• About us
  • Contact us
  • Disclaimer
Friday, February 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದಕ್ಷಿಣ ಕನ್ನಡ: ಹಾಲು ಉತ್ಪಾದಕರಿಗೆ ಬಂಪರ್, ಪ್ರತಿ ಲೀಟರ್‌ ಹಾಲಿಗೆ ರೂ. 2.05 ಪ್ರೋತ್ಸಾಹ ಧನ ಹೆಚ್ಚಳ

Coastal Times by Coastal Times
October 7, 2022
in ಕರಾವಳಿ
ದಕ್ಷಿಣ ಕನ್ನಡ: ಹಾಲು ಉತ್ಪಾದಕರಿಗೆ ಬಂಪರ್, ಪ್ರತಿ ಲೀಟರ್‌ ಹಾಲಿಗೆ ರೂ. 2.05 ಪ್ರೋತ್ಸಾಹ ಧನ ಹೆಚ್ಚಳ
22
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು, ಅಕ್ಟೋಬರ್ 7: ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರಿಗೆ ಹಾಲು ಉತ್ಪಾದಕರ ಒಕ್ಕೂಟ ಹ ಬಂಪರ್ ಪ್ರೋತ್ಸಾಹ ಧನ ಘೋಷಣೆ ಮಾಡಿದೆ. ಅಕ್ಟೋಬರ್ 11 ರಿಂದ‌ ಪ್ರತೀ 1 ಲೀಟರ್ ಹಾಲಿಗೆ ಕನಿಷ್ಠ ದರ 32 ರೂ. ಎಂದು ಘೋಷಣೆ ಮಾಡಿದೆ. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಕ್ಕೂಟ ನಿಯಮಿತ ಈ ನಿರ್ಧಾರವನ್ನು ಕೈಗೊಂಡಿದೆ. ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಮಾನದಂಡದಂತೆ 3.5 ಫ್ಯಾಟ್ ಹಾಗೂ 8.5 ಎಸ್ಎಸ್ಎಫ್ ಇರುವ ಹಾಲಿಗೆ ಈಗಾಗಲೇ 29.95 ರೂ. ಕೊಡಲಾಗುತ್ತಿತ್ತು. ಅಕ್ಟೋಬರ್ 11ರಿಂದ ಇದಕ್ಕೆ 2.05 ರೂ‌. ಸೇರಿಸಿ‌ ರೈತರಿಗೆ ಪ್ರೋತ್ಸಾಹ ಧನದ ರೀತಿಯಲ್ಲಿ 32 ರೂ‌. ಮಾಡಲಾಗುತ್ತದೆ. ಇಷ್ಟರವರೆಗೆ ಹಾಲಿನ ದರವನ್ನು ಏರಿಕೆ ಮಾಡಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಆದರೆ ಹಾಲಿನ ದರವನ್ನು ಹೆಚ್ಚಳ ಮಾಡುವ ಯಾವ ಉದ್ದೇಶವಿಲ್ಲ. ಒಕ್ಕೂಟದಲ್ಲಿರುವ ವ್ಯವಸ್ಥೆಯಿಂದಲೇ ಈ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ದಕ್ಷಿಣ ಕನ್ನಡಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ಸುಚರಿತ ಶೆಟ್ಟಿಯವರು ಹೇಳಿದ್ದಾರೆ.

