• About us
  • Contact us
  • Disclaimer
Monday, March 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಜೇಶ್ವರ ಭೀಕರ ಅಪಘಾತ: ಆ್ಯಂಬುಲೆನ್ಸ್ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ

Coastal Times by Coastal Times
May 8, 2024
in ಕರಾವಳಿ
ಮಂಜೇಶ್ವರ ಭೀಕರ ಅಪಘಾತ: ಆ್ಯಂಬುಲೆನ್ಸ್ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ಮೂವರ ದುರ್ಮರಣ
95
VIEWS
WhatsappTelegramShare on FacebookShare on Twitter

ಮಂಜೇಶ್ವರ, ಮೇ.7: ಹೊಸತಾಗಿ ನಿರ್ಮಾಣಗೊಂಡಿರುವ ತಲಪಾಡಿ – ಮಂಜೇಶ್ವರ – ಕಾಸರಗೋಡು ಹೆದ್ದಾರಿಯಲ್ಲಿ ಭೀಕರ ಅಪಘಾತ ಉಂಟಾಗಿದ್ದು, ಕಾರು ಮತ್ತು ಆಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಂಡೈ ಕಾರಿನಲ್ಲಿ ಕೊಲ್ಲೂರು ಹೋಗಿ ಬರುತ್ತಿದ್ದ ತೃಶ್ಶೂರು ಜಿಲ್ಲೆಯ ಇರಿಂಜಾಲಕುಡ ನಿವಾಸಿ ಪಿ. ಶಿವಕುಮಾರ್ (54) ಹಾಗೂ ಅವರ ಮಕ್ಕಳಾದ ಶರತ್ (23) ಮತ್ತು ಸೌರವ್ (15) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.

ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ವೇಗವಾಗಿ ತೆರಳುತ್ತಿದ್ದ ಆಂಬುಲೆನ್ಸ್ ವಾಹನ ಮಂಜೇಶ್ವರದಲ್ಲಿ ಏಕಮುಖದ ಹೆದ್ದಾರಿಗೆ ತಪ್ಪಾಗಿ ಎಂಟ್ರಿ ಕೊಟ್ಟಿದೆ. ಕಾಸರಗೋಡಿನಲ್ಲಿ ನಿನ್ನೆ ನಡೆದಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ಮಂಗಳೂರಿಗೆ ಕರೆತರುತ್ತಿದ್ದ ಆಂಬುಲೆನ್ಸ್ ಸರ್ವಿಸ್ ರಸ್ತೆಯ ಮೂಲಕ ಬಲಭಾಗಕ್ಕೆ ತಿರುಗಿ ತಲಪಾಡಿಯಿಂದ ಕಾಸರಗೋಡಿನತ್ತ ತೆರಳುವ ಹೆದ್ದಾರಿಗೆ ತಪ್ಪಾಗಿ ನುಗ್ಗಿತ್ತು. ಅಲ್ಲದೆ, ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗಲೇ ಎದುರಿನಿಂದ ಅತಿ ವೇಗದಲ್ಲಿ ಬಂದ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ಮಂಗಳವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಕಾರನ್ನು ನೂರು ಮೀಟರ್ ದೂರದ ವರೆಗೂ ಆಂಬುಲೆನ್ಸ್ ಎಳೆದೊಯ್ದಿದ್ದು, ಎರಡೂ ವಾಹನಗಳು ಪಲ್ಟಿಯಾಗಿ ಬಿದ್ದಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದರೊಳಗಿದ್ದ ಪ್ರಯಾಣಿಕರು ತೀವ್ರ ಗಾಯಗೊಂಡು ಸಿಲುಕಿಕೊಂಡಿದ್ದರು. ಆಂಬುಲೆನ್ಸ್ ವಾಹನದಲ್ಲಿದ್ದ ರೋಗಿ ಸಹಿತ ಜೊತೆಗಿದ್ದವರು ಮತ್ತು ಚಾಲಕ ತೀವ್ರ ಗಾಯಗೊಂಡಿದ್ದಾರೆ. ಆಂಬುಲೆನ್ಸ್ ನಲ್ಲಿ ಮಹಿಳಾ ರೋಗಿಯಿದ್ದು, ಅವರ ಜೊತೆಗೆ ಗಂಡನೂ ಇದ್ದರು.

ತೃಶ್ಶೂರು ಜಿಲ್ಲೆಯ ಇರಿಂಜಾಲಕುಡ ನಿವಾಸಿ ಶಿವಕುಮಾರ್ ದುಬೈನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ರಜೆಯಲ್ಲಿ ಬಂದಿದ್ದರು. ಬೆಂಗಳೂರಿನಲ್ಲಿರುವ ಸಂಬಂಧಿಕರನ್ನು ನೋಡಿ ಬರಲೆಂದು ಹುಂಡೈ ಇಯಾನ್ ಕಾರಿನಲ್ಲಿ ತೆರಳಿದ್ದರು. ಹಿಂತಿರುಗಿ ಬರುತ್ತಿದ್ದಾಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಮನೆಯತ್ತ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಂದೆ, ಮಕ್ಕಳು ಸಾವನ್ನಪ್ಪಿದರೆ, ಪತ್ನಿ ಗಾಯಗೊಂಡಿದ್ದಾರೆ. ಕಾರು ಪೂರ್ತಿ ನಜ್ಜುಗುಜ್ಜಾಗಿದ್ದು, ಅದರ ಒಳಗೆ ಸಿಲುಕಿದ್ದವರನ್ನು ಹೊರಗೆ ತೆಗೆಯಲು ಸ್ಥಳೀಯರು ಹರಸಾಹಸ ನಡೆಸಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪೆನ್ ಡ್ರೈವ್ ಕೇಸ್​ನ ರೂವಾರಿಯೇ ಕಾಂಗ್ರೆಸ್ ಪಕ್ಷ : ದೇವರಾಜೇಗೌಡ

Next Post

ಆನ್‌ಲೈನ್‌ ಗೇಮಿಂಗ್ ಗಾಗಿ 20 ಸಾವಿರ ರೂ. ಸಾಲ, ನೀಟ್‌ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!

Related Posts

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ
ಕರಾವಳಿ

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ

February 25, 2026
33
‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
30
Next Post
ಆನ್‌ಲೈನ್‌ ಗೇಮಿಂಗ್ ಗಾಗಿ 20 ಸಾವಿರ ರೂ. ಸಾಲ, ನೀಟ್‌ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!

ಆನ್‌ಲೈನ್‌ ಗೇಮಿಂಗ್ ಗಾಗಿ 20 ಸಾವಿರ ರೂ. ಸಾಲ, ನೀಟ್‌ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!

Discussion about this post

Recent News

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
68
ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ

March 1, 2026
ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!

ಇರಾನ್ ಮೇಲೆ ಇಸ್ರೇಲ್ ದಾಳಿ; ರಾಜಧಾನಿ ಟೆಹ್ರಾನ್ ಮೇಲೆ ಭೀಕರ ಕ್ಷಿಪಣಿ ದಾಳಿ, ತುರ್ತು ಪರಿಸ್ಥಿತಿ ಘೋಷಣೆ!

February 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d