• About us
  • Contact us
  • Disclaimer
Sunday, August 10, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪೂರ್ಣ ಬಹುಮತದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ: ನಳಿನ್ ಕುಮಾರ್ ಕಟೀಲ್

Coastal Times by Coastal Times
May 8, 2023
in ಕರಾವಳಿ
ಪೂರ್ಣ ಬಹುಮತದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ: ನಳಿನ್ ಕುಮಾರ್ ಕಟೀಲ್
30
VIEWS
WhatsappTelegramShare on FacebookShare on Twitter

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿ.ಎಸ್‌.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವಗಳ ಸರಕಾರಗಳು ಅನುಷ್ಠಾನ ಮಾಡಿದ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯದ ಜನತೆಗೆ ಸಂಪೂರ್ಣ ಮೆಚ್ಚುಗೆಯಿದ್ದು, ಭಾರತೀಯ ಜನತಾ ಪಕ್ಷದ ಪೂರ್ಣ ಬಹುಮತದ ಸರಕಾರ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿದ್ದು, ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ದರ್ಶನ ಮಾಡಿದ್ದೇನೆ. ಒಂದು ವರ್ಷದಿಂದ ಬಿಜೆಪಿಯ ಚುನಾವಣೆ ತಯಾರಿ ನಡೆದಿತ್ತು. ಪೇಜ್ ಪ್ರಮುಖರ ಸಮಾವೇಶದಿಂದ ತೊಡಗಿ, ಸಂಕಲ್ಪ ಯಾತ್ರೆ, ಬೂತ್ ವಿಜಯ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಮಡಿದ್ದೇವೆ. ಪ್ರಧಾನಿ ಮೋದಿ ಅವರು ಚುನಾವಣೆ ಘೋಷಣೆಗೆ ಮೊದಲು 16 ಬಾರಿ, ಚುನಾವಣೆ ಘೋಷಣೆ ಆದ ನಂತರ 20 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿಯ ಬಹುಮತದ ಸರಕಾರ ನಿರ್ಮಾಣ ಆಗುತ್ತದೆ ಎಂದು ನಳಿನ್ ಭರವಸೆ ವ್ಯಕ್ತಪಡಿಸಿದರು.

ಚುನಾವಣೆ ಪ್ರಚಾರದ ವೇಳೆ ಹೋದ ಕಡೆಗಳೆಲ್ಲಾ ಬಿಜೆಪಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಡಬಲ್ ಎಂಜಿನ್ ಸರಕಾರದ ಸಾಧನೆಗಳು ಇವತ್ತು ಜನಸಾಮಾನ್ಯರಿಗೆ ತಲುಪಿವೆ. ಪ್ರಧಾನಿ ಮೋದಿ ಅವರ ಆಡಳಿತದ ಶೈಲಿ, ಅಭಿವೃದ್ಧಿ ಕಾರ್ಯಗಳು, ನಮ್ಮ ಮುಖ್ಯಮಂತ್ರಿಗಳ ಕಾರ್ಯಗಳು, ಡಬಲ್ ಎಂಜಿನ್ ರಕಾರ ಅನುಷ್ಠಾನ ಮಾಡಿದ ಸಮಾಜ ಕಲ್ಯಾಣ ಯೋಜನೆಗಳು ಪ್ರತಿ ಮನೆಮನೆಗೆ ತಲುಪಿವೆ. ಅಭೂತಪೂರ್ವ ಅಭಿವೃದ್ಧಿ ಕಾರ್ಯ, ಮೂಲಸೌಕರ್ಯ ನಿರ್ಮಾಣದ ಲಾಭಗಳು ಜನಮಾನಸಕ್ಕೆ ತಲುಪಿವೆ ಎಂದು ಅವರು ನುಡಿದರು.

ಕಳೆದ ಚುನಾವಣೆಯ ವರೆಗೂ ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರವಾಸದ ನಂತರ ಆ ಭಾಗದಲ್ಲೂ ನಿರೀಕ್ಷೆಗೆ ಮೀರಿ ಜನಬೆಂಬಲ ಬಿಜೆಪಿಗೆ ಸಿಗುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ಜನರ ಸಕಾರಾತ್ಮಕ ಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಪೂರ್ಣ ಬಹುಮತದ ಸರಕಾರ ಬರುತ್ತದೆ. ಹಿಂದಿನ ಯಾವ ಪ್ರಧಾನಿಯೂ ಮಾಡಿರದಷ್ಟು ರೋಡ್‌ ಶೋಗಳನ್ನು, ಸಾರ್ವಜನಿಕ ಸಭೆಗಳನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಫಲಾನುಭವಿಗಳ ಜತೆ ಸಂವಾದ ಮಾಡಿದಾಗ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ. ಪ್ರತಿ
ಮತಗಟ್ಟೆಯಲ್ಲಿ 15-20 ಫಲಾನುಭವಿಗಳಿದ್ದಾರೆ. ಅವರೆಲ್ಲರೂ ಮೋದಿ ಸರಕಾರ, ಬೊಮ್ಮಾಯಿ ಸರಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಳಿನ್ ಹೇಳಿದರು.

