ರಾಯಚೂರು, ಏ. 08: ಆತ ಐನಾತಿಗಳಲ್ಲೇ ಐನಾತಿ. ಲಕ್ಕಿ ಭಾಸ್ಕರ್ ಸಿನೆಮಾದಂತೆ ಕೋಟಿ ಕೋಟಿ ವಂಚಿಸಿದ್ದ ಬ್ಯಾಂಕ್ನ ಮ್ಯಾನೇಜರ್ ನನ್ನು ರಾಯಚೂರು ಪೊಲೀಸರು ಕೂಡ ಸಿನೆಮಾ ಸ್ಟೈಲ್ನಲ್ಲೇ ಹೆಡೆಮುರಿಕಟ್ಟಿದ್ದಾರೆ. ಅಷ್ಟೇ ಅಲ್ಲ ಆತನಿಗೆ ಸಪೋರ್ಟ್ ಮಾಡುತ್ತಿದ್ದ ಆಂಧ್ರ ಪ್ರದೇಶದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಲಾಕ್ ಆಗಿದ್ದು, ತನ್ನ ಗುರುತು ಮರೆಮಾಚಲು ಆ ಕಿಲಾಡಿ ತನ್ನ ಗೆಟಪ್ ಅನ್ನೇ ಬದಲಿಸಿಕೊಂಡಿದ್ದ. ಆದರೂ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತೆಲುಗಿನ ಲಕ್ಕಿ ಭಾಸ್ಕರ್ ಸಿನೆಮಾದಂತೆ ವಿವಿಧ ರೀತಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದು. ಆದ್ರೆ ಆ ಸಿನಿಮಾ ಲಕ್ಕಿ ಭಾಸ್ಕರ್ ಸಕ್ಸಸ್ ಆಗಿದ್ದರೆ, ಉತ್ತ ಅದೇ ಮಾದರಿಯಲ್ಲೇ ಹಣ ಮಾಡಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ನರೇಂದ್ರ ರೆಡ್ಡಿ ಸಿಕ್ಕಿಬಿದ್ದಿದ್ದಾನೆ.
ಬ್ಯಾಂಕ್ ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ಸಿಬ್ಬಂದಿ ಅರುಣಾ ಬಂಧಿತ ಆರೋಪಿಗಳು. 2025 ಮಾರ್ಚ್ 7ರಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ರೀಜನಲ್ ಮ್ಯಾನೇಜರ್ ಸುಚೇತ್, 10.97 ಕೋಟಿ ರೂ. ಗೋಲ್ಡ್ ಲೋನ್ ಹಣ ಮಿಸ್ಸಿಂಗ್ ಆಗಿರುವ ಬಗ್ಗೆ ರಾಯಚೂರು ಸೈಬರ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ರಾಯಚೂರು ಶಾಖೆಯ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಮತ್ತು ನಿವೃತ್ತ ಬ್ಯಾಂಕ್ ಸಿಬಂದಿ ಅರುಣಾ ಎನ್ನುವವರು ಪ್ರಮುಖ ಆರೋಪಿಗಳು ಅನ್ನೋದು ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಸಿಬಂದಿಯೇ ಗ್ರಾಹಕರಿಗೆ ತಿಳಿಯದಂತೆ 30 ಮಂದಿಯ ಹೆಸರಿನಲ್ಲಿ ಖಾತೆ ತೆರೆದಿದ್ದಲ್ಲದೆ, ಅವರ ಹೆಸರಿನಲ್ಲೇ ನಕಲಿ ಚಿನ್ನ ಇಟ್ಟು ಸಾಲ ತೆಗೆದಿದ್ದಾರೆ. ಅಲ್ಲದೆ, ಡಿಪಾಸಿಟ್ ಮಾಡಲಾಗಿದ್ದ ಒಟ್ಟು 10 ಕೋಟಿ 97 ಲಕ್ಷ ರೂಪಾಯಿ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದು ಬ್ಯಾಂಕಿನ ಆಂತರಿಕ ತನಿಖೆಯಲ್ಲಿ ಪತ್ತೆಯಾಗಿದೆ.
