• About us
  • Contact us
  • Disclaimer
Saturday, July 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಮರನಾಥ ಯಾತ್ರಿಕ ರಾತ್ರಿ ಫುಟ್​ಪಾತ್​ ಮೇಲೆ ಮಲಗಿದ್ದಾಗ ಹಾವು ಕಡಿದು ಸಾವು

Coastal Times by Coastal Times
July 7, 2026
in ರಾಷ್ಟ್ರೀಯ ಸುದ್ದಿ
ಅಮರನಾಥ ಯಾತ್ರಿಕ ರಾತ್ರಿ ಫುಟ್​ಪಾತ್​ ಮೇಲೆ ಮಲಗಿದ್ದಾಗ ಹಾವು ಕಡಿದು ಸಾವು
51
VIEWS
WhatsappTelegramShare on FacebookShare on Twitter

ಜಮ್ಮು : ಈ ವರ್ಷದ ಅಮರನಾಥ ಯಾತ್ರೆ ಆರಂಭವಾಗಿ 4 ದಿನ ಕಳೆದಿದ್ದು, ಅಷ್ಟರಲ್ಲೇ ಒಂದು ಕಹಿ ಸುದ್ದಿ ಹೊರಬಿದ್ದಿದೆ. ಇಲ್ಲಿನ ಭಗವತಿ ನಗರ ಯಾತ್ರಿ ನಿವಾಸದ ಬಳಿ ಮಲಗಿದ್ದಾಗ ಹಾವು ಕಚ್ಚಿ ಉತ್ತರ ಪ್ರದೇಶದ ಯಾತ್ರಿಕರೊಬ್ಬರು ಸಾವಿಗೀಡಾಗಿದ್ದಾರೆ. ಇದು ಯಾತ್ರೆಯ ಮೊದಲ ಸಾವಾಗಿದೆ.

ಮೃತರನ್ನು ಅಮಿತ್ ಕುಮಾರ್ (42) ಎಂದು ಗುರುತಿಸಲಾಗಿದೆ. ಇವರು, ಉತ್ತರ ಪ್ರದೇಶದ ಕಾನ್ಪುರ ನಗರ ನಿವಾಸಿ. ಹಾವು ಕಡಿದ ಬಳಿಕ ಅವರನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿ) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಮ್ಮುವಿನ ಭಗವತಿ ನಗರದ ಮುಖ್ಯ ಯಾತ್ರಿ ನಿವಾಸದ ಬಳಿಯ ಪಾದಚಾರಿ ಮಾರ್ಗದಲ್ಲಿ ಅಮಿತ್​ ಅವರು ಮಲಗಿದ್ದಾಗ ಹಾವು ಕಚ್ಚಿತು ಎಂದು ಅವರೊಂದಿಗೆ ಬಂದ ಸಹ ಯಾತ್ರಿಕರು ತಿಳಿಸಿದ್ದಾರೆ. ನಂತರ ಅವರನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.

ವೈದ್ಯರ ಪ್ರಯತ್ನದ ಹೊರತಾಗಿಯೂ, ಅವರ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಮೃತರ ಜೊತೆ ಅವರ ಸ್ನೇಹಿತ ರಾಜೇಶ್ ಶುಕ್ಲಾ ಕೂಡ ಇದ್ದರು. ಅವರು ಇತರ ಯಾತ್ರಿಕರೊಂದಿಗೆ ಆಸ್ಪತ್ರೆಯಲ್ಲಿ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಶವವನ್ನು ಜಿಎಂಸಿ ಜಮ್ಮುವಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಜಿಎಂಸಿ ವೈದ್ಯಕೀಯ ಅಧೀಕ್ಷಕ ಡಾ. ವೀರೇಂದ್ರ ತ್ರಿಶಾಲ್ ಅವರು ಮಾಧ್ಯಮಕ್ಕೆ ಈ ಬಗ್ಗೆ ದೃಢಪಡಿಸಿದರು. ಇಂದು ಬೆಳಗ್ಗೆ ಹಾವು ಕಡಿತಕ್ಕೆ ತುತ್ತಾದ ಯಾತ್ರಿಕರೊಬ್ಬರು ಆಸ್ಪತ್ರೆಗೆ ಬಂದರು. ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಕಾನೂನು ವಿಧಿಗಳು ಪೂರ್ಣಗೊಂಡ ನಂತರ, ಸಂಜೆ 5 ಗಂಟೆ ಸುಮಾರಿಗೆ ಮೃತದೇಹವನ್ನು ಜೊತೆಗಿದ್ದ ಯಾತ್ರಾರ್ಥಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ತ್ರಿಶಾಲ್ ಹೇಳಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

Next Post

ಸಕಲ ಸರ್ಕಾರಿ ಗೌರವಗಳೊಂದಿಗೆ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿಯಾದ ಡಾ. ಗಿರೀಶ್ ಭಾರದ್ವಾಜ್‌ಗೆ ಅಂತಿಮ ವಿದಾಯ

Related Posts

ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ರಾಷ್ಟ್ರೀಯ ಸುದ್ದಿ

ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

July 7, 2026
46
1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ
ರಾಷ್ಟ್ರೀಯ ಸುದ್ದಿ

1990ರಲ್ಲಿ ಕಾಶ್ಮೀರದ ನರ್ಸ್ ಸರಳಾ ಭಟ್ ಭೀಕರ ಹತ್ಯೆ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉಗ್ರ ಯಾಸಿನ್ ಮಲಿಕ್ ಸೇರಿದಂತೆ 5 ಮಂದಿ ಆರೋಪಿಗಳ ಹೆಸರು ಉಲ್ಲೇಖ

July 1, 2026
41
Next Post
ಸಕಲ ಸರ್ಕಾರಿ ಗೌರವಗಳೊಂದಿಗೆ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿಯಾದ ಡಾ. ಗಿರೀಶ್ ಭಾರದ್ವಾಜ್‌ಗೆ ಅಂತಿಮ ವಿದಾಯ

ಸಕಲ ಸರ್ಕಾರಿ ಗೌರವಗಳೊಂದಿಗೆ "ತೂಗುಸೇತುವೆಗಳ ಸರದಾರ" ಎಂದೇ ಪ್ರಸಿದ್ಧಿಯಾದ ಡಾ. ಗಿರೀಶ್ ಭಾರದ್ವಾಜ್‌ಗೆ ಅಂತಿಮ ವಿದಾಯ

Discussion about this post

Recent News

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
11
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d