ಉಳ್ಳಾಲ: ತಲಪಾಡಿಯ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಲೋಕಾಯುಕ್ತ ಮಂಗಳೂರು ಪೊಲೀಸ್ ವಿಭಾಗದಿಂದ ನಿನ್ನೆ ನಡೆದ ದಾಳಿಯ ಸಂದರ್ಭದಲ್ಲಿ ಹಲವಾರು ನ್ಯೂನತೆಗಳು ಕಂಡುಬಂದಿವೆ. ದಲ್ಲಾಳಿಗಳ ಮೂಲಕ ಹಣ ವಸೂಲು, ದಾಖಲಾತಿಗಳಲ್ಲಿ ನ್ಯೂನತೆ ಹಾಗೂ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಸಮಗ್ರ ವರದಿಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ನೀಡಲಾಗುವುದು ಎಂದು ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಕೆ. ತಿಳಿಸಿದ್ದಾರೆ.
ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲಿಸಿದೆ. ಕೇರಳ – ಕರ್ನಾಟಕ ಗಡಿಭಾಗದ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಯಲ್ಲಿ ತನಿಖೆ ನಡೆದಿದೆ. ನಿನ್ನೆ ಸಂಜೆ 7 ಗಂಟೆಯ ಸುಮಾರಿಗೆ ತನಿಖಾ ತಂಡ ಆಗಮಿಸಿದ್ದು, ರಾತ್ರಿ 11 ರವರೆಗೂ ಚೆಕ್ ಪೋಸ್ಟ್ ಒಳಗೆ ದಾಖಲೆಗಳನ್ನು ಶೋಧಿಸಿದ್ದಾರೆ. ಲಾರಿ ಚಾಲಕರಿಂದ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post