ಮಂಗಳೂರು, ಜೂನ್ 7 : ನಗರದ ಯೆಯ್ಯಾಡಿಯ ಬಾರ್ ಒಂದರಲ್ಲಿ ಎರಡು ಗ್ಯಾಂಗ್ ಸದಸ್ಯರು ಕುಡಿದ ಮತ್ತಿನಲ್ಲಿ ಜಗಳವಾಡಿದ್ದು, ಕೌಶಿಕ್ ಎಂಬ ಯುವಕನ ಮೇಲೆ ಒಂದು ತಂಡದ ಸದಸ್ಯರು ಚೂರಿಯಲ್ಲಿ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ. ಕೌಶಿಕ್ ತೀವ್ರ ಗಾಯಗೊಂಡಿದ್ದು, ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೌಶಿಕ್ ಮಧ್ಯಾಹ್ನ 2 ಗಂಟೆ ವೇಳೆಗೆ ಬಾರ್‌ಗೆ ಹೋಗಿದ್ದು, ಈ ವೇಳೆ ತನ್ನ ಸ್ನೇಹಿತ ರಾಹುಲ್‌ನನ್ನೂ ಊಟಕ್ಕೆ ಕರೆದಿದ್ದಾರೆ. ರಾಹುಲ್ ಅಲ್ಲಿಗೆ ಹೋದಾಗ ಮತ್ತೂಂದು ಟೇಬಲ್‌ನಲ್ಲಿ ಕುಳಿತಿದ್ದ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಅವರು ಕೌಶಿಕ್‌ಗೆ ಬಯ್ಯುತ್ತಿದ್ದುದು ಕಂಡು ಬಂದಿದೆ. ಮೂವರೂ ಹೊಡೆಯಲು ಬಂದಾಗ ರಾಹುಲ್ ಸಮಾಧಾನಪಡಿಸಿ ತಡೆದಿದ್ದಾರೆ. ಮತ್ತೆ ಬೊಬ್ಬೆ ಜೋರಾಗುತ್ತಿದ್ದಂತೆ ಬಾರ್‌ನ ಕೆಲಸಗಾರರು ಎಲ್ಲರನ್ನೂ ಹೊರಗೆ ಕಳುಹಿಸಿದ್ದು, ಆ ವೇಳೆ ಬ್ರಿಜೇಶ್ ತನ್ನಲ್ಲಿದ್ದ ಚೂರಿಯಿಂದ ಕೌಶಿಕ್‌ನ ಹೊಟ್ಟೆಯ ಬಲಭಾಗ, ಎದೆಯ ಎಡಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಎಂದು ರಾಹುಲ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಸಂತು ಹಾಗೂ ಕೌಶಿಕ್‌ಗೆ ಯಾವುದೋ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಷಯದಲ್ಲಿ ಪರಿಚಯದವರೇ ಆದ ಆಟೋ ಚಾಲಕ ಚೈನೀಸ್ ಗಣೇಶ್, ಶಿಜು ಮತ್ತು ಬ್ರಿಜೇಶ್ ಜತೆ ಸೇರಿಕೊಂಡು ಕೌಶಿಕ್‌ನೊಂದಿಗೆ ತಗಾದೆ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ಇರಿದ್ದಾರೆ ಎಂದು ಆರೋಪಿಸಲಾಗಿದೆ. ಜತೆಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಕೌಶಿಕ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post