ನವದೆಹಲಿ: ನೆಟ್‌ಫ್ಲಿಕ್ಸ್ ಜರ್ಮನ್ ಆಡಿಯೋ ಬ್ರ್ಯಾಂಡ್ ಸೆನ್‌ಹೈಸರ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಪ್ರಪಂಚದಾದ್ಯಂತ ತನ್ನ ಲಕ್ಷಾಂತರ ಬಳಕೆದಾರರಿಗೆ ‘ಸ್ಪೇಷಲ್ ಆಡಿಯೋ’ವನ್ನು ಪರಿಚಯಿಸಿದೆ. ಇದು ಸಿನಿಮೀಯ ಅನುಭವವನ್ನು ನೀಡುತ್ತಿದ್ದು, ಯಾವುದೇ ಸ್ಟಿರಿಯೋಗೆ ಭಾಷಾಂತರಿಸಲು ‘ಸ್ಪೇಷಲ್ ಆಡಿಯೋ’ ಸಹಾಯ ಮಾಡುತ್ತದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ. ‘ಸ್ಪೇಷಲ್ ಆಡಿಯೋ’ ಎಂಬುದು 3D ಆಡಿಯೋ ತಂತ್ರಜ್ಞಾನವಾಗಿದೆ. ಅದು ಥಿಯೇಟರ್ ತರಹದ ಅನುಭವಕ್ಕಾಗಿ ಡೈನಾಮಿಕ್ ಹೆಡ್-ಟ್ರ್ಯಾಕಿಂಗ್ ಅನ್ನು ಬಳಸುವ ಮೂಲಕ ಹೆಚ್ಚು ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ರಚಿಸುತ್ತದೆ. ಗುರುವಾರದಿಂದ ‘ಸ್ಪೇಷಲ್ ಆಡಿಯೋ’ವನ್ನು ನಮ್ಮ ಗ್ರಾಹಕರಿಗೆ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.
ವಿಡಿಯೋ ಮತ್ತು ಆಡಿಯೋಗೆ ಈ ‘ಸ್ಪೇಷಲ್ ಆಡಿಯೋ’ ಸಂಯೋಜನೆಯು ವೀಕ್ಷಕರನ್ನು ಕಥೆಯ ಹತ್ತಿರಕ್ಕೆ ಸೆಳೆಯುತ್ತದೆ. 4K, HDR, Dolby Atmos ಮತ್ತು Netflix ಕ್ಯಾಲಿಬ್ರೇಟೆಡ್ ಮೋಡ್‌ನಂತಹ ಇತರ ವೈಶಿಷ್ಟ್ಯಗಳಿಗೆ ಈ ಸಾಮರ್ಥ್ಯವನ್ನು ಸೇರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಈ ‘ಸ್ಪೇಷಲ್ ಆಡಿಯೋ’ವನ್ನು ‘ಸ್ಟ್ರೇಂಜರ್ ಥಿಂಗ್ಸ್,’ ‘ದಿ ಆಡಮ್ ಪ್ರಾಜೆಕ್ಟ್,’ ‘ರೆಡ್ ನೋಟಿಸ್,’ ‘ದಿ ವಿಚರ್,’ ‘ಲಾಕ್ & ಕೀ’ನ ನಾಲ್ಕನೇ ಸೀಸನ್ನಲ್ಲಿ ಕಾಣಬಹುದಾಗಿದೆ. ಡೈನಾಮಿಕ್ ಹೆಡ್ ಟ್ರ್ಯಾಕಿಂಗ್‌ನೊಂದಿಗೆ ‘ಸ್ಪೇಷಲ್ ಆಡಿಯೋ’ವು ನೀವು ವೀಕ್ಷಿಸುತ್ತಿರುವ ಚಲನಚಿತ್ರ ಅಥವಾ ವಿಡಿಯೋದಿಂದ ಥಿಯೇಟರ್ ತರಹದ ಸೌಂಡ್ನ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.
Discover more from Coastal Times Kannada
Subscribe to get the latest posts sent to your email.
Discussion about this post