ಅಂಬೇಡ್ಕಕರ್ ಕಂಡ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೊಟ್ಟಿರುವ ಮೀಸಲಾತಿ ಒದಗಿಸಿಕೊಟ್ಟಿದ್ದು ಬಿಜೆಪಿ ಸರಕಾರ. ವೀರಶೈವ, ಒಕ್ಕಲಿಗರಿಗೆ ನೀಡಿದ ಮೀಸಲಾತಿ, ಸದಾಶಿವ ಆಯೋಗದ ವರದಿ ಅನುಸಾರ ನೀಡಿರುವ ಒಳ ಮೀಸಲಾತಿ ಪರಿಹಾರಗಳು, ಬೆಟ್ಟಕುರುಬ, ಕಾಡುಕುರುಬ ಸಮುದಾಯಕ್ಕೆ ಕೊಟ್ಟಿರುವ ಮೀಸಲಾತಿ- ಹೀಗೆ ಸಾಮಾಜಿಕ ನ್ಯಾಯಕ್ಕಾಗಿ ಕೈಗೊಂಡ ಕ್ರಮಗಳು ಅನೇಕ. ಮೂಲಭೂತ ಸೌಕರ್ಯ, ಜನ ಕಲ್ಯಾಣದ ಯೋಜನೆ, ಸಾಮಾಜಿಕ ನ್ಯಾಯ- ಈ ಮೂರನ್ನೂ ಕೊಟ್ಟಿದ್ದರಿಂದ ಬಿಜೆಪಿ ಬಗ್ಗೆ ಜನರಿಗೆ ಭರವಸೆ ಮೂಡಿದೆ.

224 ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಗಳನ್ನು ಗುರುತಿಸಿ ಗೌರವಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ 34 ಒಬಿಸಿ, 37 ಪರಿಶಿಷ್ಟ ಜಾತಿ, 18 ಪರಿಶಿಷ್ಟ ಪಂಗಡ, 134 ಸಾಮಾನ್ಯ ವರ್ಗದವರಿಗೆ ಟಿಕೆಟ್ ನಿಡಿದ್ದೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿದ್ದೇವೆ. ಆದಿದ್ರಾವಿಡ ಸಮುದದಾಯದ ಭಾಗೀರಥಿ ಮುರುಳ್ಯ, ಸಾಮಾನ್ಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಅಂಥವರಿಗೆ ಟಿಕೆಟ್ ನೀಡಿದ್ದೇವೆ. 4 ಜನ ಜಿಲ್ಲಾಧ್ಯಕ್ಷರು, ಬೀದರ್ ಕಾರ್ಯಕರ್ತರನ್ನು ಐಎಎಸ್, ಐಪಿಎಸ್‌, ಅಧಿಕಾರಿಗಳು, ವೈದ್ಯರುಗಳನ್ನು ಅಭ್ಯರ್ಥಿಗಳಾಗಿ ನಿಲ್ಲಿಸಿದ್ದೇವೆ ಎಂದು ನಳಿನ್ ವಿವರ ನೀಡಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಕೇಂದ್ರ ನಾಯಕ ಅಮಿತ್ ಶಾ, ಬೇರೆ ಬೇರೆ ಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಸಚಿವರು ರಾಜ್ಯದಲ್ಲಿ ಬಿಜೆಪಿ ಪರ ವ್ಯಾಪಕ ಪ್ರಚಾರ ಮಾಡಿದ್ದಾರೆ. ಇವೆಲ್ಲವೂ ಪಕ್ಷಕ್ಕೆ ಬಹಳಷ್ಟು ಬಲ ಕೊಟ್ಟಿದೆ. ಪ್ರಧಾನಿ ಪ್ರವಾಸ, ಅವರ ಯೋಜನೆ, ರೋಡ್ ಶೋ ಬಗ್ಗೆ ಚರ್ಚೆ ನಡೆಯುತ್ತಿದೆ. ಇವೆಲ್ಲವೂ ಜನರ ಮನಸ್ಸಿನಲ್ಲಿದೆ. ನಾಲ್ಕು ವರ್ಷದ ಸರಕಾರ ನಮ್ಮದು. ಈ ಅವಧಿಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಪ್ಪಿಗೆಯಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ,- ಹೀಗೆ ಎಲ್ಲ ಭಾಗಗಳಲ್ಲೂ ಬಿಜೆಪಿ ಇಂದು ಮುಮಚೂಣಿಯಲ್ಲಿದೆ ಎಂದು ನಳಿನ್ ಹೇಳಿದರು.

ಕೋವಿಡ್, ಬರ, ನೆರೆ ಮಧ್ಯೆಯೂ ಕರ್ನಾಟಕವನ್ನು ಆರ್ಥಿಕತೆಯಲ್ಲಿ ಸುಸ್ಥಿರವಾಗಿ ಮುನ್ನಡೆಸಿದ್ದು ಬಿಜೆಪಿ ಸರಕಾರದ ಸಾಧನೆ ಎಂದು ಅವರು ನುಡಿದರು. ದ.ಕ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಸ್ಥಾನಗಳನ್ನು ಗೆಲ್ಲುತ್ತೇವೆ. ಎಲ್ಲ ಸಮೀಕ್ಷೆಗಳಲ್ಲೂ ಕರಾವಳಿ ಮುಂದಿದೆ. ರಾಜ್ಯದಲ್ಲಿ ಬಹುಮತದ ಸರಕಾರ ಮಾಡುತ್ತೇವೆ ಎಂದು ನಳಿನ್ ಪ್ರತಿಪಾದಿಸಿದರು.

