ಉಳ್ಳಾಲ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಮಹಮ್ಮದ್ ಶಹಬಾಝ್ (27) ಮತ್ತು ಆಕೆಯನ್ನು ಅಪಹರಿಸಲು ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು ಪೊಲೀಸರು ಬಂಧಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪತ್ತೆ ಹಚ್ಚಿ ಪೊಲಷಕರಿಗೆ ನೀಡಿದ್ದು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜುಲೈ 5 ರಂದು ಸಂಜೆ 4 ಗಂಟೆಗೆ ಉಳ್ಳಾಲ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮುಸ್ಲಿಂ ವ್ಯಕ್ತಿಯೋರ್ವರ ಅಪ್ರಾಪ್ತ ಮಗಳು ಮನೆಯಿಂದ ಹೊರ ಹೋದವಳು ಹಿಂತಿರುಗಿರಲಿಲ್ಲ. ಈ ಬಗ್ಗೆ ವ್ಯಕ್ತಿಯು ಉಳ್ಳಾಲ ಠಾಣೆಯಲ್ಲಿ ತನ್ನ ಮಗಳನ್ನ ಯಾರೋ ಅಪಹರಿಸಿರೋದಾಗಿ ದೂರು ನೀಡಿದ್ದರು. ಶಹಭಾಝ್ ಈ ಮೊದಲೂ ಬಾಲಕಿಯನ್ನ ಪುಸಲಾಯಿಸಿ ಆಕೆಯ ಮನೆಯಿಂದ ಕರಕೊಂಡು ಹೋಗಿದ್ದನಂತೆ. ಮತ್ತೆ ಮನೆಗೆ ಹಿಂತಿರುಗಿದ್ದ ಬಾಲಕಿಗೆ ಪೋಷಕರು ಗದರಿದ್ದರು. ಪೋಷಕರು ತನಗೆ ಗದರಿದ್ದ ವಿಚಾರವನ್ನ ಬಾಲಕಿ ಶಹಬಾಝ್ ಗೆ ತಿಳಿಸಿದ್ದಳಂತೆ.
ಇದೀಗ ಶಹಭಾಝ್ ತನ್ನ ಪರಿಚಯಸ್ಥರಾದ ಅಮೀರ್ ಸೊಹೈಲ್ ಮತ್ತು ನಿಶಾ ದಂಪತಿ ಮೂಲಕ ಬಾಲಕಿಯನ್ನ ಮತ್ತೆ ಅಪಹರಿಸಿದ್ದನೆನ್ನಲಾಗಿದೆ. ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿ ಮತ್ತು ಆಕೆಯನ್ನ ಅಪಹರಿಸಿದ್ದ ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯನ್ನ ಉಳ್ಳಾಲ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿಗಳನ್ನ ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post