ಮಂಗಳೂರು, ಮೇ 8: ನಗರದ ವೆಲೆನ್ಸಿಯಾದ ರೋಶನಿ ನಿಲಯದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ (21) ಎಂಬಾಕೆ ಮೇ 7ರಿಂದ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಕೆ ರೋಶನಿ ನಿಲಯದಲ್ಲಿ ಕ್ರಿಮಿನಾಲಜಿ ಆ್ಯಂಡ್ ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಮೊದಲನೆ ವರ್ಷದಲ್ಲಿ ಕಲಿಯುತ್ತಿದ್ದು, ಮೇ 7ರಂದು ಪೂ.11:50ಕ್ಕೆ ರೋಶನಿ ನಿಲಯದಲ್ಲಿ 2ನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ತನ್ನ ಸ್ನೇಹಿತೆಯರ ಬಳಿ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ವಾಪಸ್ ಪರೀಕ್ಷಾ ಹಾಲ್‌ಗೆ ಬಾರದೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಾಲೇಜಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಾಲೇಜಿನಿಂದ ಹೊರಗೆ ಹೋಗಿರುವುದು ಕಂಡು ಬಂದಿದೆ. 5.6 ಅಡಿ ಎತ್ತರದ, ಗೋದಿ ಮೈಬಣ್ಣದ, ದುಂಡು ಮುಖದ, ದಪ್ಪ ಶರೀರದ ಈಕೆ ನಾಪತ್ತೆಯಾದಾಗ ಕಾಲೇಜಿನ ಸಮವಸ್ತ್ರ ಧರಿಸಿ ದ್ದರು. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲ ಈಕೆಯನ್ನು ಕಂಡವರು 0824-2220800/ 2220518/ 9480805339/ 9480805346ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post