿದಾರೆ? ಆದರೆ ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ ಎಂದರು. ಕರ್ನಾಟಕದಲ್ಲಿ ಪದವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 2000 ರೂ., ಡಿಪ್ಲೊಮಾ ಮಾಡಿದ ನಿರುದ್ಯೋಗಿ ಗಳಿಗೆ ಮಾಸಿಕ 1500 ರೂಪಾಯಿ ನೀಡುವ ಯುವ ನಿಧಿ ಕಾರ್ಯಕ್ರಮ, ಪ್ರತಿ ಕುಟುಂಬದ ಒಡತಿಗೆ ಮಾಸಿಕ ರೂ.2000 ನೀಡುವ ಗೃಹ ಲಕ್ಷ್ಮೀ ಯೋಜನೆ, ಬಡವರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುವ ಯೋಜನೆ, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮೊದಲಾದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಕರ್ನಾಟಕದಲ್ಲಿ ಜಾರಿಯಾಗಲಿದೆ. ತುಳು ಭಾಷೆಯನ್ನು ಎಂಟನೆ ಪರಿಚ್ಛೇದದಲ್ಲಿ ಸೇರಿಸುವ ಹಾಗೂ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಬದ್ಧವಾಗಿದೆ. ರಾಜ್ಯ ದಲ್ಲಿ ಭರ್ತಿ ಯಾಗದೆ ಖಾಲಿ ಉಳಿದಿರುವ ಎರಡೂವರೆ ಲಕ್ಷ ಉದ್ಯೋಗವನ್ನು ಭರ್ತಿ ಮಾಡಲು ಕ್ರಮ ಕೈ ಗೊಳ್ಳಲಿದೆ. ಈ ಬಗ್ಗೆ ಸಂದೇಹ ಬೇಡ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಛತ್ತೀಸ್ ಗಡ್, ರಾಜಸ್ಥಾನ ದಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಚುನಾವಣೆ ಹೊತ್ತಲ್ಲಿ ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ. ರಾಜ್ಯದ ಬಿಜೆಪಿ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಇವರ 40% ಸರ್ಕಾರ, ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ಕೆಎಂಎಫ್ ಸದೃಢವಾಗಿದೆ. ಈಗ ಗುಜರಾತ್ ನ ಅಮುಲ್ ಜತೆ ವಿಲೀನ ಮಾಡಲು ಯತ್ನಿಸ್ತಾ ಇದ್ದಾರೆ. ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ಆದರೆ ಅದಕ್ಕೆ ಹಣ ಎಲ್ಲಿಂದ ತರ್ತಾರೆ ಅಂತ ಪ್ರಶ್ನೆಸ್ತಿದಾರೆ? ಆದರೆ ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ ಎಂದರು.
ಸಮಾರಂಭದಲ್ಲಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಾಜಿ ಸಂಸದ ಇಬ್ರಾಹಿಂ ಹಾಗೂ ಕಾಂಗ್ರೆಸ್ ಮುಖಂಡ ರಾದ ಆರತಿಕೃಷ್ಣ, ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ನಿಕೇತ್ ರಾಜ್, ಶಾಲೆಟ್ ಪಿಂಟೋ , ಮಮತಾ ಗಟ್ಟಿ, ಅಭ್ಯರ್ಥಿ ಗಳಾದ ಇನಾಯತ್ ಅಲಿ ,ಮಿಥುನ್ ರೈ, ಮೊದಲಾದವರು ಉಪಸ್ಥಿತರಿದ್ದರು.
प्रगति की बयार, कर्नाटका में इस बार कांग्रेस सरकार।
ಕಾಂಗ್ರೆಸ್ ಬರಲಿದೆ. ಪ್ರಗತಿ ತರಲಿದೆ.
Live: Public Meeting। Moodbidri। Karnataka।https://t.co/HWWjnsXRw1— Priyanka Gandhi Vadra (@priyankagandhi) May 7, 2023
Discover more from Coastal Times Kannada
Subscribe to get the latest posts sent to your email.
Discussion about this post