10 ಕೋಟಿ ವಂಚನೆ ಬಳಿಕ ಆರೋಪಿ ವಿವಿಧ ರೀತಿ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ. ಮೊದಲು ಟಿಪ್ ಟಾಪ್ ಆಗಿ ಬ್ಲೇಜರ್ ಹಾಕಿ ಫೋಸು ಕೊಡುತ್ತಿದ್ದ ಆರೋಪಿ ಮ್ಯಾನೇಜರ್ ನರೇಂದ್ರ ರೆಡ್ಡಿ ತಲೆ ಮರೆಸಿಕೊಂಡ ಬಳಿಕ ಬಿಳಿ ಗಡ್ಡ ಬಿಟ್ಟಿದ್ದ. ಅಲ್ಲದೇ ಸಾದಾ ಬಟ್ಟೆಗಳನ್ನ ಹಾಕಿಕೊಂಡು ಕಣ್ಣಿಗೆ ಸ್ಪೆಕ್ಟ್ಸ್ ಕೂಡ ಹಾಕಿಕೊಂಡಿದ್ದ. ಈ ಮೂಲಕ ತನ್ನ ಗುರುತು ಪತ್ತೆಯಾಗದ ರೀತಿ ಓಡಾಡುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದಲ್ಲದೇ ಆರೋಪಿ ಬರೀ ವಾಟ್ಸಪ್ ಕಾಲ್ನಲ್ಲಿ ಮಾತನಾಡೋದು,ವಿವಿಧ ಪುಣ್ಯ ಕ್ಷೇತ್ರಗಳಿಗೆ ಹೋಗಿ ಅಲ್ಲೇ ತಲೆ ಮರೆಸಿಕೊಳ್ಳುತ್ತಿದ್ದ. ಈ ವಿಚಾರವನ್ನು ತಿಳಿದ ಖಾಕಿ ಪಡೆ ಕಾರ್ಯಚರಣೆಗಿಳಿತು.
ಬ್ಯಾಂಕ್ನಲ್ಲಿ ಕೈಚಳಕ ತೋರಿದ್ದ ನರೇಂದ್ರ ರೆಡ್ಡಿ ಜೊತೆ ಆತನ ಜೊತೆ ಕೈ ಜೋಡಿಸಿದ್ದ ಅರುಣಾ ದೇವಿಯನ್ನೂ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಟೆಕ್ನಿಕಲ್ ಆಯಾಮದಲ್ಲೇ ರಾಯಚೂರು ಸಿಇಎನ್ ಪೊಲೀಸರು ಆಗಂತುಕನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಆಂಧ್ರ ಮೂಲದ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಅರುಣಾ ದೇವಿ ಹಾಗೂ ನರೇಂದ್ರ ಇಬ್ಬರು ಆಂಧ್ರಪ್ರದೇಶದಲ್ಲಿ ಮಾಜಿ ಸಹೋದ್ಯೋಗಿಗಳು. ಅಲ್ಲಿನ ಪರಿಚಯಂದಿಂದ ನರೇಂದ್ರ ಇಲ್ಲಿ ಕೃತ್ಯ ಎಸಗುವುದರಲ್ಲಿ ಆಕೆ ಕೂಡ ಭಾಗಿಯಾಗಿದ್ದಾಳೆ. ಹೀಗಾಗಿ ಆಕೆಗೂ ಸಹ ಪೊಲೀಸರು ಜೈಲೂಟ ಬಡಿಸಿದ್ದಾರೆ.
ಇತ್ತ 10 ಕೋಟಿ ರೂ. ವಂಚನೆಯಲ್ಲಿ ನರೇಂದ್ರನಿಂದ ಸದ್ಯ ಬರೀ 78 ಸಾವಿರ ರೂಪಾಯಿ ಮಾತ್ರ ಸೀಜ್ ಆಗಿದೆ. ಉಳಿದ ಹಣ ಎಲ್ಲಿಟ್ಟಿದ್ದಾರೆ? ಹೇಗೆಲ್ಲಾ ಬಳಕೆ ಮಾಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳಿಗೆ ಸಂಬಂಧಿಸಿದಂತೆಯೂ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post