ಪ್ರತಿ ದಿನ ದಕ್ಷಿಣ ಕನ್ನಡ ಹಾಲು ಉತ್ಪಾದಕರಿಂದ ಪ್ರತಿ ದಿನ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಳೆದ ವರ್ಷ 5.65 ಲಕ್ಷ ಲೀಟರ್ ಪ್ರತಿ ದಿನ ಸಂಗ್ರಹವಾಗುತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆ, ಮೇವಿನ ಕೊರತೆಯಿಂದ ಹಾಲು ಸಂಗ್ರಹದಲ್ಲಿ ವ್ಯತ್ಯಾಸವಾಗಿದೆ. ಈಗ ಜಿಲ್ಲೆಯಲ್ಲಿ 4.65ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಗಾಗಿ ಹೈನುಗಾರರಿಂದ ಖರೀದಿಸುವ ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಿಸುವ ನಿರ್ಧಾರ ಮಾಡಿದ್ದೇವೆ. ಇನ್ನೂ ಪ್ರೋತ್ಸಾಹಧನ ಹೆಚ್ಚಿಸಿರುವ ನಿರ್ಧಾರದಿಂದ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂಗಳಂತೆ ತಿಂಗಳಿಗೆ 3 ಕೋಟಿ ರೂ. ಗಳಷ್ಟು ವೆಚ್ಚವಾಗಲಿದೆ ಸುಚರಿತ ಶೆಟ್ಟಿ ಹೇಳಿದ್ದಾರೆ. ಪ್ರತಿ ದಿನ 4.65 ಲಕ್ಷ ಲೀಟರ್‌ನಲ್ಲಿ 3.55ಲಕ್ಷ ಲೀಟರ್ ಹಾಲು ಮಾರುಕಟ್ಟೆಗೆ ನೀಡಲಾಗುತ್ತಿದೆ. 60 ಸಾವಿರ ಲೀಟರ್ ಮೊಸರು ಉತ್ಪಾದನೆ ಮಾಡಲಾಗುತ್ತಿದೆ. ಇನ್ನು‌ 60 ಸಾವಿರ ಲೀಟರ್‌ನಲ್ಲಿ ಮಜ್ಜಿಗೆ ಉತ್ಪಾದನೆ ಮಾಡಲಾಗುತ್ತದೆ. ಜೊತೆಗೆ ತಿಂಡಿ, ಪೇಡ ಸೇರಿದಂತೆ 19 ವಿವಿಧ ಹಲವು ಉತ್ಪನ್ನ ಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಸುಚರಿತ ಶೆಟ್ಟಿ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ನಂದಿನಿ ಐಸ್‌ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸುವ ಉದ್ದೇಶವಿದೆ. ಈಗ ನಂದಿನಿ ಬೆಣ್ಣೆಯ ಕೊರತೆ ಎದುರಾಗಿದೆ. ಇದು ತಾತ್ಕಾಲಿಕ ಮಾತ್ರ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ’ ಎಂದರು. ‘ಮುಂದಿನ ದಿನಗಳಲ್ಲಿ ನಂದಿನಿ ಐಸ್‌ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸುವ ಉದ್ದೇಶವಿದೆ. ಈಗ ನಂದಿನಿ ಬೆಣ್ಣೆಯ ಕೊರತೆ ಎದುರಾಗಿದೆ. ಇದು ತಾತ್ಕಾಲಿಕ ಮಾತ್ರ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ’ ಎಂದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ಸುಚರಿತ ಶೆಟ್ಟಿ , ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಇದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ, ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬೆದರಿಕೆ : ಆರೋಪಿಗೆ 15 ವರ್ಷಗಳ ಶಿಕ್ಷೆ

Next Post

ನಮೀಬಿಯಾದಿಂದ ಬಂದ ” ಚಿರತೆಗೆ ಸೀಮಂತ ಯಾವಾಗ ” ​ಎಫ್​ಬಿಯಲ್ಲಿ ವ್ಯಂಗ್ಯದ ಪೋಸ್ಟ್ , ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅರೆಸ್ಟ್​​ ,ಜಾಮೀನು

Related Posts

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ
ಕರಾವಳಿ

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ

February 25, 2026
32
‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
29
Next Post
ನಮೀಬಿಯಾದಿಂದ ಬಂದ ” ಚಿರತೆಗೆ ಸೀಮಂತ ಯಾವಾಗ ” ​ಎಫ್​ಬಿಯಲ್ಲಿ ವ್ಯಂಗ್ಯದ ಪೋಸ್ಟ್ , ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅರೆಸ್ಟ್​​ ,ಜಾಮೀನು

ನಮೀಬಿಯಾದಿಂದ ಬಂದ " ಚಿರತೆಗೆ ಸೀಮಂತ ಯಾವಾಗ " ​ಎಫ್​ಬಿಯಲ್ಲಿ ವ್ಯಂಗ್ಯದ ಪೋಸ್ಟ್ , ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅರೆಸ್ಟ್​​ ,ಜಾಮೀನು

Discussion about this post

Recent News

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
58
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
46
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

February 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d