ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ “ಆಪರೇಷನ್ ಸಿಂಧೂರ” ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್‌ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ.
ಈ ದಾಳಿಯು “ಕೇಂದ್ರೀಕೃತ, ವಿವೇಚನೆಯ ಹಾಗೂ ಮತ್ತು ಉಲ್ಬಣವಾಗದಂತಹ” ಕಾರ್ಯಾಚರಣೆ ಎಂದು ಭಾರತದ ಸೇನೆ ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ, ಭಾರತವು ನಿಖರ ಗುರಿಗಳ ಆಯ್ಕೆ ಮತ್ತು ದಾಳಿಗಳಲ್ಲಿ ಸಂಯಮವನ್ನು ಪ್ರದರ್ಶಿಸಿದೆ. ಎಲ್‌ಇಟಿ ಮತ್ತು ಜೆಇಎಂ ಶಿಬಿರಗಳನ್ನು ಹೊಂದಿರುವ ಪಿಒಕೆಯ ಕೋಟಿಲ್ ಮತ್ತು ಮುಜಫರಾಬಾದ್ ಕೂಡ ಗುರಿಯಾಗಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಉಗ್ರರ ನೆಲೆಗಳು ಧ್ವಂಸ ಫೋಟೊಗಳು ಇಲ್ಲಿವೆ ನೋಡಿ :
ದಾಳಿಯ ನಂತರ, “ನ್ಯಾಯ ಒದಗಿಸಲಾಗಿದೆ” ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.
ಪಾಕಿಸ್ತಾನವೂ ದಾಳಿಗಳ ಬಗ್ಗೆ ದೃಢಪಡಿಸಿದ್ದು, ಇದೊಂದು ಹೇಡಿತನದ ಕೃತ್ಯ ಎಂದಿದೆ. ಅಲ್ಲದೆ, ಪಾಕ್ ವಿದೇಶಾಂಗ ಸಚಿವಾಲಯವು ಇದನ್ನು ಅಪ್ರಚೋದಿತ ಯುದ್ಧ ಕೃತ್ಯ ಎಂದು ಖಂಡಿಸಿದೆ. ನಾಗರಿಕ ಸಾವುನೋವುಗಳು ಸಂಭವಿಸಿವೆ ಎಂದು ಆರೋಪಿಸಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post