ಮಂಗಳೂರು: ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಸಭೆ ಬೆಂಗಳೂರಿನಲ್ಲಿ ಡಿ. 26ರಂದು ನಡೆಯಲಿದ್ದು, ಇದರಲ್ಲಿ ಕರಾವಳಿಯ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಅನುಮತಿ ಲಭಿಸುವ ನಿರೀಕ್ಷೆ ಇದೆ.
ಸಿಆರ್‌ಝಡ್‌ನಲ್ಲಿ ಮರಳು ದಿಬ್ಬಗಳ ಸಮೀಕ್ಷೆ ನಡೆದು ವರದಿ ಸಿದ್ಧವಾಗಿದೆ. ಅದನ್ನು ತಾಂತ್ರಿಕ ವರದಿಗಾಗಿ ಎನ್‌ಐಟಿಕೆಗೆ ಕಳುಹಿಸಿ ಕೊಡಲಾಗಿದೆ. ಅದು ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯ ಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ಸಲ್ಲಿಕೆಯಾಗಲಿದೆ. ಸಮಿತಿಯು ಅದರ ಪರಿ ಶೀಲನೆ ನಡೆಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಗೆ ಅನುಮೋದನೆಗಾಗಿ ರವಾನಿಸಲಿದೆ. ಕೆಸಿಝಡ್‌ಎಂ ಸಭೆ 3 ತಿಂಗಳುಗಳಿಗೆ ಒಮ್ಮೆ ನಡೆಯುತ್ತದೆ. ಡಿ. 26ರ ಸಭೆಯಲ್ಲಿ ಅನುಮತಿ ಸಿಗದೆ ಇದ್ದರೆ ಮತ್ತೆ 3 ತಿಂಗಳು ಕಾಯಬೇಕು. ಹೀಗಾಗಿ ಮುಂಬರುವ ಸಭೆಯಲ್ಲೇ ವರದಿ ಪರಿಶೀಲನೆಯಾಗಿ ಅನುಮತಿ ಲಭ್ಯ ವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯತ್ನಗಳನ್ನು ನಡೆಸುತ್ತಿದೆ.
ಅನುಮತಿ ಲಭಿಸಿದರೆ ಜನವರಿ ಮೊದಲ ವಾರ ಮರಳುಗಾರಿಕೆ ಪರವಾನಿಗೆ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿದೆ.
ಸಿಆರ್‌ಝಡ್‌ನಲ್ಲಿ ಮರಳು ಗಾರಿಕೆಗೆ ಪರಿಸರ ಇಲಾಖೆ ಈ ಹಿಂದೆ ನೀಡಿದ್ದ ಪರಿಸರ ವಿಮೋಚನ ಪತ್ರದ ಅವಧಿ ಸೆ. 16ರಂದು ಕೊನೆ ಗೊಂಡಿದ್ದರಿಂದ ಮರಳುಗಾರಿಕೆ ಸ್ಥಗಿತ ಗೊಂಡಿತ್ತು. ನೇತ್ರಾವತಿ, ಫಲ್ಗುಣಿ ನದಿಯ ಸಿಆರ್‌ಝಡ್‌ನಲ್ಲಿ ಮೀನುಗಾರಿಕೆ ಕಾಲೇಜಿನ ತಜ್ಞರು ಮರಳುದಿಬ್ಬಗಳ ಸಮೀಕ್ಷೆ ನಡೆಸಿ ವರದಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಿದ್ದರು.
ನಾನ್ ಸಿಆರ್‌ಝಡ್ ಆಸರೆ :
ಪ್ರಸ್ತುತ ನಾನ್ ಸಿಆರ್‌ಝಡ್ ವಲಯದ 17 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳಿಗೆ ಆಸರೆಯಾಗಿರುವ ಮರಳು ಇಲ್ಲಿನದು. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಪ್ರಕಾರ ನಾನ್‌ಸಿಆರ್‌ಝಡ್ ವಲಯದಲ್ಲಿ 50 ಸಾವಿರ ಮೆಟ್ರಿಕ್ ಟನ್ ಮರಳು ಲಭ್ಯವಿದ್ದು, ಸಿಆರ್‌ಝಡ್ ವಲಯ
ದಲ್ಲಿ ಮರಳುಗಾರಿಕೆ ಪ್ರಾರಂಭ ವಾಗುವವರೆಗೆ ಮರಳು ಪೂರೈಸಬಹು ದಾಗಿದೆ. ಆದರೆ ನಾನ್‌ಸಿಆರ್‌ಝಡ್ ವಲಯದಿಂದ ಮರಳು ಪಡೆಯಲು ವೆಚ್ಚ ಅಧಿಕ. ಅಲ್ಲದೆ ಇದು ಗಾರೆ ಕೆಲಸಕ್ಕೆ ಸೂಕ್ತವಲ್ಲ. ಆದುದರಿಂದ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಶೀಘ್ರ ಆರಂಭವಾಗ ಬೇಕು ಎಂಬುದು ಜಿಲ್ಲಾ ಸಿವಿಲ್ ಕಂಟ್ರಾಕ್ಟರ್‌ಗಳ ಒಕ್ಕೂಟದ ಆಗ್ರಹ.
Discover more from Coastal Times Kannada
Subscribe to get the latest posts sent to your email.
Discussion about this post