ಸಿದ್ದರಾಮಯ್ಯ, ಡಿಕೆಶಿ ಸೋಲು ಖಚಿತ ; ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂತಹ ಕಾಂಗ್ರೆಸ್ಸನ್ನು ರಾಜ್ಯದ ಜನತೆ ತಿರಸ್ಕರಿಸುತ್ತಾರೆ. ವರಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಖಚಿತ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಸೋಲುವುದು ಖಚಿತ. ಹಾಗಿದ್ದರೂ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆದಿದೆ. ಯಾರನ್ನು ಯಾರು ಸೋಲಿಸುವುದು ಅಂತ ಅವರವರೇ ಕಾಯುತ್ತಿದ್ದಾರೆ. ಕಳೆದ ಬಾರಿ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಗುಂಪುಗಳೇ ಈ ಬಾರಿಯೂ ಕಾರ್ಯ ಪ್ರವೃತ್ತವಾಗಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬಜರಂಗ ದಳ ನಿಷೇಧದ ದ್ವೇಷದ ರಾಜಕಾರಣ, ಸುಳ್ಳು ಭರವಸೆ, ಗ್ಯಾರಂಟಿ ಕಾರ್ಡ್‌ಗಳು- ಇವೆಲ್ಲ ಕಾಂಗ್ರೆಸ್‌ ಭವಿಷ್ಯ ಏನು ಎಂಬುದನ್ನು ಈಗಾಗಲೇ ಜನತೆ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಗಳು ರಾಜಸ್ಥಾನ, ಹಿಮಾಚಲದಲ್ಲಿ ಯಾಕೆ ಜಾರಿಯಾಗಿಲ್ಲ? 60 ರ್ಷಗಳ ಸುದೀರ್ಘ ಆಡಳಿತದಲ್ಲಿ ಕಾಂಗ್ರೆಸ್‌ನವರು ಕೊಡಲಾಗದ ಗ್ಯಾರಂಟಿಗಳನ್ನು ಈಗ ಕೊಡುತ್ತೇವೆ ಅಂತ ಸುಳ್ಳು ಹೇಳ್ತೀರಲ್ಲ ಎಂದು ಕಾಂಗ್ರೆಸ್ ಮುಖಂಡರನ್ನು ನಳಿನ್‌ ತರಾಟೆಗೆ ತೆಗೆದುಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ಹಿರಿಯರಾದ ಮಾಜಿ ಶಾಸಕ ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ, ವಕ್ತಾರ ರವಿಶಂಕರ ಮಿಜಾರ್, ಸುಧೀರ್ ಉಪಸ್ಥಿತರಿದ್ದರು.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕೇರಳ ಪ್ರವಾಸಿ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೇರಿಕೆ : ಮೃತರ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರ

Next Post

ಸರಕಾರದ ಸಾಧನೆಗೆ ಜನಮೆಚ್ಚುಗೆ; ಬಿಜೆಪಿ ಬಹುಮತ ಖಚಿತ: ಕೃಷ್ಣ ಜೆ. ಪಾಲೆಮಾರ್

Related Posts

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ
ಕರಾವಳಿ

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ

August 10, 2025
18
ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ
ಕರಾವಳಿ

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

August 9, 2025
8
Next Post
ಸರಕಾರದ ಸಾಧನೆಗೆ ಜನಮೆಚ್ಚುಗೆ; ಬಿಜೆಪಿ ಬಹುಮತ ಖಚಿತ: ಕೃಷ್ಣ ಜೆ. ಪಾಲೆಮಾರ್

ಸರಕಾರದ ಸಾಧನೆಗೆ ಜನಮೆಚ್ಚುಗೆ; ಬಿಜೆಪಿ ಬಹುಮತ ಖಚಿತ: ಕೃಷ್ಣ ಜೆ. ಪಾಲೆಮಾರ್

Discussion about this post

Recent News

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ

August 10, 2025
18
ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

August 9, 2025
8
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ

ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಗೆ ಗೌರವಾರ್ಪಣೆ

August 10, 2025
ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

August 9, 2025
ಮಂಗಳೂರು: ಮಸಾಜ್ ಪಾರ್ಲರ್ ಮಾಲೀಕನಿಂದ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ, ಅರೆನಗ್ನ ಫೋಟೋ ತೆಗೆದು ಬ್ಲಾಕ್ಮೇಲ್

ಮಂಗಳೂರು: ಮಸಾಜ್ ಪಾರ್ಲರ್ ಮಾಲೀಕನಿಂದ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ, ಅರೆನಗ್ನ ಫೋಟೋ ತೆಗೆದು ಬ್ಲಾಕ್ಮೇಲ್

August 9, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d