• About us
  • Contact us
  • Disclaimer
Saturday, July 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಕಲ ಸರ್ಕಾರಿ ಗೌರವಗಳೊಂದಿಗೆ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿಯಾದ ಡಾ. ಗಿರೀಶ್ ಭಾರದ್ವಾಜ್‌ಗೆ ಅಂತಿಮ ವಿದಾಯ

Coastal Times by Coastal Times
July 7, 2026
in ಕರಾವಳಿ
ಸಕಲ ಸರ್ಕಾರಿ ಗೌರವಗಳೊಂದಿಗೆ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿಯಾದ ಡಾ. ಗಿರೀಶ್ ಭಾರದ್ವಾಜ್‌ಗೆ ಅಂತಿಮ ವಿದಾಯ
36
VIEWS
WhatsappTelegramShare on FacebookShare on Twitter

ಸುಳ್ಯ : ದೇಶಾದ್ಯಂತ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಸುಳ್ಯದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕುಟುಂಬಸ್ಥರು, ಬಂಧು – ಬಳಗ, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾರವಾದ ಹೃದಯದಿಂದ ಅಂತಿಮ ನಮನ ಸಲ್ಲಿಸಿದರು.

ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಪುಷ್ಪನಮನ ಅರ್ಪಿಸಲಾಯಿತು. ಗೌರವ ವಂದನೆಯೊಂದಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿದವು. ತಮ್ಮ ವಿನೂತನ ತಾಂತ್ರಿಕ ಸಾಧನೆಗಳ ಮೂಲಕ ದೇಶಾದ್ಯಂತ ಹೆಸರಾಗಿದ್ದ ಡಾ. ಭಾರದ್ವಾಜ್ ಅವರ ಅಗಲಿಕೆ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಅಂತ್ಯಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಆರ್. ಅರುಣ್ ಕುಮಾರ್, ಸುಳ್ಯ ತಹಶೀಲ್ದಾರ್ ಮಂಜುಳಾ, ರಾಜ್ಯ ಕಾರ್ಮಿಕ ವೇತನ ಸಲಹಾ ಮಂಡಳಿ ಸದಸ್ಯ ಟಿ. ಎಂ. ಶಾಹಿದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಗೌರವ ನಮನ ಸಲ್ಲಿಸಿದರು.

ದುರ್ಗಮ ಪ್ರದೇಶಗಳ ಜನರ ಬದುಕಿಗೆ ಹೊಸ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಡಿಮೆ ವೆಚ್ಚದಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿದ್ದ ಡಾ. ಗಿರೀಶ್ ಭಾರದ್ವಾಜ್ ಅವರ ಸೇವೆಯನ್ನು ಗಣ್ಯರು ಈ ಸಂದರ್ಭದಲ್ಲಿ ಸ್ಮರಿಸಿದರು. ಅವರ ತಾಂತ್ರಿಕ ಪ್ರತಿಭೆ, ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿದೆ.

“ಜನಸೇವೆಯೇ ನಿಜವಾದ ಸಾಧನೆ” ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರಿದ ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆಯಿಂದ ಸಮಾಜವು ಓರ್ವ ಅಪರೂಪದ ತಾಂತ್ರಿಕ ತಜ್ಞ, ಮಾನವತಾವಾದಿ ಹಾಗೂ ಜನಪರ ಚಿಂತಕನನ್ನು ಕಳೆದುಕೊಂಡಿದೆ. ಎಂದು ಶ್ರದ್ಧಾಂಜಲಿ ಸಲ್ಲಿಸಿದವರು ಅಭಿಪ್ರಾಯಪಟ್ಟರು. ಅಂತಿಮ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಆಗಮಿಸಿ ಪುಷ್ಪನಮನ ಸಲ್ಲಿಸಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಅಮರನಾಥ ಯಾತ್ರಿಕ ರಾತ್ರಿ ಫುಟ್​ಪಾತ್​ ಮೇಲೆ ಮಲಗಿದ್ದಾಗ ಹಾವು ಕಡಿದು ಸಾವು

Next Post

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

Related Posts

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
23
ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ
ಕರಾವಳಿ

ಸುರತ್ಕಲ್ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರಿಕಾ ಬೋಟ್ ಮಗುಚಿ ಬಿದ್ದು ಅಪಾಯದಲ್ಲಿದ್ದ ಆರು ಮಂದಿಯ ರಕ್ಷಣೆ

July 17, 2026
16
Next Post
FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

Discussion about this post

Recent News

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
11
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

ಮಂಗಳೂರು: 15ಕ್ಕೂ ಹೆಚ್ಚು ದರೋಡೆ ಮಾಡಿದ್ದ ನೇಪಾಳದ ಕುಖ್ಯಾತ ಗ್ಯಾಂಗ್ ಬಂಧನ, 10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

July 18, 2026
ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್’: ಜುಲೈ 18ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

July 17, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d