ಮಂಗಳೂರು, ಮಾ.7: ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯಲ್ಲಿ ಬಿಷಪ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಸಂಸ್ಥೆಯ ಖಜಾಂಜಿ ಹಾಗೂ ಕಾನೂನು ಸಲಹೆಗಾರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ನಗರದ ಮಹಿಳಾ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಸಿಎಸ್ಐ ವಿಭಾಗದ ಚರ್ಚ್ ಗಳ ಮುಖ್ಯಸ್ಥ ಸ್ಥಾನದಲ್ಲಿರುವ ಬಲ್ಮಠದ ಬಿಷಪ್ ಹೌಸ್ ನಲ್ಲಿ ಹತ್ತು ವರ್ಷಗಳಿಂದ ಸೆಕ್ರಟರಿಯಾಗಿ ಕೆಲಸಕ್ಕಿದ್ದ ಮಹಿಳೆಗೆ ಚರ್ಚ್ ಪಾದ್ರಿಗಳೇ ಲೈಂಗಿಕ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಆಕೆ ಮದುವೆಯಾಗಿ ವಿಚ್ಛೇದಿತ ಮಹಿಳೆಯಾಗಿದ್ದು, ಬಿಷಪ್ ಹೌಸ್ ನಲ್ಲಿ ಹತ್ತು ವರ್ಷಗಳಿಂದ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಜೂನ್ ತಿಂಗಳಿನಿಂದ ಮಹಿಳೆಯನ್ನು ಕೆಲಸದಿಂದ ಬಿಟ್ಟು ಹೋಗುವಂತೆ ಬಿಷಪ್ ಮತ್ತು ಅಲ್ಲಿರುವ ಅಧಿಕಾರಸ್ಥರು ಒತ್ತಡ ಹೇರಿದ್ದಾರೆಂದು ಆರೋಪಿಸಲಾಗಿದೆ.
ಇದಲ್ಲದೆ, ಮಹಿಳೆ ಕೆಲಸ ಮಾಡುತ್ತಿದ್ದ ಬಿಷಪ್ ಸೆಕ್ರಟರಿ ಕಚೇರಿಗೆ ಬಲವಂತದಿಂದ ಬೀಗ ಹಾಕಲಾಗಿದ್ದು ಮಹಿಳೆ ಕಳೆದ 200 ದಿನಗಳಿಂದ ಕಚೇರಿಯ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಸರಗೋಡು ಮೂಲದ ವಿನ್ಸೆಂಟ್ ಪಾಲನ್ ಮತ್ತು ಮಂಗಳೂರಿನ ಚರ್ಚ್ ಪಾದ್ರಿ ನೋಯಲ್ ಕರ್ಕಡ ಎಂಬಿಬ್ಬರು ಸೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಇದುವರೆಗೆ ಸುಮ್ಮನಿದ್ದೆ. ಈಗ ಒಡನಾಡಿ ಸಂಸ್ಥೆಯವರು ಸ್ಥೆರ್ಯ ತುಂಬಿದ್ದರಿಂದ ಈ ಬಗ್ಗೆ ದೂರು ನೀಡಿರುವುದಾಗಿ ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಂಸ್ಥೆಯ ಖಜಾಂಚಿ 2017ರ ಅಕ್ಟೋಬರ್‌ನಿಂದಲೂ ಕಿರುಕುಳ ನೀಡಲಾರಂಭಿಸಿದ್ದರು. ಈ ಬಗ್ಗೆ ಬಿಷಪ್ ಅವರಿಗೂ ದೂರು ನೀಡಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು : ನೊಂದ ಮಹಿಳೆ ನೀಡಿರುವ ದೂರಿನಂತೆ ಮಹಿಳಾ ಠಾಣೆ ಪೊಲೀಸರು 6 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯ ಖಜಾಂಚಿ ವಿನ್ಸೆಂಟ್ ಪಾಲನ್ಹಾ, ಕಾನೂನು ಸಲಹೆಗಾರ ಫಾ. ನೋಯಲ್ ಕರ್ಕಡ, ಉಪಾಧ್ಯಕ್ಷೆ ಸುಜತಾ, ಕಾರ್ಯದರ್ಶಿ ಡಿ.ವಿಲಿಯಂ ಕೇರಿ, ಕರುಣಾಕರ ಕುಂದರ್, ಮನೋಹರ ಅಮ್ಮಣ್ಣ ವಿರುದ್ಧ ದೂರು ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post